ಶಬರಿಮಲೆ ಸುತ್ತ ನಾಲ್ಕು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ

ತಿರುವನಂತಪುರಂ, ಅಕ್ಟೋಬರ್ 17: ಭಕ್ತರ ಹಿತದೃಷ್ಟಿಯಿಂದ ಶಬರಿಮಲೆಯ ನಾಲ್ಕು ಸೂಕ್ಷ್ಮ ಪ್ರದೇಶಗಳಲ್ಲಿ ಡಿಸಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ನೀಲಕ್ಕಳ್, ಪಂಪಾ, ಪಟ್ಟಣಂ ತಿಟ್ಟಿಯಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ದೇವಸ್ಥಾನದ ಹೊರ ಭಾಗ ಮಹಿಳೆಯರಿಗೆ ಶಬರಿಮಲೆ ಪ್ರವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು ಸಂದರ್ಭದಲ್ಲಿ ಪೊಲೀಸರಿಂದ ಲಾಟಿ ಚಾರ್ಜ್ ನಡೆಸಲಾಯಿತು, ಇದರಿಂದ ದೇವರ ದರ್ಶನಕ್ಕೆಂದು ಇರುಮುಡಿ ಹೊತ್ತು ಬಂದಿದ್ದ ಭಕ್ತರು ತೊಂದರೆ ಅನುಭವಿಸಬೇಕಾಯಿತು.

ಸುಮಾರು 4.50ರ ಸುಮಾರಿಗೆ ದೇವಸ್ಥಾನದ ಮುಖ್ಯಮಂತ್ರಿ ಬಂದು ದೇವರಿಗೆ ನಮಸ್ಕರಿಸಿ ಶಬರಿಮಲೆ ದ್ವಾರವನ್ನು ತೆರೆದಿದ್ದಾರೆ, ಬಳಿಕ ಘಂಟನಾದ ಮಾಡಿ ಬಂದಿದ್ದ ಸಾವಿರಾರು ಭಕ್ತರಿಗೆ ಭಸ್ಮ ವಿತರಿಸಿದರು. ರಾತ್ರಿ 10.30ವರೆಗೂ ಶಬರಿಮಲೆಯ ಬಾಗಿಲು ತೆರೆದಿರಲಿದೆ. ಆದರೂ ಕೊನೆಗೂ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅವಕಾಶ ದೊರೆಯಲಿಲ್ಲ.

Prohibition imposed in Sabarimala sensitive places

ನೀಲಕಂಠ ಹೆಬ್ಬಾಗಿಲಿನಿಂದ ಗಿರಿದೇಗುಲಕ್ಕೆ ಸಾಗುವ 20 ಕಿಮೀ ಮಾರ್ಗದುದ್ದಕ್ಕೂ ಪೊಲೀಸ್ ಮತ್ತು ಕಮಾಂಡೋಗಳ ಸರ್ಪಗಾವಲು ಹಾಕಲಾಗಿದೆ. ಶಬರಿಮಲೈ ಆಚಾರ ಸಂರಕ್ಷಣಾ ಸಮಿತಿಯ ಪ್ರತಿಭಟನಾ ಗುಂಪುಗಳಿಂದ ಈ ಮಾರ್ಗದಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಗುಡಾರಗಳನ್ನು ತೆಗೆದು ಹಾಕಲಾಗಿದೆ.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ನಡೆಯಿತು. ಋತುಸ್ರಾವ(ಮಾಸಿಕ ಸ್ರಾವ)ಕ್ಕೆ ಒಳಗಾಗುವ ಯುವತಿಯರು ಮತ್ತು ಮಹಿಳೆಯರಿಗೆ ಶಬರಿಮಲೈಗೆ ಪ್ರವೇಶ ಕಲ್ಪಿಸಬಾರದು ಎಂದು ಆಗ್ರಹಿಸಿ ಅಸಂಖ್ಯಾತ ಭಕ್ತರು ಅಯ್ಯಪ್ಪ ಮಂತ್ರ ಪಠಿಸುತ್ತಾ ಧರಣಿ ನಡೆಸುತ್ತಿದ್ದು, ಅಲ್ಲಿ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ.

Prohibition imposed in Sabarimala sensitive places

ಪ್ರತಿಭಟನೆ ನೆಪದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸಕಲರೀತಿಯಲ್ಲೂ ಸಜಾ್ಜಗಿದ್ದರೂ ಕೆಲವೆಡೆ ಪರಿಸ್ಥಿತಿ ಕೈಮೀರಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಅಸಹಾಯಕರಾಗಿದ್ದರು.

ಈ ಮಧ್ಯೆ ಕೇರಳದ ದೈವಸ್ವಂ (ಮುಜರಾಯಿ) ಸಚಿವ ಕಡಕ್ಕಂಪಲ್ಲಿ ಅವರು ಶಬರಿಮಲೈ ಆವರಣದಲ್ಲೇ ಪರಿಸ್ಥಿತಿ ನಿಯಂತ್ರಣಕ್ಕಾಗಿ ವಿವಿಧ ಸಂಘಟನೆಗಳೊಂದಿಗೆ ತುರ್ತುಸಭೆಯಲ್ಲಿ ಮಾತುಕತೆ ನಡೆಸಿದರಾದರೂ ನಿರೀಕ್ಷಿತ ಫಲಿತಾಂಶ ಹೊರಹೊಮ್ಮಲಿಲ್ಲ.

Prohibition imposed in Sabarimala sensitive places

ಇದಕ್ಕೂ ಮುನ್ನ ಅವರು ಫೇಸ್‍ಬುಕ್ ಮೂಲಕ ಪ್ರತಿಭಟನಾಕಾರರಿಗೆ ಮನವಿ ಮಾಡಿ ಮಹಿಳಾ ಭಕ್ತರನ್ನು ಯಾರೂ ತಡೆಯಬಾರದು. ಈ ರೀತಿ ಮಾಡಿದರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದಂತಾಗುತ್ತದೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಆದರೆ, ಇದಾವುದೂ ಪ್ರತಿಭಟನಾಕಾರರ ಬಿಗಿಪಟ್ಟನ್ನು ಸಡಿಲಿಸಲು ವಿಫಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+