ಬಡತನವೆಂಬ ಬೇಲಿ ದಾಟಿ MBBSಗೆ ಕಾಲಿಟ್ಟ ಕೇರಳದ ದಿನಗೂಲಿ ನೌಕರರ 3 ಮಕ್ಕಳು
ಪಾಲಕ್ಕಾಡ, ಫೆಬ್ರವರಿ 12: ಆರ್ಥಿಕವಾಗಿ ಬಡವರಾದವರು ವಿದ್ಯೆಯಲ್ಲಿ ಶ್ರೀಮಂತರಾಗಿರಬಹುದು, ಹೌದು ಕೇರಳದ ದಿನಗೂಲಿ ನೌಕರನ ಮೂವರು ಮಕ್ಕಳು ಎಂಬಿಬಿಎಸ್‌ಗೆ ಕಾಲಿಟ್ಟಿದ್ದಾರೆ.
ಮೂವರು ವೈದ್ಯರಾಗಬೇಕೆಂಬ ಕನಸು ಹೊತ್ತಿದ್ದಾರೆ, ಮೂವರು ಸರ್ಕಾರಿ ಶಾಲೆಯಲ್ಲಿಯೇ ಓದಿ ವೈದ್ಯಕೀಯ ಸೀಟನ್ನು ತನ್ನದಾಗಿದಿಕೊಂಡಿದ್ದಾರೆ.
ಮೆಟ್ಟುವಾಜಿ ಎಂಬ ಕುಗ್ರಾಮದಲ್ಲಿ ವಾಸಿಸುವ ರಾಮಚಂದ್ರನ್ ಹಾಗೂ ಕಮಲಾ ದಂಪತಿ ದಿನಗೂಲಿ ನೌಕರರು. ರಾಮನ್ ಓದಿರುವುದು ಕೇವಲ 5ನೇ ಕ್ಲಾಸ್. ಇನ್ನು ಕಮಲಾ ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿದವರು.

ದಿನಗೂಲಿ ನೌಕರರಾಗಿದ್ದರೂ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಕನಸಿಗೆ ಅಡ್ಡಿಯಾಗಿಲ್ಲ. ಅಂತೆಯೇ ಅವರ ಮೂವರೂ ಮಕ್ಕಳು ಕೂಡಾ ಯಾವುದೇ ದುಬಾರಿ ಶಿಕ್ಷಣ ಪಡೆಯದೇ ಕೇವಲ ಸರ್ಕಾರ ಶಾಲೆಯಲ್ಲೇ ಓದಿ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ.
ಮಗ ಇಂದ್ರಜಿತ್ 3 ವರ್ಷದ ಹಿಂದೆಯೇ ಎಂಬಿಬಿಎಸ್ ಸೀಟು ಪಡೆದಿದ್ದ. ಮೊದಲ ಮಗಳು ಇಂದ್ರಜಾ 2 ವರ್ಷದ ಹಿಂದೆ ಸೀಟು ಪಡೆದುಕೊಂಡಿದ್ದಳು. ಇದೀಗ ಎರಡನೇ ಮಗಳು ಇಂದುಜಾ ಕೂಡಾ ಎಂಬಿಬಿಎಸ್ ಸೀಟು ದಕ್ಕಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇವರ ಮನೆ ಇರುವುದು ಕಾಡಿನ ನಡುವಾದ ಕಾರಣ, ನಿತ್ಯ ಶಾಲೆಗೆ 8 ಕಿ.ಮೀ ನಡೆದುಕೊಂಡೇ ಹೋಗಬೇಕಾಗಿತ್ತು.
ಕಾಡಿನ ಮಧ್ಯತೆ ಇರುವುದರಿಂದ ಪ್ರಾಣಿಗಳ ಭೀತಿಯೂ ಕಾಡುತ್ತಿದ್ದು, ಆದರೆ ಇದೆಲ್ಲಕ್ಕೆ ಹೆಸರದೆ ಶಾಲೆಗೆ ಹೋಗುತ್ತಿದ್ದರು. ಒಬ್ಬರಿಗೆ ಒಬ್ಬರ ನೆರವಾಗುವ ಮೂಲಕ ಈ ಸಾಧನೆ ಮಾಡಿದ್ದಾರೆ. ಕೇವಲ 3 ವರ್ಷಗಳ ಹಿಂದಿನವರೆಗೂ ನಾವು ನಿತ್ಯ 3 ಕಿ.ಮೀ ನಡೆದು ಮನೆಗೆ ನೀರು ಹೊತ್ತುಕೊಂಡು ಬರಬೇಕಾಗಿತ್ತು.
