ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಿಷ್ಟ ಪ್ರಕರಣ: ಈ ರೋಗಲಕ್ಷಣಗಳಿದ್ದವರ ನಾಲಿಗೆ ಮೇಲೆ ಬೆಳೆಯುತ್ತೆ ಕೂದಲು

|
Google Oneindia Kannada News

ತಿರುವನಂತಪುರಂ ಮಾರ್ಚ್ 13: ಮಾನವನ ದೇಹದಲ್ಲಿ ಕೂದಲು ಬೆಳವಣಿಗೆ ಸಾಮಾನ್ಯ ಪ್ರಕ್ರಿಯೆ. ದೇಹದ ವಿವಿಧ ಭಾಗಗಳಲ್ಲಿ ಕೂದಲು ಬೆಳೆಯುತ್ತವೆ. ಆದರೆ ಇಲ್ಲೊಬ್ಬರ ನಾಲಿಗೆ ಮೇಲೆ ಕೂದಲು ಬೆಳೆದಿದೆ. ಇದನ್ನು ಕೇಳಿ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಮನುಷ್ಯನ ನಾಲಿಗೆಯ ಮೇಲೆ ಕಪ್ಪು ಕೂದಲು ಬೆಳೆದಿದೆ. ಪಾರ್ಶ್ವವಾಯು ಪೀಡಿತ ರೋಗಿಯ ನಾಲಿಗೆಯ ಮೇಲೆ ಇದ್ದಕ್ಕಿದ್ದಂತೆ ಕಪ್ಪು ಕೂದಲು ಬೆಳೆಯಲು ಪ್ರಾರಂಭಿಸಿದೆ.

ಈ ವಿಶಿಷ್ಟ ಪ್ರಕರಣ ಕೇರಳದ ಕೊಚ್ಚಿನ್‌ನಿಂದ ಬೆಳಕಿಗೆ ಬಂದಿದೆ. ವಾಸ್ತವವಾಗಿ ಕೆಲವು ದಿನಗಳ ಹಿಂದೆ 50 ವರ್ಷದ ವ್ಯಕ್ತಿಯೊಬ್ಬರು ದೇಹದ ಎಡಭಾಗದಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಇದರ ನಂತರ ರೋಗಿಯು ದ್ರವ ಆಹಾರವನ್ನು ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು. JAMM ಡರ್ಮಟಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪಾರ್ಶ್ವವಾಯುವಿನ ನಂತರ ರೋಗಿಗೆ ದ್ರವ ಆಹಾರ ಸೇವನೆ ಮಾಡುತ್ತಿರುವಂತೆ ಸೂಚಿಸಲಾಯಿತು. ತಿನ್ನಲು ಏನೇ ಇದ್ದರೂ ಮಿಕ್ಸಿಯಲ್ಲಿ ರುಬ್ಬಿ ಕೊಡುತ್ತಿದ್ದರು. ಸುಮಾರು ಎರಡೂವರೆ ತಿಂಗಳ ನಂತರ ರೋಗಿಯ ಆರೈಕೆದಾರರು ಅವಳ ನಾಲಿಗೆಯ ಮೇಲ್ಮೈಯಲ್ಲಿ ಕಪ್ಪು ಕೂದಲು ಬೆಳೆಯುತ್ತಿರುವುದನ್ನು ಗಮನಿಸಿದರು.

43 ಜೀವಂತ ಹಲ್ಲಿ, 9 ಹಾವುಗಳನ್ನು ಪ್ಯಾಂಟ್‌ನಲ್ಲಿ ಅಡಗಿಸಿಟ್ಟ ಭೂಪ43 ಜೀವಂತ ಹಲ್ಲಿ, 9 ಹಾವುಗಳನ್ನು ಪ್ಯಾಂಟ್‌ನಲ್ಲಿ ಅಡಗಿಸಿಟ್ಟ ಭೂಪ

ಕಾಯಿಲೆಯಿಂದ ಬಳಲುತ್ತಿದ್ದ ರೋಗಿ

ಕಾಯಿಲೆಯಿಂದ ಬಳಲುತ್ತಿದ್ದ ರೋಗಿ

ವೈದ್ಯಕೀಯ ಭಾಷೆಯಲ್ಲಿ ಈ ರೋಗದ ಹೆಸರು ಲಿಂಗುವಾ ವಿಲಾಸ ನಿಗ್ರಾ. ಸಂತ್ರಸ್ತೆ ಕಪ್ಪು ಕೂದಲುಳ್ಳ ನಾಲಿಗೆ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ರೋಗಿಯ ನಾಲಿಗೆ ಮೇಲೆ ಹಳದಿ ಪಟ್ಟೆಗಳಿದ್ದು ಅದರೊಂದಿಗೆ ನಾಲಿಗೆಯ ಮೇಲೆ ದಪ್ಪ, ಕಪ್ಪು ಲೇಪನಗಳಿದ್ದವು. ಕಪ್ಪು ಮಚ್ಚೆಯಂತೆ ಕಾಣುವ ಉದ್ದವಾದ ತೆಳ್ಳಗಿನ ಕೂದಲು ರೋಗಿಯ ನಾಲಿಗೆ ಮೇಲೆ ಬೆಳೆದಿದೆ. ಆಹಾರ ಪದಾರ್ಥಗಳು ಅದರ ಮೇಲೆ ಅಂಟಿಕೊಂಡಿದೆ. ಈ ಪ್ರಕರಣದ ಬಳಿಕ ಕಪ್ಪು ಕೂದಲುಳ್ಳ ನಾಲಿಗೆಗಳಿರುವುದು ತನಿಖೆಯಿಂದ ತಿಳಿದುಬಂದಿದೆ. ನಾಲಿಗೆಯ ಮೇಲಿನ ಕೂದಲು ಬೆಳವಣಿಗೆಯನ್ನು ವೈದ್ಯಕೀಯವಾಗಿ ಲಿಂಗುವಾ ವಿಲೋಸಾ ನಿಗ್ರಾ ಎಂದು ಕರೆಯಲಾಗುತ್ತದೆ.

