ಕೇರಳ ವಿಮಾನ ದುರಂತದ ಹಿಂದಿರುವ ಮೂರು ಸಂಭಾವ್ಯ ಕಾರಣಗಳು

ತಿರುವನಂತಪುರಂ, ಆಗಸ್ಟ್ 08: ದುಬೈನಿಂದ ವಾಪಸಾಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಪತನಕ್ಕೆ ಭಾರಿ ಮಳೆ ಹಾಗೂ ರನ್‌ವೇ ಕಾರಣ ಎಂದು ಹೇಳಲಾಗುತ್ತಿದ್ದರೂ ಮೂರು ಸಂಭಾವ್ಯ ಕಾರಣಗಳು ಪ್ರಮುಖವಾಗಿ ಕಾಣುತ್ತಿದೆ.

Recommended Video

      Kerala Flight Crash ನಂತರ ಮತ್ತೆ ನೆನಪಾಯ್ತು Mangalore ದುರಂತ | Oneindia Kannada

      ಶುಕ್ರವಾರ ರಾತ್ರಿ ದುಬೈನಿಂದ ಕೋಳಿಕ್ಕೋಡ್‌ಗೆ ಬರುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ 190 ಪ್ರಯಾಣಿಕರನ್ನು ಕರೆ ತರಲಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ 190 ಭಾರತೀಯರು ದುಬೈನಲ್ಲಿ ಸಿಲುಕಿಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಪತನವಾಗಿ 18 ಮಂದಿ ಸಾವನ್ನಪ್ಪಿದ್ದರು.

      ಈ ಘಟನೆಗೆ ಸಂಬಂಧಿಸಿ ಪ್ರಮುಖವಾಗಿ ಮೂರು ಕಾರಣಗಳ ಬಗ್ಗೆ ಚರ್ಚೆ ನಡೆಯುತ್ತಿದೆ.ಕೇರಳದ ಕೋಳಿಕ್ಕೋಡ್ ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ಅನೇಕ ಮಂದಿ ಮೃತಪಟ್ಟ ಘಟನೆ ನಡೆದ ಕೂಡಲೇ ದುಬೈ ಮತ್ತು ಶಾರ್ಜಾದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಪ್ರಯಾಣಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲು 5 ಸಹಾಯವಾಣಿಗಳನ್ನು ತೆರೆದಿದೆ.

      ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ನಾವು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ನಮ್ಮ ಸಹಾಯವಾಣಿ +97156 5463903, +971543090572, +971543090571, +971543090575 ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸಲ್ ಜನರಲ್ ಡಾ ಅಮನ್ ಪುರಿ ಮಾಹಿತಿ ನೀಡಿದ್ದಾರೆ.

      ಶಾರ್ಜಾದಲ್ಲಿನ ಸಹಾಯವಾಣಿ +97165970303 ಆಗಿದೆ. ದುಬೈಯಿಂದ ಕಲ್ಲಿಕೋಟೆಗೆ ಬರುತ್ತಿದ್ದ ಐಎಕ್ಸ್ 1344 ಏರ್ ಇಂಡಿಯಾ ವಿಮಾನದಲ್ಲಿ 191 ಮಂದಿ ಇದ್ದರು, ಅವರಲ್ಲಿ ಇಬ್ಬರು ಪೈಲಟ್ ಗಳು, ನಾಲ್ವರು ಸಿಬ್ಬಂದಿ, 10 ಮಕ್ಕಳನ್ನೂ ಒಳಗೊಂಡಿತ್ತು.

      ಕಾರಣ 1 ಏನು ಹೇಳುತ್ತೆ?

      ಕಾರಣ 1 ಏನು ಹೇಳುತ್ತೆ?

      ಕಾರಣ 1: ಸಾಮಾನ್ಯವಾಗಿ ವಿಮಾನದಲ್ಲಿ ದೊಡ್ಡ ವಿಮಾನಗಳ ಹಾರಾಟಕ್ಕಾಗಿ ಪೈಲಟ್‌ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಈ ಪೈಲಟ್‌ಗಳಿಗೆ ಸೂಕ್ತ ತರಬೇತಿ ನೀಡಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಅನಿವಾರ್ಯ ಕಾರಣಗಳಿಂದ ಸೆಪ್ಟೆಂಬರ್ 30ರವರೆಗೆ ಸಿಮ್ಯುಲೇಟರ್‌ಗಳ ಮೂಲಕ ತರಬೇತಿ ನೀಡುವುದನ್ನು ರದ್ದುಪಡಿಸಲಾಗಿತ್ತು. ಇದೇ ದುರಂತಕ್ಕೆ ಕಾರಣವಿರಬಹುದು ಎಂದು ಅಂದಾಜಿಸಲಾಗುತ್ತಿದೆ.

