ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಚಾರ ಸಭೆಯಿಂದ ವಾಪಸ್; ಪ್ರಜ್ವಲ್ ರೇವಣ್ಣ ಸ್ಪಷ್ಟನೆ

|
Google Oneindia Kannada News

ತುಮಕೂರು, ನವೆಂಬರ್ 02: ಜೆಡಿಎಸ್ ನಾಯಕ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಶಿರಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ, ಭಾನುವಾರ ಅವರು ಬಹಿರಂಗ ಸಮಾವೇಶದಿಂದ ಅರ್ಧಕ್ಕೆ ವಾಪಸ್ ಆಗಿದ್ದು ಚರ್ಚೆಗೆ ಕಾರಣವಾಗಿತ್ತು.

ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಶಿರಾದಲ್ಲಿ ಜೆಡಿಎಸ್‌ನ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಶಿರಾ ಚುನಾವಣೆ; ಪ್ರಚಾರದಿಂದ ಸಚಿವ ಮಾಧುಸ್ವಾಮಿ ದೂರ! ಶಿರಾ ಚುನಾವಣೆ; ಪ್ರಚಾರದಿಂದ ಸಚಿವ ಮಾಧುಸ್ವಾಮಿ ದೂರ!

ಆದರೆ, ಈ ಸಮಾವೇಶ ಮುಗಿಯುವ ಮೊದಲೇ ಪ್ರಜ್ವಲ್ ರೇವಣ್ಣ ವೇದಿಕೆಯಿಂದ ನಿರ್ಗಮಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ಚರ್ಚೆಗಳು ಆರಂಭವಾಗಿದ್ದವು. ಅಸಮಾಧಾನದಿಂದಾಗಿ ನಿರ್ಗಮಿಸಿದರು ಎಂಬ ವರದಿಗಳು ಬಂದವು.

ಶಿರಾ ಚುನಾವಣೆ; ಕುಸಿದು ಬಿದ್ದ ಅಮ್ಮಾಜಮ್ಮ ಆಸ್ಪತ್ರೆಗೆ ದಾಖಲು ಶಿರಾ ಚುನಾವಣೆ; ಕುಸಿದು ಬಿದ್ದ ಅಮ್ಮಾಜಮ್ಮ ಆಸ್ಪತ್ರೆಗೆ ದಾಖಲು

ಸೋಮವಾರ ಫೇಸ್ ಬುಕ್ ಪೋಸ್ಟ್ ಮೂಲಕ ಪ್ರಜ್ವಲ್ ರೇವಣ್ಣ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. "ಕಾರ್ಯಕರ್ತರು ಮಾಧ್ಯಮಗಳ ಕಪೋಲಕಲ್ಪಿತ ಸುದ್ದಿಗಳಿಗೆ ಕಿವಿಗೊಟ್ಟು ಗೊಂದಲಕ್ಕೆ ಒಳಗಾಗದೆ ಯಶಸ್ವಿಯಾಗಿ ಚುನಾವಣೆ ನಡೆಸಿ" ಎಂದು ಕರೆ ನೀಡಿದ್ದಾರೆ.

ಶಿರಾದಲ್ಲಿ ವಿಜಯೇಂದ್ರ ತಂತ್ರ; ಗೌಡರ ಕೈ ಸೇರಿದ ವರದಿ ಶಿರಾದಲ್ಲಿ ವಿಜಯೇಂದ್ರ ತಂತ್ರ; ಗೌಡರ ಕೈ ಸೇರಿದ ವರದಿ

ಕಪೋಲಕಲ್ಪಿತ ವರದಿಗಳು

ಕಪೋಲಕಲ್ಪಿತ ವರದಿಗಳು

"ಪ್ರಜ್ವಲ್ ರೇವಣ್ಣ ಅವರು ಅಸಮಾಧಾನಿತರಾಗಿ ವೇದಿಕೆಯಿಂದ ನಿರ್ಗಮಿಸಿದರು ಎನ್ನುವ ವರದಿಗಳನ್ನು ಕೆಲವು ಮಾಧ್ಯಮಗಳು ನೆನ್ನೆಯ ದಿನ ಬಿತ್ತರಿಸಿದ್ದು ನನ್ನ ಗಮನಕ್ಕೆ ಬಂದಿದೆ. ಮಾಧ್ಯಮಗಳ ಈ ವರದಿಗಳು ಕೇವಲ ಕಪೋಲಕಲ್ಪಿತ" ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

ಪ್ರಚಾರ ಸಭೆಗಳು ಬಾಕಿ ಇತ್ತು

ಪ್ರಚಾರ ಸಭೆಗಳು ಬಾಕಿ ಇತ್ತು

"ನಿನ್ನೆಯ ದಿನ ಜೆಡಿಎಸ್ ಪಕ್ಷದ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು. ಶಿರಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ನನ್ನನ್ನು ಎರಡು ಹೋಬಳಿಯ ಪ್ರಚಾರದ ಉಸ್ತುವಾರಿಯನ್ನಾಗಿ ಪಕ್ಷ ನೇಮಿಸಿತ್ತು. ಬಹುತೇಕ ಗ್ರಾಮಗಳ ಪ್ರಚಾರವನ್ನು ಯಶಸ್ವಿಯಾಗಿ ಮುಗಿಸಿ ಕೇವಲ ಇನ್ನೆರಡು ಗ್ರಾಮಗಳ ಪ್ರಚಾರದ ಸಭೆ ಬಾಕಿ ಉಳಿದಿತ್ತು" ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಪ್ರಚಾರವನ್ನು ಪೂರ್ಣಗೊಳಿಸಿದೆ

ಪ್ರಚಾರವನ್ನು ಪೂರ್ಣಗೊಳಿಸಿದೆ

"ಈ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ನನ್ನ ಬರುವಿಕೆಗಾಗಿ ಕಾಯುತ್ತಿದ್ದರು ಹಾಗಾಗಿ ನಾನು ಆ ಪ್ರಚಾರ ಸಭೆಗೆ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ದೇವೇಗೌಡ್ರು ಹಾಗೂ ಕುಮಾರಣ್ಣನಿಗೆ ಮಾಹಿತಿ ನೀಡಿ ವೇದಿಕೆಯಿಂದ ನಿರ್ಗಮಿಸಿ,ಎರಡೂ ಗ್ರಾಮಗಳಿಗೆ ತೆರಳಿ ಪ್ರಚಾರ ಮುಗಿಸಿ ಪಕ್ಷ ನನಗೆ ನೀಡಿದ್ದ ಜವಾಬ್ದಾರಿಯನ್ನು ಪೂರ್ಣಗೊಳಿಸಿದೆ" ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ

ಯಶಸ್ವಿಯಾಗಿ ಚುನಾವಣೆ ನಡೆಸಿ

ಯಶಸ್ವಿಯಾಗಿ ಚುನಾವಣೆ ನಡೆಸಿ

"ಕಾರ್ಯಕರ್ತರು ಮಾಧ್ಯಮಗಳ ಕಪೋಲಕಲ್ಪಿತ ಸುದ್ದಿಗಳಿಗೆ ಕಿವಿಗೊಟ್ಟು ಗೊಂದಲಕ್ಕೆ ಒಳಗಾಗದೆ ಯಶಸ್ವಿಯಾಗಿ ಚುನಾವಣೆ ನಡೆಸಿ" ಎಂದು ಪ್ರಜ್ವಲ್ ರೇವಣ್ಣ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

English summary
Hassan MP and JD(S) leader Prajwal Revanna get down from the stage in Sira party rally. Why he leaved early here are the clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X