• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದ್ಕಾಲ್ದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದೋರ ಗತಿ ನೋಡಿ: ರಾಜಣ್ಣ ಗೇಲಿ

|

ತುಮಕೂರು, ಡಿಸೆಂಬರ್ 16: ಉಪ ಮುಖ್ಯಮಂತ್ರಿಯಾಗಿದ್ದಾಗ ಝೀರೋ ಟ್ರಾಫಿಕ್‌ನಲ್ಲಿ ಸಂಚರಿಸುತ್ತಿದ್ದ ಜಿ ಪರಮೇಶ್ವರ ಅವರ ವಿರುದ್ಧ ಕಾಂಗ್ರೆಸ್‌ ಮಾಜಿ ಶಾಸಕ ಕೆಎನ್ ರಾಜಣ್ಣ ಗೇಲಿ ಮಾಡಿದ್ದಾರೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಹಿಂದೂ ಮುಂದೂ ಪೊಲೀಸರನ್ನು ಇಟ್ಟಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದ. ಈಗ ಅಧಿಕಾರ ಇಲ್ಲ ಪರಿಸ್ಥಿತಿ ಹೇಗಾಗಿದೆ ನೋಡಿ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.

 ಪರಮೇಶ್ವರ್‌ಗೆ ಉಪಕಾರ ಸ್ಮರಣೆ ಇಲ್ಲ

ಪರಮೇಶ್ವರ್‌ಗೆ ಉಪಕಾರ ಸ್ಮರಣೆ ಇಲ್ಲ

ಅವರು ಹಾಗೂ ನಾನು ಸಹಪಾಠಿಗಳು, ಒಂದೇ ಬೇಂಚಲ್ಲಿ ಕುಳಿತು ಕಲಿತವರು. ಅದೇ ಕಾರಣದಿಂದ ಅವರ ಗೆಲುವಿಗೆ ಸಹಾಯ ಮಾಡಿದೆ. ಆದರೆ ಸಹಾಯಕ ಮಾಡಿದ್ದಕ್ಕೆ ಒಂದಿಷ್ಟೂ ಉಪಕಾರ ಸ್ಮರಣೆ ಎನ್ನುವುದಿಲ್ಲ. ನಾನು ಅಧ್ಯಕ್ಷನಾಗಿದ್ದ ಡಿಸಿಸಿ ಬ್ಯಾಂಕನ್ನು ಸೂಪರ್ ಸೀಡ್ ಮಾಡುವ ಮೂಲಕ ನನ್ನ ಅಧಿಕಾರ ಕಿತ್ತುಕೊಳ್ಳುವ ಪಿತೂರಿ ಮಾಡಿದ್ದ ಎಂದು ಪರಮೇಶ್ವರ ಅವರ ಹೆಸರನ್ನು ಬಳಸದೆ ವಾಗ್ದಾಳಿ ನಡೆಸಿದ್ದಾರೆ.

ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!

 ಕಷ್ಟದಲ್ಲಿದ್ದಾಗ ಶಾಸಕನನ್ನಾಗಿ ಮಾಡಿದ್ದು ನಾನು

ಕಷ್ಟದಲ್ಲಿದ್ದಾಗ ಶಾಸಕನನ್ನಾಗಿ ಮಾಡಿದ್ದು ನಾನು

ಪರಮೇಶ್ವರ ಅವರು ಕಷ್ಟದಲ್ಲಿದ್ದಾಗ ಸಹಾಯ ಮಾಡಿ ಶಾಸಕನನ್ನಾಗಿ ಮಾಡಿದ್ದು ನಾನು. ಅವರು ಗೆದ್ದು ಶಾಸಕನಾಗಿ ಡಿಸಿಎಂ ಆದರು. ಹಿಂದೂ ಮುಂದೂ ಪೊಲೀಸರನ್ನು ಇಟ್ಟಕೊಂಡು ಝೀರೋ ಟ್ರಾಫಿಕಲ್ಲಿ ತಿರುಗಾಡಿದರು. ಈಗ ಅಧಿಕಾರವೂ ಇಲ್ಲ ಪೊಲೀಸರೂ ಇಲ್ಲ ಎಂದಿದ್ದಾರೆ.

 ಕಾಂಗ್ರೆಸ್ ನಾಯಕರು ಲೂಟಿಕೋರರು

ಕಾಂಗ್ರೆಸ್ ನಾಯಕರು ಲೂಟಿಕೋರರು

ಕಾಂಗ್ರೆಸ್ ನಾಯಕರನ್ನು ಲೂಟಿಕೋರರು, ಈ ಎಲ್ಲಾ ಲೂಟಿಕೋರರು ಸಿದ್ದರಾಮಯ್ಯರಿಗೆ ಹೆಸರು ಬರುತ್ತದೆ ಎಂದು ಅವರ ಅನ್ನಭಾಗ್ಯ ಯೋಜನೆಯನ್ನು ಹೆಚ್ಚಾಗಿ ಪ್ರಚಾರ ಮಾಡಿಲ್ಲ ಎಂದು ಆರೋಪಿಸಿದರು.

 ಝೀರೋ ಟ್ರಾಫಿಕ್ ಮತ್ತು ಪರಮೇಶ್ವರ

ಝೀರೋ ಟ್ರಾಫಿಕ್ ಮತ್ತು ಪರಮೇಶ್ವರ

ಉಪಮುಖ್ಯಮಂತ್ರಿಗಳಾಗಿದ್ದಾಗ ಡಾ. ಜಿ ಪರಮೇಶ್ವರ ಬೆಂಗಳೂರು ನಗರದಲ್ಲಿ ತಾವು ಸಂಚರಿಸಲು ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯವನ್ನು ಪಡೆದುಕೊಂಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಕ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯದಲ್ಲಿ ನಗರದಲ್ಲಿ ಸಂಚಾರ ಮಾಡಿದ್ದರು, ಇದರಿಂದ ಮಳೆಯ ಹೊರತಾಗಿಯೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಕೇಳಿಬಂದಿತ್ತು.

English summary
Congress Former Minister KN Rajanna Polemic Against Former Deputy Chief Minister G Parameshwara About Zero Traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X