110 ರ 'ನಡೆದಾಡುವ ದೇವರಿಗೆ' ಅಭಿನಂದನಾ ಕಾರ್ಯಕ್ರಮ
ಭಕ್ತರ ಬಾಯಲ್ಲಿ ತ್ರಿವಿಧ ದಾಸೋಹಿ ಎಂದೇ ಕರೆಸಿಕೊಳ್ಳುವ ಸಿದ್ದಗಂಗಾ ಶ್ರೀಗಳು ಇಂದು 110 ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಸಿದ್ದಗಂಗಾ ಮಠದಲ್ಲಿ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತುಮಕೂರು, ಏಪ್ರಿಲ್ 1: ನಡೆದಾಡುವ ದೇವರು ಎಂದೇ ಖ್ಯಾತರಾದ ಶ್ರೀ ಶಿವಕುಮಾರ ಸ್ವಾಮೀಜಿಯವರ 110 ನೇ ಜನ್ಮದಿನದ ಪ್ರಯುಕ್ತ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಇಂದು(ಏಪ್ರಿಲ್ 1) ಅದ್ಧೂರಿ ಸಮಾರಂಭ ನಡೆಯಲಿದೆ.
ಭಕ್ತರ ಬಾಯಲ್ಲಿ ತ್ರಿವಿಧ ದಾಸೋಹಿ ಎಂದೇ ಕರೆಸಿಕೊಳ್ಳುವ ಸ್ವಾಮೀಜಿಯವರಿಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ಏರ್ಪಡಿಸಿರುವ ಕಾರ್ಯಕ್ರಮ ಇಂದು ಬೆಳಗ್ಗೆ 10:30ಕ್ಕೆ ಆರಂಭವಾಗುತ್ತಿದ್ದು, ರಾಜ್ಯಪಾಲ ವಾಜುಭಾಯಿ ವಾಲಾ ಉದ್ಘಾಟಿಸಲಿದ್ದಾರೆ.[ಲೋಕ ಜಂಗಮ: ಸಿದ್ದಗಂಗಾಶ್ರೀಗಳ ಸಮಗ್ರ ಸಾಕ್ಷ್ಯಚಿತ್ರ]

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 2:30 ರಿಂದ ತುಮಕೂರಿನಲ್ಲಿ ಶೋಭಾಯಾತ್ರೆಯನ್ನೂ ಹಮ್ಮಿಕೊಳ್ಳಲಾಗಿದೆ. ನೆರೆಯಲಿರುವ ಲಕ್ಷಾಂತರ ಜನರಿಗೆ ಮಠದ ಆವರಣದಲ್ಲೇ ಏಳು ಕಡೆಗಳಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.












Click it and Unblock the Notifications