ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನಲ್ಲಿ ಜು.27ರಂದು ಗಾಳಿಪಟ ಉತ್ಸವ

|
Google Oneindia Kannada News

ತುಮಕೂರು, ಜು. 16 : ತುಮಕೂರಿನಲ್ಲಿ ಜು.27ರಂದು 26ನೇ ವರ್ಷದ ರಾಜ್ಯಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು, ತುಮಕೂರು ಜಿಲ್ಲಾಡಳಿತ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಗಾಳಿಪಟ ಉತ್ಸವವನ್ನು ಆಯೋಜಿಸಿವೆ.

ನಾಡೋಜ ಎಚ್.ಎಲ್.ನಾಗೇಗೌಡರ ಜನ್ಮಶತಮಾನೋತ್ಸವದ ಅಂಗವಾಗಿ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು, ಜು.27ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರು ಉತ್ಸವ ಉದ್ಘಾಟಿಸಲಿದ್ದಾರೆ.

kite festival

ಶಾಸಕರಾದ ಡಾ.ರಫೀಕ್ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಲೋಕಸಭಾ ಸದಸ್ಯ ಎಸ್.ಬಿ. ಮುದ್ದಹನುಮೇಗೌಡ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ. ತಿಮ್ಮೇಗೌಡ ತಿಳಿಸಿದರು. [ಅಹಮದಾಬಾದ್ ಗಾಳಿಪಟ ಉತ್ಸವದ ಚಿತ್ರಗಳು]

ಈ ಉತ್ಸವದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 150ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಲಿದ್ದು, 12 ವರ್ಷದೊಳಗಿನ ಕಿರಿಯರ ಪ್ರಥಮ ವಿಭಾಗ, 12 ರಿಂದ 22 ವರ್ಷದೊಳಗಿನವರ ದ್ವಿತೀಯ ವಿಭಾಗ, 22 ವರ್ಷ ಮೇಲ್ಪಟ್ಟವರ ತೃತೀಯ ವಿಭಾಗ ಮತ್ತು 23 ವರ್ಷ ಮೇಲ್ಪಟ್ಟ ಹಿರಿಯರ 4ನೇ ವಿಭಾಗ ಹೀಗೆ 4 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

12 ವರ್ಷದೊಳಗಿನ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ 1 ಸಾವಿರ, ದ್ವಿತೀಯ 750 ರೂ., ತೃತೀಯ 500 ಮತ್ತು ಇಬ್ಬರಿಗೆ 200 ರೂ.ಗಳ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. 13 ರಿಂದ 22 ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ ಬಹುಮಾನ 1,500 ರೂ., ದ್ವಿತೀಯ ಬಹುಮಾನ 1,300, ತೃತೀಯ 1000 ಹಾಗೂ ಸಮಾಧಾನಕರ ಬಹುಮಾನ 300 ರೂ. ನೀಡಲಾಗುತ್ತದೆ.

22 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಬಹುಮಾನ 2 ಸಾವಿರ, ದ್ವಿತೀಯ 1,500, ತೃತೀಯ 1000 ಹಾಗೂ ಸಮಾಧಾನಕರ ಬಹುಮಾನ ರೂ. 400 ನಿಗದಿಪಡಿಸಲಾಗಿದೆ. 23 ವರ್ಷ ಮೇಲ್ಪಟ್ಟ 4ನೇ ವಿಭಾಗದಲ್ಲಿ ಪ್ರಥಮ ಬಹುಮಾನ 3 ಸಾವಿರ, ದ್ವಿತೀಯ 2,000, ತೃತೀಯ 1,500 ಹಾಗೂ ಸಮಾಧಾನಕರ ಬಹುಮಾನ ರೂ. 500 ರೂ.

4 ನೇ ವಿಭಾಗದ ಮೊದಲ ಸ್ಥಾನ ಪಡೆದವರಿಗೆ ನಾಡೋಜ ಹೆಚ್.ಎಲ್. ನಾಗೇಗೌಡ ಇವರ ಪರ್ಯಾಯ ಪಾರಿತೋಷಕ ನೀಡಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವರು ಜುಲೈ 27, 2014ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಸ್ಥಳದಲ್ಲಿಯೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.

ಸ್ಪರ್ಧಿಗಳು ಮತ್ತು ಪ್ರೇಕ್ಷಕರಿಗೆ ಉತ್ಸವಕ್ಕೆ ಪ್ರವೇಶ ಉಚಿತವಾಗಿದೆ. ಹೆಚ್ಚಿನ ಮಾಹಿತಿಗೆ 080-23605033 ಮತ್ತು ಕರ್ನಾಟಕ ಜಾನಪದ ಪರಿಷತ್ತಿನ 9900774442 ನಂಬರ್ ಗೆ ಕರೆ ಮಾಡಬಹುದಾಗಿದೆ. [ಮಾಹಿತಿ : ಕರ್ನಾಟಕ ವಾರ್ತೆ]

English summary
The 26th State-level Kite Festival-2014 organized by Karnataka Janapada Parishat, State Tourism Department in Tumkur on July 27. The competition will be held for four groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X