ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಮಾರಲು ಹೊರಟವನಿಗೆ ಹೊಡೆಯಿತು 1 ಕೋಟಿ ರೂ. ಲಾಟರಿ

|
Google Oneindia Kannada News

ತಿರುವನಂತಪುರಂ, ಜುಲೈ 26: ಎಲ್ಲರಂತೆ ತಾನು ಬದುಕಬೇಕು, ಆರ್ಥಿಕವಾಗಿ ಚೆನ್ನಾಗಿರಬೇಕು ಎಂದುಕೊಳ್ಳುವುದು ಎಲ್ಲ ವರ್ಗದ ಜನರ ಭಾವನೆ ಆಗಿರುತ್ತದೆ. ಆದರೆ ಅದಕ್ಕಾಗಿ ಮನಬಂದಂತೆ ಸಾಲ ಮಾಡಿ ಶೋಕಿ ಮಾಡುವುದು ತಪ್ಪು. ಸಾಲ ಮಾಡಿ ತೀರಿಸಲಾಗದೇ ಪ್ರಾಣ ಬಿಟ್ಟವರಿದ್ದಾರೆ. ಮನೆ ಆಸ್ತಿ ಪಾಸ್ತಿಗಳನ್ನೆಲ್ಲ ಮಾರಾಟ ಮಾಡಿ ಬೀದಿಗೆ ಬಿದ್ದವರಿದ್ದಾರೆ.

ಕೇರಳದಲ್ಲಿ ಸಹ ಒಬ್ಬರು ಒಂದು ಕುಟುಂಬ ನಿರ್ವಹಣೆಗೆಂದು ಸಾಲ ಮಾಡಿ ಸಾಲದ ಸುಳಿಗೆ ಸಿಲುಕಿ ಬೇಸತ್ತಿತ್ತು. ಇನ್ನೇನು ಸಾಲ ತೀರಿಸಲು ಯಾವುದೇ ಮಾರ್ಗಗಳು ಇಲ್ಲ ಎಂದಾಗ ಮನೆ ಮಾರಾಟಕ್ಕೆ ಮುಂದಾಗಿದ್ದರು. ಈ ವೇಳೆ ಲಕ್ಷ್ಮೀಯೇ ಮನೆ ಬಂದಂತೆ ಆ ಕುಟುಂಬಕ್ಕೆ ಭರ್ಜರಿ ಒಂದು ಕೋಟಿ ರೂಪಾಯಿಯ ಲಾಟಿ ಹೊಡಿದ ಘಟನೆ ಕೇರಳದಲ್ಲಿ ನಡೆದಿದೆ. ಅದೃಷ್ಟ ಲಕ್ಷ್ಮೀಯೆ ಮನೆ ಬಾಗಿಲಿಗೆ ಬಂದು ಆ ಮನೆಯ ಸಂಕಷ್ಟಗಳನ್ನು ದೂರವಾಗಿಸಿದೆ.

Breaking: ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೇರಳ ಬಿಷಪ್ ಬಂಧನ Breaking: ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೇರಳ ಬಿಷಪ್ ಬಂಧನ

ಕೇರಳದಲ್ಲಿ ಕಾಸರಗೋಡಿನ ಮಂಜೇಶ್ವರದ ಪಾವೂರು ನಿವಾಸಿ ಮೊಹಮ್ಮದ್ ಬಾವ (50) ಎಂಬುವವರಿಗೆ ಈ ಒಂದು ಕೊಟಿ ರೂಪಾಯಿ ಲಾರಿ ಹೊಡೆದಿದೆ. ಅವರು ಸಾಲ ತೀರಿಸಲೆಂದು ಮನೆ ಮಾರಾಟಕ್ಕೆ ಮುಂದಾಗಿದ್ದರು. ಮಾರಾಟ ಪ್ರಕ್ರಿಯೆಗಳು ಇನ್ನೇನು ಮುಗಿದೇ ಹೊಯಿತು ಎನ್ನುವಷ್ಟರಲ್ಲಿ ಎರಡು ಗಂಟೆಗೂ ಮುನ್ನ ಒಂದು ಕೋಟಿ ರೂ.ಲಾಟರಿ ಬಹುಮಾನ ಲಭಿಸಿದೆ. ಅಚ್ಚರಿಯಾದರೂ ಇದು ಸತ್ಯ. ದೇವರು ಬಯಸಿದ್ದಕ್ಕಿಂತ ಹೆಚ್ಚೆ ಕೊಡುತ್ತಾನೆ ಎಂಬ ಮಾತು ಈ ಕುಟುಂಬಕ್ಕೆ ಅಕ್ಷರಶಃ ನಿಜವಾಗಿದೆ.

