ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ ಲಕ್ಷ ಬೆಲೆಯ ಚಿರತೆ ಚರ್ಮ, ಉಗುರು, ಹಲ್ಲು ಮಾರಾಟಕ್ಕೆ ಯತ್ನಿಸುತ್ತಿದ್ದವನ ಬಂಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 07: ಪ್ರಾಣಿಗಳನ್ನು ರಕ್ಷಣೆ ಮಾಡುವುದು ಮನುಷ್ಯನ ಕರ್ತವ್ಯ. ಆದರೆ ಮನುಷ್ಯ ಹಣದ ಆಸೆಗೆ ಬಿದ್ದು ವನ್ಯ ಜೀವಿಗಳನ್ನು ಕೊಂದು ಅದರ ಚರ್ಮ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡಿ ತಾನು ನೆಮ್ಮದಿಯಾಗಿರಲು ಯತ್ನಿಸುತ್ತಿದ್ದಾನೆ. ಚಿರತೆಯ ಚರ್ಮ ಸೇರಿದಂತೆ ಇತರೆ ಪರಿಕರಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದವನನ್ನು ಸಿಐಡಿ ಫಾರೆಸ್ಟ್ ಸೆಲ್ ಟೀಮ್ ಬಂಧಿಸಿದೆ.

ಅಳಿವಿನಂಚಿನಲ್ಲಿರುವ ಪ್ರಾಣಿಗಳು ರಕ್ಷಣೆ ಮಾಡುವುದು ಪ್ರತಿಯೊಬ್ಬನ ಜವಾಬ್ದಾರಿ. ಆದರೆ ಕೆಲವರು ದುಡ್ಡಿನಾಸೆಗೆ ಪ್ರಾಣಿಗಳನ್ನು ಕೊಲ್ಲುವ ಕೆಲಸಗಳನ್ನ ಮಾಡ್ತಿದ್ದಾರೆ. ಅತಿಯಾಸೆಗೆ ಬಿದ್ದ ಪ್ರಾಣಿ ಹಂತಕರು ಅಂತಹದ್ದೊಂದು ಕೃತ್ಯ ನಡೆಸಿಬಿಟ್ಟಿದ್ದಾರೆ.

ಬೆಳಗಾವಿಯನ್ನು ಚಿರತೆಯನ್ನು ಹಿಡಿಯಲು ಹಗಲು ರಾತ್ರಿಯನ್ನದೇ ಕಷ್ಟ ಪಡಲಾಗುತ್ತಿದೆ. ಜನ ಸಾಮಾನ್ಯರಿಗೆ ರಸ್ತೆಯಲ್ಲಿ ಓಡಾಡಲು ಹೆದರುತ್ತಿದ್ದಾರೆ. ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿತ್ತು. ಇವೆಲ್ಲದರ ನಡುವೆ 26 ದಿನಗಳು ಕಷ್ಟವನ್ನು ಪಟ್ಟರು ಸಹ ಬೆಳಗಾವಿಯಲ್ಲಿ ಚಿರತೆಯನ್ನು ಬಲೆಗೆ ಕೆಡವಲು ಸಾಧ್ಯವಾಗುತ್ತಿಲ್ಲ. ಅದು ಬೆಳಗಾವಿ ಕತೆಯಾದರೆ ಇಲ್ಲೊಂದು ಖತರ್ನಾಕ್ ಟೀಮ್ ಮಾತ್ರ ಅಡಗಿ ತುಮಕೂರಿನ ಅರಣ್ಯ ಭಾಗದಲ್ಲಿ ಅವಿತು ಕೂತಿದ್ದ ಚಿರತೆಯನ್ನು ಸದ್ದಿಲ್ಲದೇ ಭೇಟೆಯಾಡಿದ್ದಲ್ಲದೇ. ಚಿರತೆಯ ಚರ್ಮ, ಉಗುರು, ಹಲ್ಲುಗಳನ್ನು ಮಾರಟ ಮಾಡುಲು ಹೋಗಿ ತಗ್ಲಾಕಿ ಕೊಂಡಿದ್ದಾರೆ.

ಕಾರ್ಪೋರೇಟ್​ ಕಂಪನಿಯ ಉದ್ಯೋಗಿಯಾಗಿರುವ ಆರೋಪಿ

ಕಾರ್ಪೋರೇಟ್​ ಕಂಪನಿಯ ಉದ್ಯೋಗಿಯಾಗಿರುವ ಆರೋಪಿ

ಚಿರತೆಯನ್ನು ಕೊಂದು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಚರಣ್​. ವಿದ್ಯಾವಂತ ಹೆಚ್​ ಎಸ್​ ಆರ್​ ಲೇಔಟ್​ನ ಕಾರ್ಪೋರೇಟ್​ ಕಂಪನಿಯ ಉದ್ಯೋಗಿಯಾಗಿರುವ ಚರಣ್ ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಚಿಕ್ಕಬೆನಕಕೆರೆ ನಿವಾಸಿ. ಹೆಚ್ಚಿನ ದುಡ್ಡಿನ ಆಸೆಗೆ ಬಿದ್ದಿದ್ದ ಚರಣ್, ಕೆಲ ವರ್ಷಗಳ ಹಿಂದೆ ಇಂಟರ್​ನೆಟ್​ನಲ್ಲಿ ಹುಲಿ, ಚಿರತೆ, ಸಿಂಹ ಸೇರಿದಂತೆ ಹಲವು ಅಳಿವಿನಂಚಿನಲ್ಲಿರುವ ಪ್ರಾಣಿಗಳ ದಂತ , ಉಗುರು ಚರ್ಮಕ್ಕೆ ಸಾಕಷ್ಟು ಬೆಲೆ ಇದೆ ಎಂದು ತಿಳಿದುಕೊಂಡಿದ್ದನು.

