ತುಮಕೂರು, ಮಾರ್ಚ್ 04: 'ಅನಿವಾರ್ಯ ಕಾರಣಗಳಿಂದ ನಾನು ಇಂದು ನಿಮ್ಮ ಜತೆ ಅಲ್ಲಿ ಇರಲಾಗುತ್ತಿಲ್ಲ. ತಂತ್ರಜ್ಞಾನದ ಮೂಲಕ ನಿಮ್ಮ ಜತೆಗೆ ಮಾತನಾಡುತ್ತಿದ್ದೇನೆ.
ಯುವ ಜನಾಂಗದ ಜತೆ ಯಾವುದೇ ರೀತಿಯಲ್ಲಿ ಮಾತನಾಡುವುದು ಸಂಭ್ರಮದ ಕ್ಷಣ, ಹೊಸ ಹೊಸ ವಿಷಯಗಳನ್ನು ಕಲಿಯುವುದು ಸಾಕಷ್ಟಿರುತ್ತದೆ' ಎಂದು ಪ್ರಧಾನಿ ಮೋದಿ ಅವರು ವಿಡಿಯೋ ಭಾಷಣದಲ್ಲಿ ಹೇಳಿದರು.
 
ರಾಮಕೃಷ್ಣ, ಶ್ರೀಶಾರದಾ ಮಾತೆ, ಸ್ವಾಮಿ ವಿವೇಕಾನಂದರ ತ್ರಿವೇಣಿ ಸಂಗಮವನ್ನು ಇಲ್ಲಿ ಕಾಣಬಹುದು. ಸಿದ್ದಗಂಗಾ ಮಠ, ಬಸವಣ್ಣರ ನಾಡಿನಲ್ಲಿ ಯುವ ಜನಾಂಗಕ್ಕೆ ಸಾಕಷ್ಟು ಮಾರ್ಗದರ್ಶಿಗಳು ಇದ್ದಾರೆ. ಆಧ್ಯಾತ್ಮ, ಸನ್ಮಾರ್ಗದಲ್ಲಿ ನಡೆಯಬೇಕಿದೆ ಎಂದರು.
Mar 4, 2018 1:00 PM
ನರೇಂದ್ರ ಮೋದಿ ಅಪ್ಲಿಕೇಷನ್ ನಲ್ಲಿ ನನ್ನ ಈ ಭಾಷಣದ ಮುಖ್ಯಾಂಶವನ್ನು ಕನ್ನಡದಲ್ಲಿ ನೀಡುವಂತೆ ನನ್ನ ತಂಡಕ್ಕೆ ಕೇಳುತ್ತೇನೆ.
Mar 4, 2018 1:00 PM
ಶಿವಕುಮಾರ ಸ್ವಾಮೀಜಿಗಳ ಜತೆ ಕಳೆದ ಕ್ಷಣಗಳನ್ನು ಮರೆತ್ತಿಲ್ಲ. ಅವರು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದಾರೆ. ನೆರದಿರುವ ಎಲ್ಲಾ ಪೂಜ್ಯ ಸ್ವಾಮೀಜಗಳಿಗೆ ನನ್ನ ಪ್ರಮಾಣಗಳು
ನಾನು ಇಂದು ಮಾತನಾಡಿದ ಕೆಲ ಕನ್ನಡ ವಾಕ್ಯಗಳನ್ನು ಕೇಳಿ ಆನಂದಿಸಿದ್ದೀರಿ. ಮೋದಿ ಅವರ ಮಾತಿನಲ್ಲಿ ವ್ಯಾಕರಣ ಸರಿಯಿತ್ತೇ? ಭಾಷಾ ಶೈಲಿ ಇತ್ತೇ? ಎಂಬುದನ್ನು ನೀವು ನೋಡುವುದಿಲ್ಲ. ನಮ್ಮ ಭಾಷೆಯಲ್ಲಿ ಮಾತನಾಡಿದರು ಎಂದು ಭಾವನಾತ್ಮಕವಾಗಿ ಒಂದಾಗುತ್ತಿರಿ.
