• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು : ಗುಬ್ಬಿಯಲ್ಲಿ ಶೀಘ್ರದಲ್ಲೇ ಹೆಲಿಕಾಪ್ಟರ್‌ ಘಟಕ

|
Google Oneindia Kannada News

ತುಮಕೂರು, ಡಿ.1 : ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಹೆಲಿ­ಕಾಪ್ಟ­ರ್‌­ ಘಟಕವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. 610 ಎಕರೆ ಸರ್ಕಾರಿ ಭೂಮಿ­ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಎಚ್‌ಎಎಲ್‌ಗೆ ನೀಡಿದ್ದಾರೆ.

ಗುಬ್ಬಿ ತಾಲ್ಲೂಕು ನಿಟ್ಟೂರು ಸಮೀಪದ ಬಿದರೆಹಳ್ಳ ಕಾವಲ್‌­­ನಲ್ಲಿನ 610 ಎಕರೆ ಪ್ರದೇಶದಲ್ಲಿ ಮುಂದಿನ ಮೂರೂವರೆ ವರ್ಷದಲ್ಲಿ ಹಿಂದೂಸ್ತಾನ್‌ ಏರೋನಾ­ಟಿ­ಕಲ್‌ ಲಿಮಿಟೆಡ್‌ (ಎಚ್ಎಎಲ್‌) ಹೆಲೆಕಾಪ್ಟರ್ ಘಟಕವನ್ನು ಆರಂಭಿಸಲಿದೆ. ಸರ್ಕಾರಿ ಭೂಮಿಯನ್ನು ನೀಡಿರುವ ಪತ್ರವನ್ನು ಸಚಿವ ಟಿ.ಬಿ.ಜಯಚಂದ್ರ ಅವರು ಎಚ್‌ಎಎಲ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ವೇಲು ಮುರುಗನ್‌ ಅವರಿಗೆ ಹಸ್ತಾಂತರಿಸಿದ್ದಾರೆ.

ಎಚ್‌ಎಎಲ್ ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಕಂಪೆನಿ ಬೀದರೆಹಳ್ಳ ಕಾವಲ್‌ನಲ್ಲಿ 4 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡ­ಲಿದೆ. ವಾರ್ಷಿಕ 2 ಸಾವಿರ ಕೋಟಿ ವಹಿವಾಟು ನಡೆಸಲಿದ್ದು, 3ರಿಂದ 4 ಸಾವಿರ ನೇರ ಉದ್ಯೋಗ ಸೃಷ್ಟಿ­ಯಾ­ಗ­ಲಿದೆ. [ಎಚ್ ಎಎಲ್ ನಲ್ಲಿ 49 ಹುದ್ದೆಗಳು ಖಾಲಿ ಇವೆ]

ಹೇಮಾವತಿಯಿಂದ ಕಂಪೆನಿಗೆ ಬೇಕಾದ ನೀರಿನ ವ್ಯವಸ್ಥೆ ಕಲ್ಪಿಸ­ಲಾ­ಗುತ್ತದೆ ಮತ್ತು ಮೂರು ಹೈಟೆನ್ಷನ್‌ ತಂತಿಗಳ ಮೂಲಕ ಶೀಘ್ರದಲ್ಲಿಯೇ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ವಿದ್ಯುತ್ ವ್ಯವಸ್ಥೆ ಕಲ್ಪಿಸಿದ ತಕ್ಷಣ ಎಚ್‌ಎಎಲ್ ಕಾಮಗಾರಿಯನ್ನು ಆರಂಭಿಸಲಿದೆ. [ಎಚ್ಎಎಲ್ ಇಮೇಲ್ ಐಡಿ ಹ್ಯಾಕ್ ರಾದ್ಧಾಂತ!]

ಘಟಕದಲ್ಲಿ ಏನು ತಯಾರಿಸುತ್ತಾರೆ : ಎಚ್‌ಎಎಲ್‌ ಈ ಘಟಕದಲ್ಲಿ ಭೂಸೇನೆ, ವಾಯುಸೇನೆ ಬಳಸುವ 5800 ಕೆಜಿಯ ಎಎಚ್‌ಎಲ್‌ ದ್ರುವ್‌, 3 ಟನ್‌ ತೂಕದ ಎಲ್‌ಯುಎಚ್‌ ಹೆಲಿ­ಕಾ­ಪ್ಟ­ರ್‌ಗಳನ್ನು ತಯಾರಿಸಲಿದೆ. ಕೆಲವು ವರ್ಷಗಳ ಬಳಿಕ 10ರಿಂದ 12 ಟನ್‌ ತೂಕದ ಹೆಲಿಕಾಪ್ಟರ್‌ ತಯಾರಿಸುವ ಚಿಂತ­ನೆಯೂ ಇದೆ. ಹೆಲಿಕಾಪ್ಟರ್‌ ದುರಸ್ತಿ ಘಟಕವನ್ನು ಕೂಡ ಇಲ್ಲಿ ತೆರೆಯಲಾಗುತ್ತದೆ.

English summary
Karnataka Government sanctioned 610 acre of land for the helicopter unit of Hindustan Aeronautics Limited (HAL) at Bidarehalla Kaval in Gubbi taluk of Tumkur district. The unit will roll out its first helicopter in the next three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X