ಕಣ್ಣೂರು ಹೊಸ ಏರ್‌ಪೋರ್ಟ್ ವಿಶೇಷತೆಗಳೇನು?ರಾಜ್ಯಕ್ಕೆ ಏನು ಪ್ರಯೋಜನ?
ಕಣ್ಣೂರು, ನವೆಂಬರ್ 30: ಕಣ್ಣೂರು ನೂತನ ಏರ್‌ಪೋರ್ಟ್ ಡಿಸೆಂಬರ್ 9ಕ್ಕೆ ಉದ್ಘಾಟನೆಗೊಳ್ಳಿದ್ದು ಮೊದಲು ಅಬುಧಾಬಿಗೆ ಹಾರಾಟ ನಡೆಸಲಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಹಾಗಾದರೆ ಕಣ್ಣೂರು ಏರ್‌ಪೋರ್ಟ್ ನಿಂದ ರಾಜ್ಯಕ್ಕೆ ಏನು ಪ್ರಯೋಜನವಾಗಲಿದೆ, ಸದ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದ್ದು, ವಿಸ್ತರಣೆಯಾಗಲಿದೆ , ಕಣ್ಣೂರು ವಿಮಾನ ನಿಲ್ದಾಣದಿಂದ ಕೊಡಗು, ಮೈಸೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕಕ್ಕೆ ಸಾಕಷ್ಟು ಪ್ರಯೋಜನವಾಗಲಿದೆ. ಅಲ್ಲಿನ ಕಾಫಿ, ಪುಷ್ಪೋದ್ಯಮ, ಕರಿಮೆಣಸು, ಕೃಷಿ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ದೊರೆಯಲಿದೆ.
ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಲಿರುವುದರಿಂದ ಕಣ್ಣೂರು-ವಿರಾಜಪೇಟೆ-ಮೈಸೂರು ಸಂಪರ್ಕ ಮೇಲ್ದರ್ಜೆಗೆ ಏರಲಿದ್ದು, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ.
ಇದೀಗ 24 ಚೆಕ್ ಇನ್ ಕೌಂಟರ್‌ಗಳಿದ್ದು, ಬೇಡಿಕೆ ಆಧರಿಸಿ 48 ಕೌಂಟರ್‌ಗಳಿಗೆ ಹೆಚ್ಚಿಸುವ ಅವಕಾಶವನ್ನು ಹೊಂದಿದೆ. ಜನವರಿಯಲ್ಲಿ 13 ವಿಮಾನಗಳ ಹಾರಾಟ ನಡೆಯಲಿದ್ದು, ವಿದೇಶಿ ಸಂಸ್ಥೆಗಳ ವಿಮಾನ ಸೇವೆ ಆರಂಭಿಸಲು ಅನುಮತಿಗಾಗಿ ಕಾಯಲಾಗುತ್ತಿದೆ.

ಹೊಸ ವಿಮಾನ ನಿಲ್ದಾಣದ ವಿಶೇಷತೆಯೇನು?
ಹಲವು ಹೊಸತನದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಬಳಕೆಗೆ ಸಜ್ಜಾಗಿದೆ. ಒಟ್ಟು ಆರು ಅಂತಸ್ತಿನ ಟರ್ಮಿನಲ್ ಕಟ್ಟಡ, ಎಲ್ಲ ವ್ಯವಸ್ಥೆಯನ್ನು ಒಳಗೊಂಡಿರುವ ಎಟಿಎಸ್‌ನ ಅಂತಿಮ ಕಾಮಗಾರಿ ಪೂರ್ಣಗೊಂಡಿದೆ.

ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆ ಯಾವಾಗ?
ಕಣ್ಣೂರು ವಿಮಾನ ನಿಲ್ದಾಣವು ಡಿಸೆಂಬರ್ 9ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಉದ್ಘಾಟನೆಗೊಳ್ಳಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ವಿಮಾನ ನಿಲ್ದಾಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ತಪಾಸಣೆ, ಲಗ್ಗೇಜ್ ಸಿಸ್ಟಮ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಸೇವೆ ನೀಡಲು ತಾಲೀಮು ನಡೆಸಲಾಗಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ.

ಕರ್ನಾಟಕಕ್ಕೆ ಪ್ರಯೋಜನ ಏನು?
ಕಣ್ಣೂರು ನೂತನ ವಿಮಾನ ನಿಲ್ದಾಣ ಉದ್ಘಾಟನೆಗೊಂಡರೆ ಕರ್ನಾಟಕಕ್ಕೆ ಏನು ಪ್ರಯೋಜನ ಎಂದು ನೋಡುವುದಾದರೆ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನವಾಗುವ ಸಾಧ್ಯತೆ ಇದೆ.ಈ ಜಿಲ್ಲೆಗಳಲ್ಲಿ ಬೆಳೆಯುವ ಕೃಷಿ ಹಾಗೂ ಪುಷ್ಪೋದ್ಯಮಕ್ಕೆ ವಿದೇಶದಲ್ಲಿ ಮಾರುಕಟ್ಟೆ ದೊರೆಯಲಿದೆ. ಹೆಚ್ಚಾಗಿ ಹೊರ ರಾಜ್ಯ ಹಾಗೂ ವಿದೇಶದ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ ಇಷ್ಟೇ ಅಲ್ಲದೆ ಗಡಿ ