Get Updates
Get notified of breaking news, exclusive insights, and must-see stories!

ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಮಾಡಿಸಲು ಕೇರಳ ಪೊಲೀಸರ ಹೊಸ ಐಡಿಯಾ

ಶಬರಿಮಲೆ, ನವೆಂಬರ್ 13: ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಬೇಕು ಎಂಬ ಸುಪ್ರಿಂಕೋರ್ಟ್‌ನ ತೀರ್ಪನ್ನು ಜಾರಿಗೆ ತರಲು ಕೇರಳ ಪೊಲೀಸರು ಹೆಣಗುತ್ತಿದ್ದಾರೆ.

ಕೆಲವು ಮಹಿಳೆಯರು ಮಲೆ ಏರಲು ಯತ್ನ ಮಾಡಿದರಾದರೂ ಭಾರಿ ಪ್ರತಿಭಟನೆಯಿಂದಾಗಿ ಅದು ಸಾಧ್ಯವಾಗಿಲ್ಲ. ಹಿಂಸಾತ್ಮಕ ಪ್ರತಿಭಟನೆಗಳು ಕೂಡ ಅಯ್ಯಪ್ಪನ ಸನ್ನಿಧಿಯ ಬಳಿ ನಡೆದಿವೆ. ಹಾಗಾಗಿ ತೀರ್ಪು ಬಂದು ತಿಂಗಳುಗಳಾದರೂ ಇನ್ನೂ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶ ಸಾಧ್ಯವಾಗಿಲ್ಲ.

ಸುಪ್ರಿಂಕೋರ್ಟ್‌ನ ತೀರ್ಪನ್ನು ಪಾಲಿಸಲೇಬೇಕಾದ ಒತ್ತಡದಲ್ಲಿರುವ ಕೇರಳ ಪೊಲೀಸರು, ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಮಾಡಿಸಲು ಹೊಸ ಐಡಿಯಾ ಒಂದನ್ನು ಮಾಡಿದ್ದಾರೆ.

ದೇವಾಲಯದ ದಾರಿಯಲ್ಲಿ ಪ್ರತಿಭಟನಾಕಾರರು ಮಹಿಳೆಯರ ಪ್ರವೇಶಕ್ಕೆ ಅಡ್ಡಿ ಮಾಡುತ್ತಿರುವ ಕಾರಣ ಮಹಿಳೆಯರನ್ನು ಹೆಲಿಕಾಪ್ಟರ್‌ನಲ್ಲಿ ಬೆಟ್ಟದ ಮೇಲಿನ ಅಯ್ಯಪ್ಪನ ದೇಗುಲದ ಬಳಿಗೆ ಕರೆದುಕೊಂಡು ಹೋಗುವ ಯೋಜನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ನವೆಂಬರ್ 17 ಕ್ಕೆ ತೆರೆಯಲಿದೆ ಶಬರಿಮಲೆ ಬಾಗಿಲು

ನವೆಂಬರ್ 17 ಕ್ಕೆ ತೆರೆಯಲಿದೆ ಶಬರಿಮಲೆ ಬಾಗಿಲು

ನವೆಂಬರ್ 17 ರಂದು ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆಯುತ್ತಿದ್ದು, ಈಗಾಗಲೇ 560 ಕ್ಕೂ ಹೆಚ್ಚು ಮಂದಿ 10-50 ವರ್ಷದ ಒಳಗಿನ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಹೆಸರು ನೊಂದಾವಣಿ ಮಾಡಿಕೊಂಡಿದ್ದಾರೆ. ಅವರೆಲ್ಲರಿಗೂ ಸುರಕ್ಷಿತವಾಗಿ ದರ್ಶನ ಮಾಡಿಸುವ ಜವಾಬ್ದಾರಿ ಪೊಲೀಸರ ಮೇಲಿದೆ.

ಮಲೆ ಏರುವ ದಾರಿಯಲ್ಲಿ ತೀವ್ರ ಪ್ರತಿಭಟನೆ

ಮಲೆ ಏರುವ ದಾರಿಯಲ್ಲಿ ತೀವ್ರ ಪ್ರತಿಭಟನೆ

ಕೇರಳ ಸರ್ಕಾರ ಸಹ ಸುಪ್ರಿಂ ತೀರ್ಪಿನ ಪರವಾಗಿದ್ದು, ಅದು ಸಹ ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ. ಹಾಗಾಗಿ ಪ್ರತಿಭಟನೆ ಹೆಚ್ಚಿರುವ ಶಬರಿಮಲೆ ಏರುವ ದಾರಿಯನ್ನು ತಪ್ಪಿಸುವ ಉದ್ದೇಶದಿಂದ ಮಹಿಳೆಯರನ್ನು ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಿ ಬೆಟ್ಟದ ಮೇಲಕ್ಕೆ ಕೊಂಡೊಯ್ದು ಪ್ರತಿಭಟನೆ ಕಡಿಮೆ ಇರುವ ಅಯ್ಯಪ್ಪ ದೇವಾಲಯದ ಬಳಿಸಿ ಅಲ್ಲಿಯೇ ದರ್ಶನ ಮಾಡಿಸುವ ಬಗ್ಗೆ ಕೇರಳ ಪೊಲೀಸರು ಯೋಜನೆ ತಯಾರಿಸಿದ್ದಾರೆ.

ಎರಡು ಬಾರಿ ಭಾರಿ ಪ್ರತಿಭಟನೆ

ಎರಡು ಬಾರಿ ಭಾರಿ ಪ್ರತಿಭಟನೆ

ಆದರೆ ಸಂಪ್ರದಾಯವಾದಿಗಳು ಅಯ್ಯಪ್ಪನ ದೇವಾಲಯದೊಳಗೆ ಮಹಿಳೆಯರ ಪ್ರವೇಶವನ್ನು ಸುತಾರಾಂ ತಪ್ಪಿಸುವ ಹಠ ತೊಟ್ಟಿದ್ದಾರೆ. ಈ ಮೊದಲು ಎರಡು ಬಾರಿ ದೇವಾಲಯದ ಬಾಗಿಲು ತೆರೆದಿದ್ದಾಗ ಮಹಿಳೆಯರ ಪ್ರವೇಶಕ್ಕೆ ಭಾರಿ ಅಡ್ಡಿ ವ್ಯಕ್ತವಾಗಿತ್ತು. ಈಗಲೂ ಸಹ ಅದೇ ಅಡ್ಡ ಆತಂಕ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ತೀರ್ಪು ಪರಿಶೀಲನೆಗೆ ಸುಪ್ರಿಂ ಒಪ್ಪಿಗೆ

ತೀರ್ಪು ಪರಿಶೀಲನೆಗೆ ಸುಪ್ರಿಂ ಒಪ್ಪಿಗೆ

ಸುಪ್ರಿಂಕೋರ್ಟ್‌ನ ತೀರ್ಪನ್ನು ಮರುಪರೀಶಲನೆ ಮಾಡಬೇಕೆಂದು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರಿಂ ಕೋರ್ಟ್‌ ಒಪ್ಪಿಗೆ ಸೂಚಿಸಿ ಇಂದು ವಿಚಾರಣೆಯನ್ನೂ ನಡೆಸಿದೆ. ಮುಂದಿನ ವಿಚಾರಣೆಯನ್ನು ಜನವರಿ 22 ಕ್ಕೆ ಮುಂದೂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+