ಕಾಸರಗೋಡಿನ ಮಂಜೇಶ್ವರದ ಪಾವೂರು ನಿವಾಸಿ ಮೊಹಮ್ಮದ್ ಬಾವ ಅವರು ಭಾರೀ ಸಾಲದ ಸುಳಿಗೆ ಸಿಲುಕಿದ್ದರು. ಈ ಕಾರಣದಿಂದ ಬಾವ ಮತ್ತವರ ಪತ್ನಿ ಅಮಿನಾ ಎಂಬುವವರು ಕೆಲವೇ ತಿಂಗಳ ಹಿಂದಷ್ಟೇ 2,000 ಚದರ ಅಡಿಯಲ್ಲಿ ಕಟ್ಟಿದ್ದ ಮನೆ ಮಾರಲು ನಿರ್ಧರಿಸಿದ್ದರು. ಅದಕ್ಕಾಗಿ ಮನೆಯನ್ನು ಬ್ಲಾಕ್‌ನಲ್ಲಿ ಇರಿಸಿದ್ದರು.

45 ಲಕ್ಷ ರೂ.ಸಾಲದ ಅವಶ್ಯಕತೆ ಇತ್ತು

45 ಲಕ್ಷ ರೂ.ಸಾಲದ ಅವಶ್ಯಕತೆ ಇತ್ತು

ಭಾನುವಾರ ಸಂಜೆ 5 ಗಂಟೆಗೆ ಮನೆ ಖರೀದಿಗೆ ಒಪ್ಪಂದ ಮಾಡಿ ಟೋಕನ್ ಮೊತ್ತ ಸಹಿತ ಮನೆಗೆ ಬರುವಂತೆ ಮಾತಾಗಿತ್ತು. ಒಟ್ಟು 45 ಲಕ್ಷ ರೂ.ಸಾಲದ ಅಗತ್ಯತೆ ಇತ್ತು. ಆದರೆ ಬ್ರೋಕರ್ ಮನೆಗೆ 40 ಲಕ್ಷ ರೂ. ಎಂದು ಹೇಳಿದ್ದರು. ಅನಿವಾರ್ಯ ಕಾರಣದಿಂದ ಅಷ್ಟೇ ಹಣಕ್ಕೆ ಮನೆ ಬಿಡಲು ದಂಪತಿ ಒಪ್ಪಿದ್ದರು. ಹೀಗಾಗಿ ಅದಾಗಲೇ ದಂಪತಿ ಮಕ್ಕಳ ಸಮೇತ ಬಾಡಿಗೆ ಮನೆ ತೆರಳಿದ್ದರು.

ಸುಮಾರು 30ಲಕ್ಷಕ್ಕೂ ಅಧಿಕ ಸಾಲ

ಸುಮಾರು 30ಲಕ್ಷಕ್ಕೂ ಅಧಿಕ ಸಾಲ

ಕುಟುಂಬ ಬ್ಯಾಂಕ್ ನಿಂದ 10 ಲಕ್ಷ ರೂ. ಸಾಲ ಪಡೆದಿತ್ತು. ಸಂಬಂಧಿಕರಿಂದ ಮನೆ ಕಟ್ಟುವ ಸಲುವಾಗಿ 20 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ಇನ್ನೂ ಎರಡನೇ ಮಗಳ ಮದುವೆಗೆಂದು ಸಾಲ ಮಾಡಿ ಸಾಲದ ಸುಳಿಯಲ್ಲಿಯೇ ನರಳುತ್ತಿದ್ದರು.

