ರೇವಣ್ಣ ಅಲ್ಲ 'ರಾವಣ' ಅಂತ ಹೆಸರಿಡಬೇಕಿತ್ತು: ರಾಜಣ್ಣ

ತುಮಕೂರು, ಜುಲೈ 14: ಮೊದಲಿನಿಂದಲೂ ಮೈತ್ರಿ ಸರ್ಕಾರದ ಮೇಲೆ ಬೆಂಕಿ ಉಗುಳುತ್ತಿರುವ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಇಂದು ಸಚಿವ ಎಚ್.ಡಿ.ರೇವಣ್ಣ ಅವರ ಮೇಲೆ ಭಾರಿ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಸರ್ಕಾರ ಪತನದ ಹಾದಿ ಹಿಡಿದಿದ್ದಕ್ಕೆ ಎಚ್‌.ಡಿ.ರೇವಣ್ಣ ಅವರೇ ಕಾರಣ ಎಂದಿರುವ ರಾಜಣ್ಣ, 'ಅವರಪ್ಪ ಅವರಿಗೆ ರೇವಣ್ಣ ಅಂತ ಏಕೆ ಹೆಸರಿಟ್ಟರೋ 'ರಾವಣ' ಅಂತ ಇಡಬೇಕಿತ್ತು' ಎಂದು ಮಾತಿನಲ್ಲೇ ಚುಚ್ಚಿದ್ದಾರೆ.

ರೇವಣ್ಣ ಕೊಟ್ಟಿರುವ ಕಾಟಕ್ಕೆ ಎಲ್ಲರೂ ಬಿಟ್ಟು ಹೋಗಿದ್ದಾರೆ, ಮತ್ತೆ ವಾಪಸ್ ಬರುವುದಿಲ್ಲ, ರೇವಣ್ಣ ಅವರ ಹೆಸರು ಮಾತ್ರ ಆದರೆ ನಡೆದುಕೊಳ್ಳುವುದು ರಾವಣನಂತೆ ಎಂದು ರಾಜಣ್ಣ ಹೇಳಿದ್ದಾರೆ.

HD Revannas name should be Ravana : KN Rajanna

ರಾಜೀನಾಮೆ ನೀಡಿರುವ ಹಲವು ಕಾಂಗ್ರೆಸ್ ಶಾಸಕರು ಇದೇ ಕಾರಣವನ್ನು ನೀಡಿದ್ದು, ರೇವಣ್ಣ ಅವರು ಎಲ್ಲರ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡುತ್ತಾರೆ, ಸೂಪರ್ ಸಿಎಂ ನಂತೆ ವರ್ತಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+