ಇಹಲೋಕ ತ್ಯಜಿಸಿದ ಶ್ರೀಗಳಿಗೆ ಗಣ್ಯರ ಭಾವಪೂರ್ಣ ಶ್ರದ್ಧಾಂಜಲಿ
Recommended Video

ತುಮಕೂರು, ಜನವರಿ 21: ಅಭಿನವ ಬಸವಣ್ಣ ಎಂದೇ ಖ್ಯಾತಿ ಪಡೆದ ಶ್ರೀ ಶಿವಕುಮಾರ ಸ್ವಾಮೀಜಿಗಳು ಜಾತಿ-ಮತಗಳ ವ್ಯಾಪ್ತಿಯನ್ನು ಮೀರಿ ಸೇವೆಯಲ್ಲೇ ತಮ್ಮ ಬದುಕನ್ನು ಸವೆಸಿದವರು.
ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ಅಕ್ಷರ ದಾಸೋಹ, ಅನ್ನದಾಸೋಹದ ಕೊಡುಗೆ ನೀಡಿದ ಶ್ರೀಗಳು ಸಮಾಜ ಸೇವೆಯಲ್ಲೇ ದೇವರನ್ನು ಕಂಡವರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಶಿವಕುಮಾರ ಸ್ವಾಮೀಜಿ(111) ಸೋಮವಾರ ಬೆಳಿಗ್ಗೆ 11:44 ಕ್ಕೆ ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯದ ಮೂಲೆ ಮೂಲೆಯಿಂದ ಜನರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಧಾವಿಸುತ್ತಿದ್ದಾರೆ.
ಕೆಲದಿನಗಳ ಹಿಂದೆ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸ್ವಾಮೀಜಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀಗಳ ಆರೋಗ್ಯದಲ್ಲಿ ಕಳೆದ ವಾರವೆಲ್ಲ ಕೊಂಚ ಚೇತರಿಕೆ ಕಂಡುಬಂದಿತ್ತು. ಆದರೆ ಭಾನುವಾರ ರಾತ್ರಿ ರಕ್ತದೊತ್ತಡ ಏರುಪೇರಾದ ಕಾರಣ ಮತ್ತೆ ಆರೋಗ್ಯ ಗಂಭೀರವಾಗಿತ್ತು.
ಆದರೆ ಬೆಳಗ್ಗೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದ ಕಾರಣ ಶತಾಯುಷಿ ಸಂತ ಶಿವಕುಮಾರ ಸ್ವಾಮೀಜಿ(ಏಪ್ರಿಲ್ 1, 1907-ಜನವರಿ 21, 2019) ಅವರು ಇಹಲೋಕ ತ್ಯಜಿಸಿದರು.
|
ನರೇಂದ್ರ ಮೋದಿ
ನಾನು ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆವ ಸೌಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ಅವರ ಸೇವೆಯ ವ್ಯಾಪ್ತಿ ಕಲ್ಪನೆಗೂ ನಿಲುಕದಂಥದ್ದು- ನರೇಂದ್ರ ಮೋದಿ, ಪ್ರಧಾನಿ
|
ಎಚ್ ಡಿ ಕುಮಾರಸ್ವಾಮಿ
ಭಾರತ ದೈವಿಕ ಆತ್ಮವನ್ನು ಕಳೆದುಕೊಂಡಿದೆ! ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
|
ರಾಮನಾಥ್ ಕೋವಿಂದ್
ಅಧ್ಯಾತ್ಮ ಗುರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಯ ಬಗ್ಗೆ ತಿಳಿದು ಬಹಳ ನೋವಾಯಿತು. ಸಮಾಜಕ್ಕೆ ಅವರ ಅನನ್ಯ ಕೊಡುಗೆ, ಅದರಲ್ಲೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಅವರ ಅನುಯಾಯಿಗಳಿಗೆ ನನ್ನ ಅಗಣಿತ ಸಂತಾಪಗಳು- ರಾಮನಾಥ್ ಕೋವಿಂದ್, ರಾಷ್ಟ್ರಪತಿ
| Array |
ರಾಹುಲ್ ಗಾಂಧಿ
ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆಯನ್ನು ಕೇಳಿ ನನಗೆ ತೀವ್ರ ನೋಯಾಗಿದೆ. ಸ್ವಾಮೀಜಿಯನ್ನು ಕೋಟ್ಯಂತರ ಭಾರತೀಯರು ಜಾತಿ-ಮತವೆಂದಿಲ್ಲದೆ ಗೌರವಿಸುತ್ತಿದ್ದರು. ಅವರ ಅಗಲಿಕೆಯಿಂದ ಅಧ್ಯಾತ್ಮ ಕ್ಷೇತ್ರ ಬರಿದಾಗಿದೆ. ಅವರ ಎಲ್ಲಾ ಭಕ್ತರು, ಅನಾಯಯಿಗಳಿಗೆ ತನ್ನ ಸಂತಾಪಗಳು -ರಾಹುಲ್ ಗಾಂಧಿ
|
ಅಮಿತ್ ಶಾ
ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ವಿಷಯ ತಿಳಿದು ನನಗೆ ಬಹಳ ನೋವಾಗಿದೆ. ತ್ರಿವಿಧ ದಾಸೋಹಿಯ ಜೀವನ, ಅವರ ಅಪಾರ ಜ್ಞಾನ ಲಕ್ಷಾಂತರ ಮಂದಿಯ ಬದುಕನ್ನೇ ಬದಲಿಸಿದೆ. ಶ್ರೀಗಳ ಆಶೀರ್ವಾದ ಪಡೆದಿದ್ದ ನಾನೇ ಧನ್ಯ.
|
ಬಿ ಎಸ್ ಯಡಿಯೂರಪ್ಪ
ನಡೆದಾಡುವ ದೇವರು ಶ್ರೀ ಶಿವಕುಮಾರ ಶ್ರೀಗಳು ದೈವಾಧೀನರಾಗಿದ್ದು ಅಪಾರ ನೋವು ತರಿಸಿದೆ. ಇವರ ಅಗಲಿಕೆಯಿಂದ ದೇಶವೇ ಬಡವಾಗಿದೆ. ಯಾವುದೇ ಸಂದರ್ಭದಲ್ಲೂ ಸಲಹೆ, ಸೂಚನೆ ನೀಡುತ್ತಿದ್ದ ಇವರು ದೂರವಾಗಿದ್ದು ವೈಯಕ್ತಿಕವಾಗಿ ತುಂಬಾ ನಷ್ಟವನ್ನುಂಟು ಮಾಡಿದೆ. ಶ್ರೀಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಲಕ್ಷಾಂತರ ಭಕ್ತರಿಗೆ ದೇವರು ಕರುಣಿಸಲಿ -ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
|
ಸಿದ್ದರಾಮಯ್ಯ
ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಲಿಂಗೈಕ್ಯದಿಂದ ನಾನು ಆಘಾತಕ್ಕೀಡಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದುಃಖತಪ್ತ ಮನಸ್ಸಿನಿಂದ ಪ್ರಾರ್ಥಿಸುತೇನೆ. ದುಃಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ












Click it and Unblock the Notifications