ಕುಟುಂಬ ನಿರ್ವಹಣೆಯೂ ಹೆಚ್ಚಿತ್ತು

ಕುಟುಂಬ ನಿರ್ವಹಣೆಯೂ ಹೆಚ್ಚಿತ್ತು

ಬಾವ ದಂಪತಿಗೆ ಒಟ್ಟು ಐವರು ಮಕ್ಕಳು. ಅದರಲ್ಲಿ ಒಬ್ಬರೇ ಗಂಡು ನಾಲ್ವರು ಹೆಣ್ಣುಮಕ್ಕಳು. ಹಿರಿಯ ಹೆಣ್ಣು ಮಗಳಿಗೆ ಮದುವೆಯಾಗಿದ್ದು, ಆ ಮದುವೆಗೂ ಸಾಲ ಮಾಡಲಾಗಿತ್ತು. ಹಿರಿ ಮಗಳ ಮಗ ನಿಜಾಮುದ್ದೀನ್ ಗೆ ಮೂರು ವಾರಗಳ ಹಿಂದೆ ಕತಾರ್‌ನ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸ ಸಿಕ್ಕಿದೆ. ನಾಲ್ಕು ಮಕ್ಕಳ ಶಿಕ್ಷಣ,ಮದುವೆ, ಕುಟುಂಬ ನಿರ್ವಹಣೆಯೂ ಅಧಿಕವಾಗಿತ್ತು. ಈ ಮಧ್ಯೆ ಮನೆ ಸಹ ಕಟ್ಟಿದ್ದರು.

ಲಾಟರಿಯಿಂದ ಅದೃಷ್ಟ ಖುಲಾಯಿತು

ಲಾಟರಿಯಿಂದ ಅದೃಷ್ಟ ಖುಲಾಯಿತು

ಕಳೆದ ಭಾನುವಾರ ಮಧ್ಯಾಹ್ನ 1ಗಂಟೆಗೆ ಕುಟುಂಬದವರೆಲ್ಲರೂ ಮನೆ ಖರೀದಿಗೆ ಬರುವವರಿಗಾಗಿ ಕಾಯುತ್ತಿದ್ದರು. ಈ ವೇಳೆ ಬಾವ ಅವರು ಅಲ್ಲಿಂದ ಪಟ್ಟಣಕ್ಕೆ ಹೊರಟು ಹೋದರು. ಕೇರಳ ಸರ್ಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿಯ ನಾಲ್ಕು ಟಿಕೆಟ್ ಖರೀದಿಸಿದರು. ಕಳೆದ ನಾಲ್ಕು ತಿಂಗಳಿಂದ ನಾನು ಲಾಟರಿ ಖರೀದಿಸುತ್ತಿದ್ದೇನೆ, ಅದೃಷ್ಟ ಬಂದರೆ ನನ್ನ ದುಃಖವು ಕೊನೆಗೊಳಿಸುತ್ತದೆ ಅಂದುಕೊಂಡಿದ್ದರು ಬಾವ. ಇನ್ನೂ ಕೇರಳ ರಾಜ್ಯ ಲಾಟರಿ ಇಲಾಖೆ ಮೊನ್ನೆಯಷ್ಟೇ 'ಕಾರುಣ್ಯ KR 559' ಫಲಿತಾಂಶವನ್ನು ಪ್ರಕಟಿಸಿತ್ತು.

ಮಧ್ಯಾಹ್ನ ಮೂರು ಗಂಟೆ ವೇಳೆಗೆ ಲಾಟರಿ ಡ್ರಾ ಆಗಿದೆ. ಅದರಲ್ಲಿ ಬಾವನಿಗೆ ಕೋಟಿ ರೂಪಾಯಿಯ ಜಾಕ್ ಪಾಟ್ ಹೊಡೆದಿರುವುದು ಗೊತ್ತಾಗಿದೆ. ಒಟ್ಟು ಒಂದು ಕೋಟಿ ರೂಪಾಯಿಯಲ್ಲಿ ಆದಾಯ ತೆರಿಗೆ ಎಲ್ಲ ತೆಗೆದು ಅಂದಾಜು 63ಲಕ್ಷದಷ್ಟು ಹಣ ಕುಟುಂಬದ ಕೈಸೇರಲಿದೆ. ಇದೀಗ ಆ ಕುಟುಂಬ ನಿರಾಳರಗಿದ್ದು, ಎಲ್ಲ ಸಾಲ ತೀರಿಸಿ ತೀರಿಸಿ ನಿಟ್ಟುಸಿರು ಬಿಡಲಿದೆ.

Recommended Video

Neeraj Chopra ಕಾಮನ್ ವೆಲ್ತ್ ಗೇಮ್ಸ್ ಕನಸು ಭಗ್ನ!! ಯಾಕೆ?ಏನಾಯ್ತು? | *India | OneIndia Kannada

English summary
Rs 1 crore lottery hit those who were tired of debt and would selling their houses in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X