• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ಯಾಂಕ್‌ ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದು ಮಹಿಳೆ ಸಾವು

|

ತಿರುವನಂತಪುರಂ, ಜೂನ್ 16: ಬ್ಯಾಂಕ್‌ನ ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದ ಮಹಿಳೆ ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಪೆರುಂಬವೂರಿನ ಶಾಖೆಯ ಬ್ಯಾಂಕ್ ಆಫ್ ಬರೋಡಾಗೆ ಬಂದಿದ್ದ ಮಹಿಳೆ ಬ್ಯಾಂಕ್ ಆತುರವಾಗಿ ವಾಪಸ್ ಹೋಗುವ ಸಂದರ್ಭದಲ್ಲಿ ಪ್ರದೇಶದ್ವಾರದ ಬಳಿಯಿದ್ದ ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಗಾಜಿನ ತುಂಡು ಆಕೆಯ ಹೊಟ್ಟೆ ಭಾಗಕ್ಕೆ ಇರಿದಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾಳೆ.

ಇನ್ಸುರೆನ್ಸ್ ದುಡ್ಡಿಗಾಗಿ ತನ್ನನ್ನು ತಾನೇ ಮರ್ಡರ್ ಮಾಡಿಸಿಕೊಂಡ ಉದ್ಯಮಿ

ಮೃತ ಮಹಿಳೆ ಪೆರುಂಬವೂರ್‌ನ ಕೂವಪಾಡಿ ಮೂಲದ 46 ವರ್ಷದ ಬೀನಾ ಜಿಜು ಪಾಲ್ ಎಂದು ತಿಳಿದು ಬಂದಿದೆ. ಬ್ಯಾಂಕ್ ಹೊರಗೆ ಬೈಕ್‌ನಲ್ಲಿ ಕೀ ಮರೆತಿದ್ದು, ಅದನ್ನ ತರಲು ಆತುರದಿಂದ ಓಡಿ ಹೋಗುವ ಸಂದರ್ಭದಲ್ಲಿ ಗಾಜಿನ ಬಾಗಿಲ ಬಗ್ಗೆ ಅರಿವಿಲ್ಲದೆ ಡಿಕ್ಕಿ ಹೊಡೆದಿದ್ದಾಳೆ ಎಂದು ಎಎನ್ಐ ವರದಿ ಮಾಡಿದೆ.

ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದ ಬಳಿಕ ಮಹಿಳೆ ಸ್ಥಳದಲ್ಲಿ ಕುಸಿದಿದ್ದಾಳೆ. ನಂತರ ಬ್ಯಾಂಕ್ ಸಿಬ್ಬಂದಿ ಆಕೆಯನ್ನು ಕುರ್ಚಿ ಮೇಲೆ ಕೂರಿಸಿ ಆರೈಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ತೀವ್ರ ರಕ್ತಸ್ರಾವ ಕಂಡ ಗಾಬರಿಗೊಂಡ ಸಿಬ್ಬಂದಿ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.

ಈ ದೃಶ್ಯ ಬ್ಯಾಂಕ್‌ನಲ್ಲಿರುವ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೆರುಂಬವೂರ್ ಪೊಲೀಸರು ಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Woman in Kerala's Ernakulam Dies After Colliding Into Bank's Glass Door, CCTV Video Shows Accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X