Mar 4, 2018 12:54 PM
ವಿದ್ಯಾರ್ಥಿ ದೆಸೆಯಲ್ಲಿ ಫ್ರೆಂಚ್, ಸ್ಪಾನೀಷ್ ಹೀಗೆ ಅನೇಕ ಭಾಷೆಗಳನ್ನು ಕಲಿಯುವ ಆಸೆ ಇರುತ್ತದೆ. ಇದರ ಜತೆಗೆ ನಮ್ಮ ದೇಶದಲ್ಲಿ ಸಾವಿರಾರು ಭಾಷೆ, ನುಡಿಗಟ್ಟುಗಳಿವೆ. ನಿಮ್ಮ ಇಷ್ಟ ಭಾಷೆ ಕಲಿತು, ಬೆಳೆಸಿರಿ
Mar 4, 2018 12:53 PM
ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂಬುದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕನಸು, ಭಾರತದ ಐಕ್ಯತೆಗಾಗಿ ಶ್ರಮಿಸಿದವರ ಕನಸು ನನಸಾಗಿಸೋಣ.
Mar 4, 2018 12:48 PM
ವಿದ್ಯಾರ್ಥಿ ದೇವೋಭವ ಎಂಬ ಮಂತ್ರವನ್ನು ನಂಬಿರುವ ಸರ್ಕಾರ, ಯುವಶಕ್ತಿ ದೇವೋಭವ ಎಂಬ ನಂಬಿಕೆ ಇರಿಸಿಕೊಂಡಿದೆ.
Mar 4, 2018 12:48 PM
ಖೇಲೋ ಇಂಡಿಯಾ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದ ಮೋದಿ, ಶಿಷ್ಯರನ್ನು ಕೈ ಹಿಡಿದು ನಡೆಸುವ ಕಾರ್ಯವನ್ನು ಗುರುಗಳು ಮಾಡುತ್ತಾರೆ. ಭಾರತದಲ್ಲಿನ ದೇಶಿ ಕ್ರೀಡೆಗಳಾದ ಕಬಡ್ಡಿ, ಖೋ ಖೋಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲು ಗುರುಗಳ ಪರಿಶ್ರಮವಿದೆ.
Mar 4, 2018 12:45 PM
ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಅನೇಕ ಯೋಜನೆಗಳು ಕರ್ನಾಟಕದ ಯುವ ಪ್ರತಿಭೆಗೂ ತಲುಪುತ್ತಿದೆ.
Mar 4, 2018 12:44 PM
ದೇಶದಲ್ಲಿ 20 ಅತ್ಯಾಧುನಿಕ ನವನವೀನ ಕೌಶಲ್ಯ ವಿದ್ಯಾಸಂಸ್ಥೆ ನಿರ್ಮಾಣಕ್ಕೆ ಸರ್ಕಾರ ಸಂಕಲ್ಪ ಕೈಗೊಂಡಿದೆ.
Mar 4, 2018 12:40 PM
ಯುವಶಕ್ತಿಯ ಕೌಶಲ್ಯ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಯಿತು.
Mar 4, 2018 12:40 PM
ಯವಶಕ್ತಿ ದೇಶದ ಭಾಗ್ಯ ಬದಲಾಯಿಸಬಲ್ಲದು, ಹೀಗಾಗಿ, ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಬಳಸಲು ಸರ್ಕಾರ ಸಾಕಷ್ಟು ಯೋಜನೆ ಹಾಕಿಕೊಂಡಿದೆ.
Mar 4, 2018 12:40 PM
ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು, ಗುರಿ ಸಾಧಿಸಲು ನಿಮ್ಮ ಏಕಾಗ್ರತೆ, ಸಮಯ ಎಲ್ಲವೂ ಗುರಿ ಸಾಧನೆಗೆ ಮುಡಿಪಿಡಿ ಎಂದು ಸ್ವಾಮಿ ವಿವೇಕಾನಾಂದ ಹೇಳಿದ್ದಾರೆ.
Mar 4, 2018 12:34 PM
ದ್ವೇಷ ರಾಜಕಾರಣ ಬಿಟ್ಟು, ಐಕ್ಯತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಲ್ಲಿನ ಮತದಾರರು ಸಾಬೀತು ಮಾಡಿದ್ದಾರೆ
Mar 4, 2018 12:33 PM
ತ್ರಿಪುರಾದ ಆದಿವಾಸಿಗಳು, ಈಶಾನ್ಯದ ಬುಡಕಟ್ಟು ಜನಾಂಗದವರು ಮುಖ್ಯ ವಾಹಿನಿಗೆ ಕರೆ ತಂದು ಅವರ ಸಬಲಗೊಳಿಸಲು ಯುವ ಜನಾಂಗದ ನೆರವು ಸಿಕ್ಕಿತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more