ಬಿಜೆಪಿಯಿಂದ ಒಂದಾದ ಕೇರಳ ರಾಜಕೀಯ ಬದ್ಧ ವೈರಿಗಳು
ತಿರುವನಂತಪುರ, ಡಿಸೆಂಬರ್ 16: ಕೇರಳ ರಾಜಕೀಯ ಗಮನಿಸಿದವರಿಗೆ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವಿನ ರಾಜಕೀಯ ವೈರತ್ವ ಗೊತ್ತಿದ್ದೇ ಇರುತ್ತದೆ. ಆದರೆ ಈ ಎರಡೂ ಬಣಗಳು ಒಂದಾಗಿವೆ. ಈ ಒಂದಾಗುವಿಕೆಗೆ ಕಾರಣ ಬಿಜೆಪಿ.
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯ ವಿರುದ್ಧ ಕೇರಳ ರಾಜಕೀಯ ಬದ್ಧ ವೈರಿಗಳಾದ ಎಲ್‌ಡಿಎಫ್ ಮತ್ತು ಯುಡಿಎಫ್ ಗಳು ಒಂದಾಗಿ ಪ್ರತಿಭಟನೆ ನಡೆಸಿವೆ.
ಎಲ್‌ಡಿಎಫ್ ಬಣದ ಮುಖಂಡ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಯುಡಿಎಫ್ ಬಣದ ಮುಖ್ಯಸ್ಥ ಕೇರಳ ವಿಧಾನಸಭೆ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲ ಇಬ್ಬರೂ ಇಂದು ಒಂದೇ ವೇದಿಕೆಯಲ್ಲಿ ಒಂದೇ ವಿಚಾರಕ್ಕೆ ಒಂದಾದರೂ ಇಬ್ಬರೂ ಪೌರತ್ವ ಕಾಯ್ದೆ ವಿರುದ್ಧ ಆಕ್ರೋಶ ಹೊರಹಾಕಿದರು.

ಎಲ್‌ಡಿಎಫ್ ಬಣದ ಹಲವು ಪಕ್ಷಗಳ ನಾಯಕರು, ಯುಡಿಎಫ್‌ನ ಹಲವು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು, ಕೇರಳದ ಆಡಳಿತ ಮತ್ತು ವಿರೋಧ ಪಕ್ಷ ಒಟ್ಟಾಗಿ ಕಾಯ್ದೆಯನ್ನು ವಿರೋಧಿಸುತ್ತಿದೆ. ಆ ಮೂಲಕ ಕೇರಳ ರಾಜ್ಯ ಕಾಯ್ದೆಯ ವಿರುದ್ಧವಾಗಿದೆ ಎಂದು ವೇದ್ಯಗೊಳಿಸಿದರು.












Click it and Unblock the Notifications