ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು; ಪೊಲೀಸ್‌ ಉದ್ಯೋಗಾಂಕ್ಷಿಗೆ ಡಿವೈಎಸ್‌ಪಿ ಕಪಾಳಮೋಕ್ಷ

|
Google Oneindia Kannada News

ತುಮಕೂರು, ನವೆಂಬರ್‌, 01; ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ಅಳಲು ತೋಡಿಕೊಳ್ಳಲು ಬಂದಿದ್ದ ಪೊಲೀಸ್‌ ಉದ್ಯೋಗಾಂಕ್ಷಿಗೆ ಡಿವೈಎಸ್‌ಪಿ ಪಿ. ಶ್ರೀನಿವಾಸ್ ಕಪಾಳಮೋಕ್ಷ ಮಾಡಿದ್ದಾರೆ.

ಸಾರ್ವಜನಿಕರ ಎದುರಿಗೆ ತುಮಕೂರು ಡಿವೈಎಸ್‌ಪಿ ಪಿ. ಶ್ರೀನಿವಾಸ್‌ ಪೊಲೀಸ್‌ ಉದ್ಯೋಗಾಂಕ್ಷಿಗೆ ಕಪಾಳಮೋಕ್ಷ ಮಾಡಿ ದರ್ಪ ತೋರಿದ್ದಾರೆ. ಇದೀಗ ಡಿವೈಎಸ್‌ಪಿ ಪಿ. ಶ್ರೀನಿವಾಸ್‌ ದರ್ಪದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮಹಿಳೆಗೆ ಕಪಾಳಮೋಕ್ಷ: ಕ್ಷಮೆ ಕೇಳಿದ ಸಚಿವ ವಿ.ಸೋಮಣ್ಣಮಹಿಳೆಗೆ ಕಪಾಳಮೋಕ್ಷ: ಕ್ಷಮೆ ಕೇಳಿದ ಸಚಿವ ವಿ.ಸೋಮಣ್ಣ

ತುಮಕೂರಿನ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸ್‌ ಉದ್ಯೋಗಾಂಕ್ಷಿಗಳು ನೇಮಕಾತಿ ವಯೋಮಿತಿಯನ್ನು ಹೆಚ್ಚಳ ಮಾಡುವಂತೆ ಸಚಿವರ ಬಳಿ ಮನವಿ ಮಾಡಿಕೊಳ್ಳಲು ಬಂದಿದ್ದರು. ಆಗ ಗೃಹ ಸಚಿವರು ಇದ್ದ ವೇದಿಕೆ ಬಳಿಯೇ ಕಪಾಳಮೋಕ್ಷ ಮಾಡಿದ್ದಾರೆ. ಡಿವೈಎಸ್‌ಪಿ ದರ್ಪದ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದ್ದು, ಅವರ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ.

DySP slaps Police job aspirant in Tumakuru, video viral

ನಡುಕ ಹುಟ್ಟಿಸಿದ ಲೋಕಾಯುಕ್ತ; ರಾಜ್ಯದಲ್ಲಿ ಪಿಎಸ್‌ಐ ಪರೀಕ್ಷೆ ಹಗರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದವು. ಲೋಕಾಯುಕ್ತ ಅಧಿಕಾರಕ್ಕೆ ಬೆನ್ನಲ್ಲೇ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ಎಡಿಜಿಪಿ ಸೇರಿ ಸರ್ಕಾರಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.

DySP slaps Police job aspirant in Tumakuru, video viral

ಆರೋಪಿತರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಪ್ರತ್ಯೇಕ ಲೋಕಾಯುಕ್ತ ತನಿಖೆ ನಡೆಯುವ ಸಾಧ್ಯತೆ ಕಂಡುಬರುತ್ತಿದೆ. ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ತನಿಖೆ ನಡೆಸಿರುವ ಸಿಐಡಿ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಬಂಧಿತ ಎಡಿಜಿಪಿ ಅಮೃತ್‌ ಪಾಲ್‌ ಸೇರಿದಂತೆ 20ಕ್ಕೂ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಕಾನೂನು ತಜ್ಞರು ಸಲಹೆ ನೀಡಿದ್ದರು.

English summary
DySP P. Srinivas slaped police job aspirant in Tumakuru, DySP P Srinivas slaps video viral in socila media. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X