ಚಿರತೆ ಸೇರಿದಂತೆ ಇತರೆ ವನ್ಯ ಪ್ರಾಣಿಗಳು

ಚಿರತೆ ಸೇರಿದಂತೆ ಇತರೆ ವನ್ಯ ಪ್ರಾಣಿಗಳು

ಚಿರತೆ ಸೇರಿದಂತೆ ಇತರೆ ವನ್ಯ ಮೃಗಗಳ ಚರ್ಮ ಸೇರಿದಂತೆ ಇತರೆ ವಸ್ತುಗಳಿಗೆ ಬೇಡಿಕೆ ಬಗ್ಗ ತಿಳಿದು ಕೆಲ ದಿನಗಳು ಸುಮ್ಮನಾಗಿದ್ದ ಚರಣ್. ಬೆಂಗಳೂರಿನ ಕೆಲಸಕ್ಕೆ ರಜೆ ಹಾಕಿ ಹುಟ್ಟೂರಿಗೆ ಹೋಗಿದ್ದ ಚರಣ್ ಸ್ನೇಹಿತರ ಜೊತೆ ಈ ಬಗ್ಗೆ ಚರ್ಚೆಯನ್ನು ಮಾಡಿದ್ದ. ಚಿರತೆ ಚರ್ಮಕ್ಕೆ ಇರುವ ಬೆಲೆ ಬಗ್ಗೆ ತಿಳಿಸಿದ್ದ. ಚರಣ್ ತಾನೂ ಹಣದಾಸೆಪಟ್ಟಿದ್ದಲ್ಲದೇ ತನ್ನ ಸ್ನೇಹಿತನಿಗೂ ಹಣದಾಸೆಯನ್ನು ತೋರಿಸಿದ್ದ. ಚರಣ್ ಮತ್ತು ಸ್ನೇಹಿತರು ಹಣದಾಸೆಯಿಂದ ಚಿರತೆಯನ್ನು ಬೇಟೆಯಾಡುವಲ್ಲಿಯೂ ಯಶಸ್ವಿಯಾಗಿದ್ದರು.

ಸಿಐಡಿ ಫಾರೆಸ್ಟ್‌ ಸೆಲ್‌ನಿಂದ ಭರ್ಜರಿ ಕಾರ್ಯಾಚರಣೆ

ಸಿಐಡಿ ಫಾರೆಸ್ಟ್‌ ಸೆಲ್‌ನಿಂದ ಭರ್ಜರಿ ಕಾರ್ಯಾಚರಣೆ

ಚರಣ್ ಮತ್ತು ಸ್ನೇಹಿತರು ಚಿರತೆಯನ್ನ ಕೊಂದು ಅದರ ಚರ್ಮ, ಉಗುರು, ಹಲ್ಲುಗಳನ್ನು ಕಿತ್ತು ಒಂದು ಪ್ಲಾಸ್ಟಿಕ್​ ಕವರಿನಲ್ಲಿ ತುಂಬಿಕೊಂಡು ಬೈಕ್​ನಲ್ಲಿ ಮಾರಾಟ ಮಾಡಲು ಹೊರಟಿದ್ದವನ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಅಲರ್ಟ್​ ಆದ ಸಿಐಡಿಯ ಫಾರೆಸ್ಟ್​ ಸೆಲ್​ ಚರಣ್​ನನ್ನು ಫಾಲೋ ಮಾಡಿ ಬಂಧಿಸಿ ಎಳೆ ತಂದಿದ್ದಾರೆ. ಇನ್ನು ಚರಣ್ ನ ಇಬ್ಬರು ಸ್ನೇಹಿತರು ಎಸ್ಕೇಪ್ ಆಗಿತ್ತು. ಅವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಲಕ್ಷಾಂತರ ಮೌಲ್ಯದ ಚಿರತೆ ಉಪಕರ ವಶಕ್ಕೆ

ಲಕ್ಷಾಂತರ ಮೌಲ್ಯದ ಚಿರತೆ ಉಪಕರ ವಶಕ್ಕೆ

ಚರಣ್‌ನನ್ನು ಬಂಧಿಸಿರುವ ಸಿಐಡಿ ಫಾರೆಸ್ಟ್ ಸೆಲ್ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ಚಿರತೆಯ ಭೇಟೆಯಾಡಿದ ಇಬ್ಬರು ಸ್ನೇಹಿತರಿಗಾಗಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಈಗಾಗಲೆ ಇನ್ನಿಬ್ಬರು ಸಿಕ್ಕಿದ ಬಳಿಕ ಮತ್ತಷ್ಟು ಪ್ರಾಣಿ ಹತ್ಯಾ ಪ್ರಕರಣಗಳು ಹೊರ ಬರಲಿದೆ. ಇನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್​ನಡಿ ಪ್ರಕರಣ ದಾಖಲು ಮಾಡಲಾಗಿದ್ದೂ ತನಿಖೆಯನ್ನು ಮುಂದುವರೆಸಲಾಗಿದೆ.

English summary
The CID Forest Cell Team has arrested a man who was trying to sell other accessories including leopard skin, Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X