ಸಮಸ್ಯೆ ಕಾಣಿಸಿಕೊಂಡಿದ್ದು ಹೇಗೆ?

ಸಮಸ್ಯೆ ಕಾಣಿಸಿಕೊಂಡಿದ್ದು ಹೇಗೆ?

ವರದಿಯ ಪ್ರಕಾರ ಪಾರ್ಶ್ವವಾಯುವಿಗೆ ಒಳಗಾದ ರೋಗಿಯನ್ನು ಎರಡು ತಿಂಗಳ ನಂತರ ಆಹಾರವನ್ನು ಅಗಿಯಲು ಮತ್ತು ನುಂಗಲು ತೊಂದರೆಯಾದಾಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಹಾರ ರೋಗಿಯ ನಾಲಿಗೆಗೆ ಸಿಲುಕಿಕೊಳ್ಳುವ ದೂರನ್ನು ರೋಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಅವರ ನಾಲಿಗೆಯಲ್ಲಿ ಪರೀಕ್ಷಿಸಿದಾಗ ಲಿಂಗುವಾ ವಿಲಾಸ ನಿಗ್ರಾ ಇರುವುದು ಪತ್ತೆಯಾಗಿದೆ. ಪರೀಕ್ಷೆ ವೇಳೆ ರೋಗಿಯ ನಾಲಿಗೆ ಮೇಲೆ ಕಪ್ಪು ಮತ್ತು ಹಳದಿ ಕಲೆಗಳಿದ್ದವು. ಆದರೆ ವೈದ್ಯರ ಸಲಹೆ ಮೇರೆಗೆ ಇಪ್ಪತ್ತು ದಿನಗಳ ಕಾಲ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಕಲೆಗಳನ್ನು ತೆರವುಗೊಳಿಸಲಾಯಿತು. ವೈದ್ಯರ ಪ್ರಕಾರ, ಈ ಸಮಸ್ಯೆಗೆ ಆರಂಭಿಕ ಪರಿಹಾರವೆಂದರೆ ಬಾಯಿಯ ಸ್ವಚ್ಛತೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು.

ಇವು ರೋಗದ ಲಕ್ಷಣಗಳು

ಇವು ರೋಗದ ಲಕ್ಷಣಗಳು

ಅಮೇರಿಕನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಪ್ರಕಾರ, 13 ಪ್ರತಿಶತದಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಕೆಲವು ಹಂತದಲ್ಲಿ 'ಕಪ್ಪು ಕೂದಲುಳ್ಳ ನಾಲಿಗೆ', ಅಂದರೆ ಲಿಂಗ್ವಾ ವಿಲ್ಲಾ ನಿಗ್ರಾವನ್ನು ಅನುಭವಿಸುತ್ತಾರೆ. ಕಪ್ಪು ಕೂದಲುಳ್ಳ ನಾಲಿಗೆ ಸಿಂಡ್ರೋಮ್ ಒಂದು ಸಾಮಾನ್ಯ ಹಾನಿಕಾರಕವಲ್ಲದ ಸ್ಥಿತಿಯಾಗಿದೆ. ಆದರೆ ಇದು ಅಪರೂಪ. ಇದರಲ್ಲಿ ನಾಲಿಗೆಯ ಮೇಲಿರುವ ಸತ್ತ ಚರ್ಮದ ಕೋಶಗಳು ಹೊರಬಂದಾಗ ಮತ್ತು ಹೊರಗೆ ಹೆಪ್ಪುಗಟ್ಟಿದಾಗ, ಇದರಿಂದಾಗಿ ನಾಲಿಗೆ ದಪ್ಪವಾಗಲು ಪ್ರಾರಂಭಿಸುತ್ತದೆ. ಕೂದಲು ಬೆಳೆಯಲು ಪ್ರಾರಂಭವಾಗುತ್ತವೆ.

ವೈದ್ಯರು ಸಲಹೆ ಏನು?

ವೈದ್ಯರು ಸಲಹೆ ಏನು?

ಸಾಮಾನ್ಯವಾಗಿ ಎಲ್ಲರಲ್ಲೂ ಈ ಲಕ್ಷಣಗಳು ಕಂಡು ಬರುವುದಿಲ್ಲ. ಇಂಥಹ ಪ್ರಕರಣಗಳ ತುಂಬಾ ವಿರಳವಾಗಿರುತ್ತವೆ. ಹೀಗಾಗಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವವರೆಲ್ಲರಿಗೂ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂದಲ್ಲ. ಹೀಗಾಗಿ ಅಂತಹ ಅನುಮಾನಗಳು ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ.

English summary
Hair growth is a normal process in the human body. Hair grows in different parts of the body, but sometimes it is heard that hair has grown inside the mouth of a person. You might have been a little surprised to hear this. But this is true.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X