ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರನ್ನು ಗೆಲ್ಲಿಸಲು ಪರಮೇಶ್ವರ ಪ್ರಯತ್ನವನ್ನೇ ಮಾಡಿಲ್ಲ: ಸುರೇಶ್ ಗೌಡ

|
Google Oneindia Kannada News

ತುಮಕೂರು, ಮೇ 7: ತುಮಕೂರಿನಲ್ಲಿ ಜೆಡಿಎಸ್ ದೇವೇಗೌಡರನ್ನು ಗೆಲ್ಲಿಸುವ ಪ್ರಯತ್ನವನ್ನು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಮಾಡಿಯೇ ಇಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದವರನ್ನೇ ನಿಲ್ಲಿಸುವ ಮನಸ್ಸಿತ್ತು ಆದರೆ ಅನಿವಾರ್ಯವಾಗಿ ದೇವೇಗೌಡರಿಗೆ ಬೆಂಬಲ ಸೂಚಿಸಬೇಕಾಯಿತು. ಹಾಗಾಗಿ ಪರಮೇಶ್ವರ ಕೂಡ ದೇವೇಗೌಡರ ಪರ ಪ್ರಚಾರವನ್ನೇ ಮಾಡಲಿಲ್ಲ ಎಂದು ಗಂಭೀರವಾಗಿ ನುಡಿದರು.

ಮುದ್ದಹನುಮೇಗೌಡರ ಮೇಲೆ ಹಣ ಪಡೆದ ಆರೋಪ: ಪರಮೇಶ್ವರ್ ಹೇಳಿದ್ದೇನು? ಮುದ್ದಹನುಮೇಗೌಡರ ಮೇಲೆ ಹಣ ಪಡೆದ ಆರೋಪ: ಪರಮೇಶ್ವರ್ ಹೇಳಿದ್ದೇನು?

ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನವರೇ ಸೋಲಿಸೋದು ನಿಜ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲೇ ಬಿಜೆಪಿ 10ಸಾವಿರ ಲೀಡ್ ತೆಗೆದುಕೊಳ್ಳುತ್ತದೆ. ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ ಕೂಡ ದೇವೇಗೌಡರನ್ನ ಗೆಲ್ಲಿಸುವುದಕ್ಕೆ ಒಂದು ರೂಪಾಯಿ ಕೆಲಸ ಮಾಡಿಲ್ಲ. ಅಲ್ಲದೆ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ಎಲ್ಲೂ ಸಭೆ ಮಾಡಿ ಗೆಲ್ಲಿಸೋಕೆ ಶ್ರಮಿಸಿಲ್ಲ ಎಂದು ಹೇಳಿದ್ದಾರೆ.

ಒಂದೊಮ್ಮೆ ತುಮಕೂರಿನಲ್ಲಿ ದೇವೇಗೌಡರು ಸೋತರೆ ಅದಕ್ಕೆ ಕಾಂಗ್ರೆಸ್-ಜೆಡಿಎಸ್ ಕಾರಣವೇ ಹೊರತು ಬಿಜೆಪಿ ಅಲ್ಲ ಎಂದರು. ಲೋಕಸಭೆ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಬೀಳುವುದು ಗ್ಯಾರಂಟಿ, ದೇವೇಗೌಡರನ್ನು ಸದಿಕ್ಕು ತಪ್ಪಿಸುವ ಕಾರ್ಯವೂ ನಡೆಯುತ್ತಿದೆ ಎಂದು ಹೇಳಿದರು.

ದೇವೇಗೌಡರು ಗೆಲ್ಲುವ ಭ್ರಮೆಯಲ್ಲಿದ್ದಾರೆ

ದೇವೇಗೌಡರು ಗೆಲ್ಲುವ ಭ್ರಮೆಯಲ್ಲಿದ್ದಾರೆ

ತುಮಕೂರು ಲೋಕಸಭಾ ಕ್ಷೇತ್ರದ ಮತದಾನ ಮುಗಿದ ಬಳಿಕ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹರಿಹಾಯ್ದಿದ್ದರು. ದೇವೇಗೌಡರು ದೊಡ್ಡವರೇ ಇರಬಹುದು ಆದರೆ ನಮ್ಮಲ್ಲೂ ಅತಿರಥ ಮಹಾರಥ ನಾಯಕರಿದ್ದಾರೆ ಎಂದಿದ್ದರು.