      ಕಾರಣ ಇದೂ ಇರಬಹುದು

      ಕಾರಣ ಇದೂ ಇರಬಹುದು

      ಕಾರಣ 2: ಕೊರೊನಾ ಹಾಗೂ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಏರ್ ಇಂಡಿಯಾ ತನ್ನ ಪೈಲಟ್‌ಗಳಿಗೆ ಶೇ.60ರವರೆಗೆ ಸಂಬಳ ಕಡಿತ ಮಾಡಿತ್ತು. ಇದರಿಂದ ಪೈಲಟ್‌ಗಳು ಮಾನಸಿಕವಾಗಿಯೂ ಕುಗ್ಗಿರುವ ಸಾಧ್ಯತ ಇರುತ್ತದೆ. ಪೈಲಟ್‌ಗಳು ಮಾನಸಿಕವಾಗಿ ಸ್ಥಿರವಾಗಿರದಿದ್ದರೆ, ವಿಮಾನ ಹಾರಿಸುವುದು ತುಸು ಕಷ್ಟವೇ ಸರಿ. ಮಾನಸಿಕವಾಗಿ ಕುಗ್ಗಿರುವುದು, ಚಾಲನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

      ವಿಮಾನ ದುರಂತಕ್ಕೆ ಮೂರನೇ ಸಂಭಾವ್ಯ ಕಾರಣ

      ವಿಮಾನ ದುರಂತಕ್ಕೆ ಮೂರನೇ ಸಂಭಾವ್ಯ ಕಾರಣ

      ಕಾರಣ 3: ಕೋಳಿಕ್ಕೋಡ್ ವಿಮಾನ ನಿಲ್ದಾಣದ ರನ್‌ ವೇ ತುಸು ಕಿರಿದಾಗಿದೆ. ಇದಕ್ಕೆ ಟೇಬಲ್ ರನ್‌ ವೇ ಎಂದೂ ಹೇಳುತ್ತಾರೆ. ಇದಲ್ಲದೆ, ರನ್‌ ವೇಯ ಕೆಲ ಭಾಗಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ವಿಪರೀತ ಮಳೆ ಹೊಯ್ಯುತ್ತಿದ್ದರಿಂದ, ಪೈಲಟ್‌ಗಳಿಗೆ ಸೂಕ್ತವಾಗಿ ರನ್‌ ವೇ ಕಾಣಿಸದೇ ಇರಬಹುದು, ಇವೆಲ್ಲದರ ಮಿಶ್ರಣದಿಂದ ಲ್ಯಾಂಡಿಂಗ್ ಸಂದರ್ಭದಲ್ಲಿ ದುರಂತ ಸಂಭವಿಸಿರುವ ಸಾಧ್ಯತೆಯೂ ಹೆಚ್ಚಿದೆ.

      ಸಹಾಯಕ್ಕೆ ದೆಹಲಿ,ಮುಂಬೈನಿಂದ ವಿಶೇಷ ವಿಮಾನ

      ಸಹಾಯಕ್ಕೆ ದೆಹಲಿ,ಮುಂಬೈನಿಂದ ವಿಶೇಷ ವಿಮಾನ

      ಕೇರಳದ ಕೋಳಿಕ್ಕೋಡ್ ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ.
      ಅಲ್ಲಿನ ಪರಿಸ್ಥಿತಿ ನಿರ್ವಹಿಸಲು ಮತ್ತು ಪ್ರಯಾಣಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ದೆಹಲಿ ಮತ್ತು ಮುಂಬೈಯಿಂದ ಎರಡು ವಿಶೇಷ ವಿಮಾನಗಳನ್ನು ಕಳುಹಿಸಲಾಗಿದೆ.

      ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು ನಾಗರಿಕ ವಿಮಾನಯಾನಗಳ ಮಹಾ ನಿರ್ದೇಶಕರು(ಡಿಜಿಸಿಎ), ವಿಮಾನ ಅಪಘಾತ ತನಿಖಾ ಸಂಸ್ಥೆ(ಎಎಐಬಿ) ಮತ್ತು ವಿಮಾನ ಸುರಕ್ಷತಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+