ಬಲಿಪಶು ಆಗಲ್ಲ, ನಾಮಪತ್ರ ವಾಪಸ್ ಪಡೆಯಲ್ಲ: ಮುದ್ದಹನುಮೇಗೌಡ
Recommended Video

ತುಮಕೂರು, ಮಾರ್ಚ್ 25: ತುಮಕೂರು ಕ್ಷೇತ್ರದಿಂದ ದೇವೇಗೌಡ ಅವರ ಎದುರಾಗಿ ಇಂದು ನಾಮಪತ್ರ ಸಲ್ಲಿಸಿರುವ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಯಾವುದೇ ಕಾರಣಕ್ಕೂ ನಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬಿ-ಫಾರಂ ಸಿಗದಿದ್ದರೂ ಸಹ ತಾನು ಕಾಂಗ್ರೆಸ್ ಅಭ್ಯರ್ಥಿ ಎಂದು ಕಾಂಗ್ರೆಸ್ ಬಾವುಟಗಳೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮುದ್ದಹನುಮೇಗೌಡ ಅವರು ನಾಮಪತ್ರ ಸಲ್ಲಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಾಮಪತ್ರ ಸಲ್ಲಿಸುವುದಕ್ಕೆ ಮುನ್ನಾ ಜನರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ, ಕಾರಣವಿಲ್ಲದೆ ನನಗೆ ಟಿಕೆಟ್ ನಿರಾಕರಿಸಲಾಗಿದೆ, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ರಿಯಾಶೀಲ ಸಂಸದನಾಗಿದ್ದರೂ ಸಹ ನನಗೆ ಟಿಕೆಟ್ ನಿರಾಕರಿಸಲಾಗಿದೆ, ನನ್ನನ್ನು ಬಲಿಪಶು ಮಾಡಲಾಗಿದೆ, ಆದರೆ ನಾನು ಬಲಿಪಶು ಆಗುವುದಿಲ್ಲ, ನನ್ನನ್ನೇ ಬೇಕಾದರೆ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಮುದ್ದಹನುಮೇಗೌಡ ಅವರು ಸವಾಲು ಹಾಕಿದರು.

'ದೇವೇಗೌಡರ ಪಾಳೆಗಾರಿಕೆ ಸಹಿಸಲ್ಲ'
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಚುನಾವಣೆ ಎಂದರೆ ಪಾಳೆಗಾರಿಕೆ ಎಂದು ದೇವೇಗೌಡ ಅವರು ತಿಳಿದಂತಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಅವರ ಕುಟುಂಬವೇ ಇರಬೇಕು ಎಂದರೆ ಹೇಗೆ? ದೇವೇಗೌಡ ಅವರ ಪಾಳೇಗಾರಿಕೆ ಸಹಿಸುವುದಿಲ್ಲ ಎಂದು ಹೇಳಿದರು.

'ಟಿಕೆಟ್ ನಿರಾಕರಿಸಿದ್ದಕ್ಕೆ ಕಾರಣ ಕೊಡಿ'
ಹಾಲಿ ಸಂಸದರಾಗಿರುವ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನಿರಾಕರಿಸಿರುವದಕ್ಕೆ ಕಾರಣ ನೀಡಬೇಕು ಎಂದು ಆಗ್ರಹಿಸಿದ ಅವರು, ಸಕ್ರಿಯವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಸಂಸದರಿಗೆ ಟಿಕೆಟ್ ಬೇರೆಯವರಿಗೆ ನೀಡಿರುವುದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಹಾಲಿ ಸಂಸದ ಮುದ್ದಹನುಮೇಗೌಡ
ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ನ ಹಾಲಿ ಸಂಸದರು, ಮೈತ್ರಿ ಸೂತ್ರದಂತೆ ಹಾಲಿ ಸಂಸದರಿರುವ ಕ್ಷೇತ್ರದಲ್ಲಿ ಅವರಿಗೇ ಟಿಕೆಟ್ ನೀಡಬೇಕಾಗಿತ್ತು, ಆದರೆ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಯಿತು. ಪ್ರಸ್ತುತ ದೇವೇಗೌಡ ಅವರು ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಕಣಕ್ಕೆ ಇಳಿಯುತ್ತಿದ್ದಾರೆ.
ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ದೇವೇಗೌಡ ಅವರಿಗೆ ಆತಂಕ
ಮುದ್ದಹನುಮೇಗೌಡ ಅವರು ನಾಮಪತ್ರ ಸಲ್ಲಿಸಿರುವುದು ದೇವೇಗೌಡ ಅವರಿಗೆ ಹಿನ್ನಡೆ ತರುವ ಸಾಧ್ಯತೆ ಇದೆ. ಮುದ್ದಹನುಮೇಗೌಡ ಅವರು ಸಕ್ರಿಯ ಸಂಸದರಾಗಿದ್ದರು, ತುಮಕೂರು ಕಾಂಗ್ರೆಸ್ ವಲಯದಲ್ಲಿ ಉತ್ತಮ ಪ್ರಭಾವವನ್ನೂ ಹೊಂದಿದ್ದಾರೆ.












Click it and Unblock the Notifications