ಚುನಾವಣಾ ಪ್ರಚಾರದ ಎಫೆಕ್ಟ್: ತುಮಕೂರು ಕೆಎಸ್‌ಆರ್‌ಟಿಸಿಯ ದಿನದ ಆದಾಯವೆಷ್ಟು ತಿಳಿಯಿರಿ

ಕೆಎಸ್‌ಆರ್‌ಟಿಸಿ ತುಮಕೂರು ಘಟಕದ ಆದಾಯ ಬರೋಬ್ಬರಿ ಕೋಟಿಗೆ ಏರಿಕೆಯಾಗಿದೆ. ಪ್ರತಿ ಸೋಮವಾರ ಘಟಕದಲ್ಲಿ ಶುಭ ಸೋಮವಾರವಾಗುತ್ತಿದೆ.

ತುಮಕೂರು, ಫೆಬ್ರವರಿ. 08: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಕಾರ್ಯಕರ್ತರನ್ನು ಎಲ್ಲಾ ಸಮಾರಂಭಗಳಿಗೆ ಕರೆದುಕೊಂಡು ಹೋಗಿ ಶಕ್ತಿ ಪ್ರದರ್ಶನ ಮಾಡುತ್ತಿವೆ.

ಈ ಚುನಾವಣೆಗಳಿಂದ ರಾಜಕೀಯ ನಾಯಕರಿಗೆ, ಕಾರ್ಯಕರ್ತರಿಗೆ, ಜನರಿಗೆ ಎಷ್ಟು ಉಪಯೋಗವಾಗುತ್ತದೋ ಇಲ್ಲವೋ ಆದರೆ ರಾಜ್ಯ ಕೆಎಸ್‌ಆರ್‌ಟಿಸಿಗೆ ಮಾತ್ರ ಭರ್ಜರಿ ಲಾಭವಾಗುತ್ತಿದೆ. ಕೆಎಸ್‌ಆರ್‌ಟಿಸಿ ಘಟಕಗಳಲ್ಲಿ ಆದಾಯ ಹೆಚ್ಚಳವಾಗುತ್ತಿದೆ.

ಕೆಎಸ್‌ಆರ್‌ಟಿಸಿ ತುಮಕೂರು ಘಟಕದ ಆದಾಯ ಬರೋಬ್ಬರಿ ಕೋಟಿಗೆ ಏರಿಕೆಯಾಗಿದೆ. ಪ್ರತಿ ಸೋಮವಾರ ಘಟಕದಲ್ಲಿ ಶುಭ ಸೋಮವಾರವಾಗುತ್ತಿದೆ.

Karnataka Assembly Elections 2023: Tumakuru KSRTC Income Crosses Crores

ಚುನಾವಣಾ ಕಣವಾಗುತ್ತಿರುವ ಜಿಲ್ಲೆಯಲ್ಲಿ ಪ್ರತಿ ದಿನ ಒಂದಲ್ಲ ಒಂದು ರಾಜಕೀಯ ಪಕ್ಷಗಳ ಕಾರ್ಯಕ್ರಮವಿದ್ದು, ಜನರನ್ನು ಕರೆದುಕೊಂಡು ಹೋಗಲಾಗುತ್ತಿದೆ. ಇದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಒದಗಿಸುತ್ತಿದ್ದು, ಲಾಭದಲ್ಲಿದೆ. 2022ರ ಅಕ್ಟೋಬರ್ ತಿಂಗಳಿನಿಂದಲೂ ಬಹುತೇಕ ಎಲ್ಲಾ ಸೋಮವಾರಗಳಲ್ಲಿಯೂ ತುಮಕೂರು ಘಟಕದ ಆದಾಯ ಒಂದು ಕೋಟಿ ರೂಪಾಯಿ ದಾಟಿದೆ.

