Copra: ತಿಪಟೂರು ತೆಂಗು ಬೆಳೆಗಾರರಿಗೆ ಬಂಪರ್: ನಾಗಾಲೋಟದಲ್ಲಿ ಉಂಡೆ ಕೊಬ್ಬರಿ ದರ
ತುಮಕೂರು; ರಾಜ್ಯದಲ್ಲೇ ಅತ್ಯಧಿಕ ಗುಣಮಟ್ಟದ ತೆಂಗಿನಕಾಯಿಗೆ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕೇವಲ ಒಂದೇ ತಿಂಗಳಲ್ಲಿ ದಾಖಲೆಯ ಗರಿಷ್ಠ ದರ ತಿಪಟೂರು ಉಂಡೆ ಕೊಬ್ಬರಿಗೆ ಬಂದಿದೆ. ನೋಡ ನೋಡುತ್ತಿದ್ದಂತೆ ಏಪ್ರಿಲ್ ತಿಂಗಳ ಈ ಮೂರು ವಾರಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 38,000 ರೂಪಾಯಿಗೆ ಮಾರಾಟವಾಗುತ್ತಿದೆ.
ಹೆಸರೇ ಹೇಳುವಂತೆ ತುಮಕೂರು ಕಲ್ಪತರು ನಾಡು. ಜಿಲ್ಲೆ ವ್ಯಾಪ್ತಿಯಲ್ಲಿ ಹೇರಳವಾಗಿ ತೆಂಗಿನ ಕಾಯಿ ಬೆಳೆಯಲಾಗುತ್ತದೆ. ಅದರಲ್ಲೂ ತಿಪಟೂರು ತೆಂಗಿನ ಕಾಯಿ ಗುಣಮಟ್ಟದಿಂದ ಕೂಡಿದ್ದು, ದಪ್ಪ ಕೊಬ್ಬರಿ ಇರುತ್ತದೆ. ಹೆಚ್ಚಿನ ಎಣ್ಣೆ ಅಂಶ ಇರುವ ಕಾರಣ, ರುಚಿಯು ಹೆಚ್ಚಿರುತ್ತದೆ. ಅಡುಗೆಗೆ ಹಾಗೂ ಇನ್ನಿತರ ಪದಾರ್ಥಗಳಿಗೆ ಬಳಕೆ ಆಗುತ್ತದೆ. 2026ರಲ್ಲಿ ತಿಪಟೂರು ಉಂಡೆ ಕೊಬ್ಬರಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು ರಫ್ತಾಗುತ್ತಿದೆ.

ಇಂದು ಏಪ್ರಿಲ್ 22ರಂದು ಉಂಡೆ ಕೊಬ್ಬರಿಗೆ ತಿಪಟೂರು ಎಪಿಎಂಸಿ ಮಾರಕಟ್ಟೆಯಲ್ಲಿ ಕ್ವಿಂಟಾಲ್ ದರ 38,000 ರೂಪಾಯಿ ಗರಿಷ್ಠ, 32,500 ರೂಪಾಯಿ ಕನಿಷ್ಠ ಬೆಲೆ ಇದೆ. ಸರಾಸರಿ 36,711 ರೂಪಾಯಿ ದಾಖಲಾಗಿದೆ. 30,000 ರೂಪಾಯಿ ಆಸುಪಾಸು ಮಾರಾಟವಾದರೆ ಅದೃಷ್ಟದಂತೆ ಭಾವಿಸುತ್ತಿದ್ದ ಬೆಳೆಗಾರರಿಗೆ ಈ ವರ್ಷ ಬಂಪರ್ ಲಾಟರಿ ಹೊಡೆದಂತಾಗಿದೆ. ಬೇರೆ ಬೇರೆ ಭಾಗಗಲ್ಲಿ ಉತ್ಪಾದನೆ ಕೊರತೆ ಕಾರಣಕ್ಕೆ ಉಂಡೆ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಎಪಿಎಂಸಿ ವರ್ತಕರೊಬ್ಬರು ತಿಳಿಸಿದ್ದಾರೆ.
ವಿವಿಧ ಮಾರುಕಟ್ಟೆಗಳ ಇಂದಿನ ಕೊಬ್ಬರಿ ಗರಿಷ್ಠ ದರ
ಕಳೆದ ಒಂದು ವಾರದಲ್ಲಿ (ಏಪ್ರಿಲ್ 15-22) ಪ್ರತಿ ದಿನವು 38,000 ರೂಪಾಯಿ ದರವಿದ್ದು, ಇದು ವ್ಯಾಪಾರಿಗಳು, ರೈತರ ಹರ್ಷಕ್ಕೆ ಕಾರಣವಾಗಿದೆ.
* ಗುಬ್ಬಿ ಮಾರುಕಟ್ಟೆ: ಕೊಬ್ಬರಿ ಗರಿಷ್ಠ ಬೆಲೆ 30,000 ರೂಪಾಯಿ
* ಅರಸಿಕೆರೆ ಮಾರುಕಟ್ಟೆ: 32,000 ರೂಪಾಯಿ
* ತುಮಕೂರು ನಗರ ಮಾರುಕಟ್ಟೆ: 32,6000 ರೂಪಾಯಿ
* ಹೊಸದುರ್ಗ ಮಾರುಕಟ್ಟೆ: 30,000 ರೂಪಾಯಿ
* ಬೆಂಗಳೂರು ಮಾರುಕಟ್ಟೆ: 35,000 ರೂಪಾಯಿ
* ದಾವಣಗೆರೆ ಎಪಿಎಂಸಿ: 12,800 ರೂಪಾಯಿ
ಶ್ರೀಮಂತ ಕೃಷಿ ಪರಂಪರೆ
ತುಮಕೂರು ಭಾಗದಲ್ಲಿ ತೆಂಗು ಬೆಳೆಯಲು ಪೂರಕ ವಾತಾವರಣ ಇದೆ. ಶ್ರೀಮಂತ ಕೃಷಿ ಪರಂಪರೆ ಇಲ್ಲಿದ್ದು, ಎಲ್ಲಿ ನೋಡಿದರೂ ಆಗಸದೆತ್ತರಕ್ಕೆ ಬೆಳೆದು ನಿಂತ ತೆಗಿನ ಮರಗಳನ್ನೇ ಕಾಣುತ್ತೇವೆ. ಈ ವಾಣಿಜ್ಯ ಬೆಳೆ ಇಲ್ಲಿನ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿದೆ.
ತೆಂಗಿನಕಾಯಿಯನ್ನು ಕೇವಲ ರಫ್ತು ಮಾಡದೇ, ಜಿಲ್ಲೆ ರಾಜ್ಯದಲ್ಲೂ ಹೆಚ್ಚು ಬಳಕೆ ಆಗುತ್ತದೆ. ಆಹಾರಕ್ಕೆ ಕೊಬ್ಬರಿ ಬಳಕೆ, ತೆಂಗಿನಕಾಯಿ ಸಂಗ್ರಹಣೆ, ತೆಂಗಿನ ಎಣ್ಣೆ ತೆಗೆಯಲು ಬಳಕೆ ಮಾಡುತ್ತಾರೆ. ಅನಾದಿ ಕಾಲದಿಂದಲೂ ಈ ಭಾಗದ ರೈತರಿಗೆ ತೆಂಗು ಬೆಳೆಯೇ ಆಸೆಯಾಗಿದೆ.












Click it and Unblock the Notifications