ಶಿವಕುಮಾರ ಸ್ವಾಮೀಜಿಯನ್ನು ನೆನೆದ ಸಚಿವ ಜೆಸಿ ಮಾಧುಸ್ವಾಮಿ
ತುಮಕೂರು, ಆಗಸ್ಟ್ 20: "ಶಿವಕುಮಾರ ಶ್ರೀಗಳು ಇಲ್ಲದಿರುವುದು ಬಹಳ ಕಾಡುತ್ತಿದೆ. ಅವರ ಆಶೀರ್ವಾದದಿಂದ ಬೆಳೆದವರು ನಾವು" ಎಂದು ಡಾ. ಶಿವಕುಮಾರ ಸ್ವಾಮೀಜಿಯನ್ನು ನೆನೆದರು ಜೆ. ಸಿ. ಮಾಧುಸ್ವಾಮಿ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಂಗಳವಾರ ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ಸಮರ್ಪಕವಾಗಿ ಹರಿಸುವ ಕನಸಿದೆ. ಎತ್ತಿನಹೊಳೆ ಯೋಜನೆ ನೀರನ್ನೂ ಸಮರ್ಪಕವಾಗಿ ಉಪಯೋಗಿಸಬೇಕು. ಲೋಕಸಭೆ ಚುನಾವಣೆಯ ವೇಳೆ ನೀರಾವರಿ ಬಗ್ಗೆ ಆಶ್ವಾಸನೆ ನೀಡಿದ್ದೇವೆ. ಆ ಭರವಸೆ ಈಡೇರಿಸಲು ಹೆಚ್ಚಿನ ಆಸ್ಥೆ ವಹಿಸುವುದಾಗಿ ಹೇಳಿದರು.
ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಕೆಲವರಿಗೆ ಅಸಮಾಧಾನ ಆಗಿರುವುದು ಸಹಜ. ಮುಂದೆ ಎಲ್ಲವೂ ಸರಿಹೋಗಲಿದೆ. ಈ ವಿಚಾರವಾಗಿ ಯಾರೂ ಅಷ್ಟು ತೀಕ್ಷ್ಣವಾಗಿ ಅಸಮಾಧಾನಗೊಂಡಿಲ್ಲ. ಕೆಲವರಿಂದ ಪಕ್ಷವು ಪ್ರಯೋಜನ ತೆಗೆದುಕೊಂಡಿದೆ. ಅಂಥವರಿಗೆ ನಿಗಮ- ಮಂಡಳಿ ಜವಾಬ್ದಾರಿ ಕೊಡಬಹುದು ಎಂದು ಹೇಳಿದರು.

ಇನ್ನು ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದ ಮಾಧುಸ್ವಾಮಿ, ಗ್ರಾಮೀಣ ಜನರಿಗೆ ಹತ್ತಿತವಾಗುವಂತಹ ಖಾತೆ ಕೇಳಿದ್ದೇನೆ. ಮುಖ್ಯಮಂತ್ರಿಗಳು ಯಾವ ಖಾತೆ ಕೊಡುತ್ತಾರೆ ಗೊತ್ತಿಲ್ಲ ಎಂದು ಸಹ ಹೇಳಿದರು.












Click it and Unblock the Notifications