ತುಮಕೂರು ಜಿಲ್ಲೆಯ ಏಳು ಸ್ಥಾನಗಳಲ್ಲಿ ಕೈ ಗೆಲುವು: ಸಂಪೂರ್ಣ ಫಲಿತಾಂಶ ಇಲ್ಲಿದೆ
ತುಮಕೂರು, ಮೇ 13: ರಾಜ್ಯ ರಾಜಧಾನಿಯ ಪಕ್ಕದಲ್ಲೇ ಇರುವ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿವೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ತುಮಕೂರಿನಲ್ಲಿ ಭರ್ಜರಿ ಜಯ ಗಳಿಸಿದೆ. ಒಟ್ಟು 11 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಅದರಲ್ಲೂ ಹಾಲಿ ಸಚಿವರಾಗಿದ್ದ ಬಿಸಿ ನಾಗೇಶ್, ಜೆಸಿ ಮಾಧುಸ್ವಾಮಿ ಅವರನ್ನು ಕ್ಷೇತ್ರದ ಜನತೆ ಸೋಲಿಸಿದ್ದಾರೆ.
ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್, ಗುಬ್ಬಿ ಕ್ಷೇತ್ರಗಳು ಜಿಲ್ಲೆಯಲ್ಲಿ ಬರುತ್ತವೆ. ಕೊರಟಗೆರೆಯಿಂದ ಸ್ಪರ್ಧಿಸಿದ್ದ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಗೆಲುವು ಕಂಡಿದ್ದಾರೆ. ಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್, ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಪರಾಭವಗೊಂಡಿದ್ದಾರೆ.

ತುಮಕೂರು ಜಿಲ್ಲೆಯ ಕ್ಷೇತ್ರವಾರು ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರು ಇಂತಿದೆ:
1. ತುಮಕೂರು ನಗರ: ಬಿಜೆಪಿಯ ಜ್ಯೋತಿ ಗಣೇಶ್ ಗೆಲುವು - ಜೆಡಿಎಸ್‌ನ ಗೋವಿಂದರಾಜು
2. ತುಮಕೂರು ಗ್ರಾಮಾಂತರ: ಬಿಜೆಪಿಯ ಸುರೇಶ್ ಗೌಡ ಗೆಲುವು - ಜೆಡಿಎಸ್‌ನ ಗೌರಿಶಂಕರ್ ಸ್ವಾಮಿ
3. ತುರುವೇಕೆರೆ: ಜೆಡಿಎಸ್‌ನ ಎಮ್ ಟಿ ಕೃಷ್ಣಪ್ಪ ಗೆಲುವು - ಬಿಜೆಪಿಯ ಮಸಾಲಾ ಜಯರಾಂ ಸೋಲು
4. ಚಿಕ್ಕನಾಯಕನಹಳ್ಳಿ: ಜೆಡಿಎಸ್‌ನ ಬಿಸಿ ಸುರೇಶ್ ಬಾಬು - ಬಿಜೆಪಿಯ ಜೆಸಿ ಮಾಧುಸ್ವಾಮಿ ಸೋಲು
5. ಕುಣಿಗಲ್: ಕಾಂಗ್ರೆಸ್‌ನ ಡಾ.ರಂಗನಾಥ ಗೆಲುವು - ಜೆಡಿಎಸ್‌ನ ರವಿ ನಾಗರಾಜಯ್ಯ ಸೋಲು
6. ತಿಪಟೂರು: ಕಾಂಗ್ರೆಸ್‌ನ ಕೆ.ಷಡಕ್ಷರಿ ಗೆಲುವು- ಬಿಜೆಪಿಯ ಬಿಸಿ ನಾಗೇಶ್ ಸೋಲು
7. ಗುಬ್ಬಿ- ಕಾಂಗ್ರೆಸ್‌ನ ಎಸ್ ಆರ್ ಶ್ರೀನಿವಾಸ್ ಗೆಲುವು - ಜೆಡಿಎಸ್‌ನ ನಾಗರಾಜು ಸೋಲು
8. ಕೊರಟಗೆರೆ: ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ ಗೆಲುವು- ಜೆಡಿಎಸ್‌ನ ಸುಧಾಕರ್ ಲಾಲ್ ಸೋಲು
9. ಮಧುಗಿರಿ: ಕಾಂಗ್ರೆಸ್‌ನ ಕೆ.ಎನ್ ರಾಜಣ್ಣ - ಜೆಡಿಎಸ್‌ನ ಎಂವಿ ವೀರಭದ್ರಯ್ಯ ಸೋಲು
10. ಪಾವಗಡ: ಕಾಂಗ್ರೆಸ್‌ನ ವೆಂಕಟೇಶ ಗೆಲುವು- ಜೆಡಿಎಸ್‌ನ ತಿಮ್ಮರಾಯ್ಯಪ್ಪ ಸೋಲು
11. ಶಿರಾ: ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಗೆಲುವು - ಬಿಜೆಪಿಯ ಸಿಎಂ ರಾಜೇಶ್ ಗೌಡ ಸೋಲು
ಮೇ 10 ರಂದು ನಡೆದ ಕರ್ನಾಟಕ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಒಟ್ಟಾರೆ ಶೇ.83.58 ರಷ್ಟು ಮತದಾನವಾಗಿತ್ತು.












Click it and Unblock the Notifications