• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಮಕೂರಿಗೆ ಮೋದಿ ಆಗಮನ: ಪೊಲೀಸ್ ಬಿಗಿ ಭದ್ರತೆ

|

ತುಮಕೂರು, ಜನವರಿ 02: ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿಗೆ ಆಗಮಿಸಿದ್ದು, ಎಲ್ಲಾ ಕಡೆ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ತುಮಕೂರು ವಿವಿ ಹೆಲಿಪ್ಯಾಡ್ ನಿಂದ ಸಿದ್ದಗಂಗಾ ಮಠಕ್ಕೆ ಹೊಗುತ್ತಾರೆ.

ತುಮಕೂರಿನ ಜೂನಿಯರ್ ವಿವಿ ಕಾಲೇಜು ಮೈದಾನದಲ್ಲಿ ರೈತ ಸಮಾವೇಶ ನಡೆಯಲಿದ್ದು ವಿಶೇಷ ಭದ್ರತಾ ಪಡೆ (ಏಸ್ಪಿಜಿ) ಕೊನೆ ಹಂತದ ಭದ್ರತಾ ಪರಿಶೀಲನೆ ಮಾಡಿದೆ. ಕರ್ನಾಟಕ ಪೊಲೀಸರನ್ನೂ ಎಸ್ಪಿಜಿ ತಂಡದವರು ಚೆಕ್ ಮಾಡಿ ಒಳಗೆ ಕಳುಹಿಸುತ್ತಿದ್ದಾರೆ.

PM Modi in Karnataka Live Updates: ಸಿದ್ದಗಂಗಾ ಶ್ರೀಗಳ ಗದ್ದುಗೆ ದರ್ಶನ ಪಡೆದ ಮೋದಿ

ಪೊಲೀಸರ ಮೊಬೈಲ್ ಫೋನ್, ಪರ್ಸ್ ಚೆಕ್ ಮಾಡಿ ಒಳಗೆ ಬಿಡುತ್ತಿದ್ದಾರೆ. ವೇದಿಕೆ ಸಿಬ್ಬಂದಿ, ಸಹಾಯಕರು ಮತ್ತು ಮಾಧ್ಯಮದವರನ್ನು ಪರಿಶೀಲನೆ ಕಳುಹಿಸುತ್ತಿದ್ದಾರೆ.

ಸಮಾವೇಶಕ್ಕೆ ಬರುವ ಸಾರ್ವಜನಿಕರಿಗೂ ಕೆಲವು ವಸ್ತುಗಳನ್ನು ತರದಂತೆ ನಿಷೇಧ ಹೇರಿದೆ. ಕಪ್ಪು ವಸ್ತ್ರಗಳು, ವಾಟರ್ ಬಾಟಲ್, ಸಾಕ್ಸ್, ಖರ್ಚೀಫ್, ಬನಿಯನ್ ನಿಷೇಧಿಸಲಾಗಿದೆ. ಕಪ್ಪು ಬಟ್ಟೆ ಹಾಕಿರುವವರಿಗೆ ಸಮಾವೇಶಕ್ಕೆ ನೋ ಎಂಟ್ರಿ.

ಪ್ರಧಾನಿ ಮೋದಿ ಅವರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಶ್ರೀಗಳ ಗದ್ದುಗೆಗೆ ನಮಿಸಲಿದ್ದಾರೆ. ಸವಿನೆನಪಿಗಾಗಿ ಶ್ರೀ ಮಠದ ವತಿಯಿಂದ ಪರಮಪೂಜ್ಯರ ಬೆಳ್ಳಿ ಪುತ್ಥಳಿಯನ್ನು ನೀಡಲಾಗುತ್ತಿದೆ.

English summary
Prime Minister Narendra Modi arrival in Tumkur has been tightened with police security on all sides. From Tumkur University Helipad to Siddaganga Mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X