ಇದೆಲ್ಲದರ ನಡುವೆ ಹೊರತಾಗಿಯೂ ಮೂರೂ ಮಕ್ಕಳು ಕಟ್ಟಪಟ್ಟು ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣದತ್ತ ಹೆಜ್ಜೆ ಇಟ್ಟಿದ್ದಾರೆ. ಇದು ಖಷಿಯ ವಿಷಯ ಎಂದು ರಾಮನ್-ಕಮಲಾ ಸಂತಸ ವ್ಯಕ್ತಪಡಿಸಿದ್ದಾರೆ.
ನೀಟ್ ಸೀಟು ಕೈಬಿಟ್ಟಿದ್ದ ವಿದ್ಯಾರ್ಥಿನಿ: ತಂಗಪೆಚ್ಚಿ ಎನ್ನುವ ವಿದ್ಯಾರ್ಥಿನಿ ಪಾನಮೂಪನ್ ಪತ್ತಿ ಕುಗ್ರಾಮದ ನಿವಾಸಿಯಾಗಿದ್ದರು, 2020ರಲ್ಲಿ ಆಕೆ ನೀಟ್ ಪರೀಕ್ಷೆ ಬರೆದಿದ್ದಳು. ಹಿಂದುಳಿದ ವರ್ಗದಿಂದ ಹಿನ್ನೆಲೆಯ ಆಕೆಗೆ ಡಾಕ್ಟರ್ ಆಗಬೇಕು ಎನ್ನುವ ಕನಸು. ಅದಕ್ಕಾಗಿ ಎಂಬಿಬಿಎಸ್ ಓದಲು ಅವಳಿಗಾಸೆ. ತಂಗಪೆಚ್ಚಿ ನೀಟ್ ಪರೀಕ್ಷೆಯಲ್ಲಿ 155 ಅಂಕ ಗಳಿಸಿ ಪಾಸಾಗಿದ್ದಳು. ಆದರೆ ದುಬಾರಿ ಶುಲ್ಕದ ಭಯದಿಂದ ಸೀಟನ್ನು ತ್ಯಜಿಸಿದ್ದಳು.
ನಂತರ ಸರ್ಕಾರ ಹಿಂದುಳಿದ ವರ್ಗಕ್ಕೆ ಶೇ. 7.5 ಮೀಸಲಾತಿ ಘೋಷಿಸಿತ್ತು. ಆದರೆ ಅಷ್ಟರಲ್ಲಿ ತಂಗಪೆಚ್ಚಿ ಸೀಟು ತ್ಯಜಿಸಿಯಾಗಿತ್ತು. 2021ರಲ್ಲಿ ತಂಗಪೆಚ್ಚಿ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆದಳು. ಈ ಬಾರಿ ಆಕೆ 256 ಅಂಕ ಗಳಿಸಿದಳು. ಕಳೆದ ಬಾರಿಗಿಂತ 100 ಅಂಕ ಹೆಚ್ಚು. ಕನ್ಯಾಕುಮಾರಿಯ ಶ್ರೀ ಮೂಕಾಂಬಿಕಾ ಮೆಡಿಕಲ್ ಕಾಲೇಜಿನಲ್ಲಿ ಆಕೆಗೆ ಮೆಡಿಕಲ್ ಸೀಟು ಸಿಕ್ಕಿದೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತಂಗಪೆಚ್ಚಿ ತಮಿಳು ಮಾಧ್ಯಮ ಹಿನ್ನೆಲೆಯಿಂದ ಬಂದ ಕಾರಣ ಇಂಗ್ಲಿಷ್ ಪದಗಳ ಬಳಕೆ ಸವಾಲಿನದ್ದಾಗಿತ್ತು. ಆದರೆ ಶಿಕ್ಷಕರ ನೆರವಿನಿಂದ ಆ ಸವಾಲನ್ನು ಮೀರುವಂತಾಯಿರು ಎಂದಿದ್ದಾರೆ.












Click it and Unblock the Notifications