Video: ಲಾಕ್‌ಡೌನ್, ಬಂಗಾರದಂಗಡಿಯಲ್ಲಿ ಲಾಕ್ ಆದ ಹೆಬ್ಬಾವು
ಕಣ್ಣೂರು, ಮೇ 4: ದೇಶದಲ್ಲಿ ಲಾಕ್‌ಡೌನ್ ಜಾರಿಯಾದ ನಂತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡು ವ್ಯಾಪಾರಸ್ಥರು ಮನೆ ಸೇರಿದ್ದರು. ಇದರ ಅವಕಾಶ ಪಡೆದುಕೊಂಡ ಹೆಬ್ಬಾವೊಂದು ಕೇರಳದಲ್ಲಿ ಅಂಗಡಿಯೊಳಗೇ ಸಂತಾನ ನಡೆಸಲು ಹವಣಿಸಿದೆ.
ಕೇರಳದ ಕಣ್ಣೂರಿನ ಸುಜಿತ್ ಎಂಬವರ ಬಂಗಾರ ಆಭರಣದ ಅಂಗಡಿಯಲ್ಲಿ ಹಳೆಯ ವಸ್ತುಗಳನ್ನು ಇರಿಸಿದ್ದ ಜಾಗ ದಲ್ಲಿ 3 ಮೀಟರ್ ಉದ್ದದ ಹೆಬ್ಟಾವು ತನ್ನ 20 ಮೊಟ್ಟೆಗಳ ಜೊತೆ ಆಶ್ರಯ ಪಡೆದುಕೊಂಡಿತ್ತು. ಒಂದು ತಿಂಗಳ ಕಾಲ ಮುಚ್ಚಲಾಗಿದ್ದ ಆಭರಣ ಅಂಗಡಿಯನ್ನು ತೆರೆದ ಮಾಲೀಕರು ಎದುರಾದ ಹೆಬ್ಬಾವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.
''ಬಾಗಿಲು ತೆರೆದು ಹೆಬ್ಟಾವನ್ನು ನೋಡಿದಾಗ ಒಮ್ಮೆಲೆ ಕಿರುಚಿಕೊಂಡೆ, ಬಳಿಕ ಸಾವರಿಸಿಕೊಂಡು ಹಾವು ಹಿಡಿಯುವವರಿಗೆ ಕರೆ ಮಾಡಿದೆ. ಅವರು ಬಂದು ಹಾವು ಹಿಡಿದರು. ಹಾವು ಮತ್ತು ಮೊಟ್ಟೆಗಳನ್ನು ಅವರು ಒಯ್ದಿದ್ದಾರೆ'' ಎಂದು ಸುಜಿತ್ ಮಲಯಾಳಿ ಮನೋರಮಾ ವಾಹಿನಿಗೆ ತಿಳಿಸಿದ್ದಾರೆ.
This python of 3m in length and 24kg in weight chose a jewellery in Payyanur in #Kerala's Kannur district to lay eggs and incubate them during #lockdown. Forest officials, who shifted the snake to a sanctuary, will take measures to incubate the eggs. pic.twitter.com/BMQhGPnIUk
— TA Ameerudheen (@ameertweet) May 3, 2020
ಹೆಬ್ಬಾವನ್ನು ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದ್ದು, ಮೊಟ್ಟೆಯಿಂದ ಮರಿ ಹೊರಬರವವರೆಗೂ ಅವರು ಅವನ್ನು ರಕ್ಷಿಸುತ್ತಾರೆ ಎಂದು ಅಂಗಡಿ ಮಾಲಿಕ ಸುಜಿತ್ ತಿಳಿಸಿದ್ದಾರೆ.