ಸಾಮಾನ್ಯವಾಗಿ ಸೋಮವಾರಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇದರ ಜೊತೆಗೆ ರಾಜಕೀಯ ಸಮಾವೇಶಗಳು ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ಬಿರುಸಿನಿಂದ ನಡೆಯುತ್ತಿದೆ. ಒಂದಲ್ಲ ಒಂದು ಕಡೆ ಸಮಾವೇಶ, ಪ್ರಚಾರ, ಮೆರವಣಿಗೆ ನಡೆಯುತ್ತಿದ್ದು, ಜನರನ್ನು ಕರೆತರಲು ಬಸ್‌ಗಳನ್ನು ಬಳಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಒಪ್ಪಂದದ ಮೇರೆಗೆ ಬಸ್‌ಗಳನ್ನು ಒದಗಿಸಿ ಆದಾಯ ಪಡೆಯುತ್ತಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತುಮಕೂರು ಜಿಲ್ಲೆಗೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ತುಮಕೂರಿನ ಗುಬ್ಬಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಹೆಲಿಕಾಪ್ಟರ್ ಕಾರ್ಖಾನೆಯನ್ನು ಉದ್ಘಾಟಿಸಿದರು. ಜೊತೆಗೆ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಅನ್ನು ಅನಾವರಣಗೊಳಿಸಿದರು. ಅವರ ಕಾರ್ಯಕ್ರಮಕ್ಕೆ 300 ಬಸ್‌ಗಳನ್ನು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಅಂದು ಕೂಡ ಘಟಕದ ಆದಾಯ ಒಂದು ಕೋಟಿ ದಾಟಿದೆ.

Karnataka Assembly Elections 2023: Tumakuru KSRTC Income Crosses Crores

ಒಪ್ಪಂದದ ಮೇಲೆ ಬಸ್‌ಗಳನ್ನು ಕಳುಹಿಸಿದರೆ ಕೆಎಸ್‌ಆರ್‌ಟಿಸಿಗೆ ಲಾಭ ಜಾಸ್ತಿ. ಏಕೆಂದರೆ ರಾಜಕೀಯ ಸಮಾವೇಶ, ಪ್ರವಾಸದಂತ ಒಪ್ಪಂದಗಳಲ್ಲಿ ಜನರನ್ನು ಅಲ್ಲಿಒಗೆ ಬಿಡುವುದು, ಕರೆತರುವ ಕೆಲಸ ಮಾತ್ರವೇ ಇರುವ ಕಾರಣ ಇಂಧನ ಬಳಕೆ ಕಡಿಮೆಯಾಗುತ್ತದೆ. ಹೀಗಾಗಿ ಸದ್ಯ ಘಟಕದಲ್ಲಿರುವ ಎಲ್ಲಾ ವಾಹನಗಳನ್ನು ಸುಸ್ತಿಯಲ್ಲಿಟ್ಟುಕೊಂಡು, ಸಿಬ್ಬಂದಿಯನ್ನು ಸರಿಯಾಗಿ ಬಳಸಿಕೊಳ್ಳಲಾಗುತ್ತಿದೆ.

2022ರ ಅಕ್ಟೋಬರ್ ತಿಂಗಳಿನಿಂದಲೂ ಬಹುತೇಕ ಎಲ್ಲಾ ಸೋಮವಾರಗಳಲ್ಲಿಯೂ ಒಂದು ಕೋಟಿಗಿಂತ ಹೆಚ್ಚು ಆದಾಯ ದಾಖಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಎರಡು ಸೋಮವಾರಗಳು, ನವೆಂಬರ್ ತಿಂಗಳಿನಲ್ಲಿ ಮುರು ಸೋಮವಾರ, ಡಿಸೆಂಬರ್ ತಿಂಗಳ ಎಲ್ಲಾ ಸೋಮವಾರಗಳು ಮತ್ತು ಜನವರಿಯ ಎಲ್ಲಾ ಸೋಮವಾರಗಳಲ್ಲಿಯೂ ಕೋಟಿ ರೂಪಾಯಿ ಆದಾಯ ಬಂದಿದೆ. ಫೆಬ್ರವರಿ ತಿಂಗಳ ಮೊದಲ ಸೋಮವಾರವು ಒಂದು ಕೋಟಿ ಆದಾಯ ದಾಟಿರುವುದು ಘಟಕದ ಸಿಬ್ಬಂದಿಗೆ ಖುಷಿ ನೀಡಿದೆ.

ಒಟ್ಟಾರೆ, ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ, ಕಾರ್ಯಕ್ರಮಗಳು, ಸಮಾವೇಶದಿಂದ ಓಟು ಬೀಳುತ್ತದೋ ಇಲ್ಲವೋ, ಸರ್ಕಾರದ ಬೊಕ್ಕಸ ತುಂಬುತ್ತಿರುವುದು ಮುಂಬರುವ ವಿಧಾನಸಭಾ ಚುನಾವಣೆಯ ಮತ್ತೊಂದು ಪರಿಣಾಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+