ರಾಜ್ಯದ ಈ 3 'ಎಚ್ಎಂಟಿ' ಕ್ಷೇತ್ರದ ಫಲಿತಾಂಶದ ಮೇಲೆ ಊರಿಗೆಲ್ಲಾ ಕಣ್ಣು ರಾಜ್ಯದ ಈ 3 'ಎಚ್ಎಂಟಿ' ಕ್ಷೇತ್ರದ ಫಲಿತಾಂಶದ ಮೇಲೆ ಊರಿಗೆಲ್ಲಾ ಕಣ್ಣು

ಒಂದು ವೇಳೆ ದೇವೇಗೌಡರು ಸೋತರೆ ರಾಜೀನಾಮೆ ಪತ್ರ ತಯಾರಿರಲಿ

ಒಂದು ವೇಳೆ ದೇವೇಗೌಡರು ಸೋತರೆ ರಾಜೀನಾಮೆ ಪತ್ರ ತಯಾರಿರಲಿ

ರಾಜ್ಯದಲ್ಲಿ ಐದು ಹಂತದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ಫಲಿತಾಂಶ ಹೊರಬೀಳಲು ಇನ್ನೂ ಎರಡು ವಾರಗಳಿವೆ, ಈ ನಡುವೆ, ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವೇಗೌಡ್ರು ಸೋತರೆ, ರಾಜೀನಾಮೆ ಪತ್ರದೊಂದಿಗೆ ಬರುತ್ತೇನೆ ಎಂದು ಅವರದ್ದೇ ಪಕ್ಷದ ಶಾಸಕರೊಬ್ಬರು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು. ಜಿಲ್ಲೆಯ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್, ದೇವೇಗೌಡ್ರನ್ನು ಗೆಲ್ಲಿಸಿಕೊಂಡು ಬರುತ್ತೇವೆ, ಇಲ್ಲದಿದ್ದರೆ ರಾಜೀನಾಮೆ ಪತ್ರದೊಂದಿಗೆ ಬರುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.

ಒಂದು ವೇಳೆ ಗೌಡ್ರು ಸೋತ್ರೆ, ರಾಜೀನಾಮೆ ಪತ್ರ ರೆಡಿ ಇಟ್ಕೊಂಡ ಜೆಡಿಎಸ್ ಶಾಸಕಒಂದು ವೇಳೆ ಗೌಡ್ರು ಸೋತ್ರೆ, ರಾಜೀನಾಮೆ ಪತ್ರ ರೆಡಿ ಇಟ್ಕೊಂಡ ಜೆಡಿಎಸ್ ಶಾಸಕ

ಜೆಡಿಎಸ್ ತೊರೆದ ಚಿದಾನಂದ ಗೌಡ

ಜೆಡಿಎಸ್ ತೊರೆದ ಚಿದಾನಂದ ಗೌಡ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆ ಉಂಟಾಗಿದೆ. ಕುಮಾರಸ್ವಾಮಿ ಆಪ್ತರಾದ ಚಿದಾನಂದ ಎಂ.ಗೌಡ ಅವರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ. ತುಮಕೂರಿನಲ್ಲಿ ಚಿದಾನಂದ ಎಂ.ಗೌಡ ಅವರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿದರು. ಮಾಜಿ ಸಚಿವ ವಿ.ಸೋಮಣ್ಣ, ತುಮಕೂರು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ದೇವೇಗೌಡರ ಮೇಲೆ ತುಮಕೂರಿನಲ್ಲಿ ಇನ್ನೂ ಅಸಮಧಾನವಿದೆಯೇ?

ದೇವೇಗೌಡರ ಮೇಲೆ ತುಮಕೂರಿನಲ್ಲಿ ಇನ್ನೂ ಅಸಮಧಾನವಿದೆಯೇ?

ತುಮಕೂರಿನಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಎಲ್ಲವೂ ಸರಿಹೋಯಿತು ಎಂದುಕೊಳ್ಳುವಾಗಲೆ ಇಂದು ಮತ್ತೆ ಬಂಡಾಯದ ದನಿ ಕೇಳಿಬಂದಿತ್ತು. ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ದೇವೇಗೌಡ ಅವರ ವಿರುದ್ಧ ಮಾತನಾಡಿದ್ದು, ದೇವೇಗೌಡ ಅವರು ರಾಜಕೀಯವಾಗಿ ಮುದ್ದಹನುಮೇಗೌಡ ಅವರನ್ನು ಸಾಯಿಸಿಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ತುಮಕೂರು ಲೋಕಸಭೆ: ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿಗೊಂದು ಭರವಸೆಯ ಚುಕ್ಕಿತುಮಕೂರು ಲೋಕಸಭೆ: ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿಗೊಂದು ಭರವಸೆಯ ಚುಕ್ಕಿ

English summary
BJP former MLA Suresh Gowda opines that DCM Parameshwar did not worked for JDS supremo HD Deve Gowda in Tumkur Parliamentary elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X