ಮಧುಗಿರಿ : ವಾಹನ ಹರಿದು ಎರಡು ತುಂಡಾದ ಕರಡಿ ದೇಹ

ಮಧುಗಿರಿ, ನವೆಂಬರ್ 23 : ಪ್ರಾಣಿ ಪ್ರಿಯರಿಗಿದು ಕಹಿ ಸುದ್ದಿ, ವಾಹನವೊಂದು ಮೇಲೆ ಹರಿದು ಎರಡು ವರ್ಷದ ಕರಡಿ ಮರಿ ದಾರುಣವಾಗಿ ಸಾವನ್ನಪ್ಪಿದೆ.

ಮಧುಗಿರಿ ತಾಲ್ಲೂಕಿನ ತುಮಕೂರು ರಸ್ತೆಯ ಹುಣಸೆಮರದಹಟ್ಟಿ ಗೇಟ್ ಸಮೀಪ ಗುರುವಾರ (ನವೆಂಬರ್ 23)ರ ಮುಂಜಾನೆ ಅಪರಿಚಿತ ವಾಹನವೊಂದು ಹರಿದು ಎರಡು ವರ್ಷದ ಕರಡಿ ಮರಿ ಮೃತಪಟ್ಟಿದೆ.

2 year old Bear dies in accident

ಕರಡಿ ಆಹಾರಕ್ಕಾಗಿ ಅರಸುತ್ತಾ ರಸ್ತೆ ದಾಟುವ ಸಂದರ್ಭದಲ್ಲಿ ವಾಹನ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕರಡಿಯ ದೇಹ ಎರಡು ಭಾಗವಾಗಿ, ಮಾಂಸ ರಸ್ತೆಯಲ್ಲಿ ಅಲ್ಲಲ್ಲಿ ಚೆಲ್ಲಾಡಿ ದಾರುಣ ದೃಶ್ಯ ಸೃಷ್ಠಿಯಾಗಿದೆ.

ಕರಿಡಿಗೆ ಗುದ್ದಿದ ವಾಹನ ಸವಾರರು ವಾಹನ ನಿಲ್ಲಿಸದೆ ಅಥವಾ ಅರಣ್ಯ ಇಲಾಖೆಗೂ ಮಾಹಿತಿ ತಿಳಿಸಿದೆ ಸ್ಥಳದಿಂದ ಪೇರಿ ಕಿತ್ತಿದ್ದಾರೆ. ಸ್ಥಳಿಯ ಗ್ರಾಮಸ್ಥರು ಕರಿಡಿಗೆ ಒದಗಿದ ಸ್ಥಿತಿ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಧುಗಿರಿ ತಾಲ್ಲೂಕಿನಲ್ಲಿ ಅರಣ್ಯವಲಯದಲ್ಲಿ ಕರಡಿ, ಜಿಂಕೆ, ತೋಳ, ನರಿ ಮುಂತಾದ ಕಾಡು ಪ್ರಾಣಿಗಳು ಸಾಕಷ್ಟಿವೆ, ಆದರೆ ಅವುಗಳ ವಾಸಸ್ಥಾನ ಮತ್ತು ಪರಿಭ್ರಮಣ ಪ್ರದೇಶ ಸರಿಯಾಗಿ ಗುರುತಿಸಿ ಅವುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಈ ರೀತಿಯ ಘಟನೆಗಳು ಅಲ್ಲಿ ಆಗಾಗ್ಗೆ ನಡೆಯುತ್ತಲೆ ಇರುತ್ತವೆ ಎಂದು ಪ್ರಾಣಿ ಪ್ರಿಯರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+