ಅತೃಪ್ತಿ ಇದೆಯಾದರೂ ಪಕ್ಷ ಬಿಡಲ್ಲ ಎಂದ ಜೆಡಿಎಸ್ ಶಾಸಕ
ತುಮಕೂರು, ಜನವರಿ 15: ಅತೃಪ್ತಿ ಇದೆ ಆದರೂ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ತಿಳಿಸಿದ್ದಾರೆ.
ಬಿಜೆಪಿ ನನಗೇನು ಅನ್ನಹಾಕಿ ಸಾಕಿದ್ದಾರೆಯೇ, ನಾನೇನು ಅವರ ಪಕ್ಷದ ಶ್ವಾನವಲ್ಲ, ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭದಲ್ಲಿ ಕೆಲವು ಅತೃಪ್ತಿ ಇದ್ದಿದ್ದು ನಿಜ ಆದರೆ ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಬಿಜೆಪಿ ಕೆಲ ನಾಯಕರು ನನಗೆ ದೂರವಾಣಿ ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದು ನಿಜ ಎಂದು ಪ್ರಶ್ನೆಯೊಂದಕ್ಕೆ ಸತ್ಯನಾರಾಯಣ ಅವರು ಉತ್ತರಿಸಿದರು. ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠರು ಭರವಸೆ ನೀಡಿ ಅವಕಾಶ ಸಿಗಲಿದೆ. ತಾಳ್ಮೆ ಇರಲಿ ಎಂದು ಹೇಳಿದ್ದಾರೆ ಕಾಯುತ್ತೇನೆ ಎಂದು ಹೇಳಿದರು.












Click it and Unblock the Notifications