ತುಮಕೂರು; ಮರ ಕಡಿಯಲು ಆದೇಶಿಸಿದ ಗ್ರಾಮ ಲೆಕ್ಕಿಗ ಅಮಾನತು
ತುಮಕೂರು, ಮಾರ್ಚ್ 10 : ಗುಬ್ಬಿ ತಾಲೂಕಿನ ವಿವಾದಿತ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ, ತೆಂಗಿನ ಮರಗಳನ್ನು ಕಡಿಯಲು ಆದೇಶಿಸಿದ್ದ ಗ್ರಾಮ ಲೆಕ್ಕಿಗನನ್ನು ಅಮಾನತು ಮಾಡಲಾಗಿದೆ. 50 ತೆಂಗಿನ ಮರಗಳನ್ನು ನಾಶ ಮಾಡಿರುವ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮಂಗಳವಾರ ಅಮ್ಮನಘಟ್ಟ ವೃತ್ತದ ಗ್ರಾಮ ಲೆಕ್ಕಿಗ ಮುರಳಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಗುಬ್ಬಿ ತಹಶೀಲ್ದಾರ್ ಆದೇಶವಿದೆ ಎಂದು ಹೇಳಿದ್ದ ಮುರಳಿ ಮರಗಳನ್ನು ಕಡಿಸಿದ್ದರು.
ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ಸರ್ವೇ ನಂಬರ್ 13ರಲ್ಲಿ 5.18 ಗುಂಟೆ ಜಮೀನು ಇತ್ತು. ಇದು ಉಡಸಲಮ್ಮ ದೇವಾಲಯಕ್ಕೆ ಸೇರಿದ್ದು. ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ಈ ಜಮೀನನ್ನು ದಶಕಗಳ ಹಿಂದೆಯೇ ಉಚಿತವಾಗಿ ಸಿದ್ದಮ್ಮ, ಮುನಿ ಕೆಂಪಯ್ಯಗೆ ನೀಡಲಾಗಿತ್ತು.

ಮುನಿಕೆಂಪಯ್ಯ ಕುಟುಂಬ ಜಮೀನಿನಲ್ಲಿ ಅಡಿಕೆ, ತೆಂಗು ಬೆಳೆದಿತ್ತು. ಭೂಮೀಯ ಪೂರ್ಣ ಸ್ವಾಧೀನವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿತ್ತು. ಉಡಸಲಮ್ಮ ದೇವಾಲಯಕ್ಕೆ 6 ಜನ ಅರ್ಚಕರು ಇದ್ದಾರೆ. ಎಲ್ಲರೂ ದೇವಾಲಯಕ್ಕೆ ಸೇರಿದ ಜಾಗಕ್ಕಾಗಿ ನ್ಯಾಯಾಲಯ ಮೊರೆ ಹೋಗಿದ್ದಾರೆ.
ಈ ಜಮೀನು ವಿವಾದ ನ್ಯಾಯಾಲಯದಲ್ಲಿ ಇರುವಾಗಲೇ ಗ್ರಾಮ ಲೆಕ್ಕಿಗ ಮುರಳಿ ತಹಶೀಲ್ದಾರ್ ಆದೇಶವಿದೆ ಎಂದು ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಕಡಿಸಿದ್ದಾರೆ. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು.
ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ರೈತರ ನೂರಾರು ಅಡಕೆ ತೆಂಗಿನ ಮರಗಳನ್ನು ಒತ್ತುವರಿ ತೆರವು ಮಾಡುವ ನೆಪದಲ್ಲಿ ಕತ್ತರಿಸಿ ಹಾಕಿರುವುದು ಖಂಡನೀಯ. ರೈತರ ಬದುಕಿಗೆ ಕೊಳ್ಳಿ ಇಟ್ಟ ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು .
— H D Kumaraswamy (@hd_kumaraswamy) March 9, 2020
ಬೀದಿಗೆ ಬಿದ್ದ ರೈತರಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು.
(1/2)












Click it and Unblock the Notifications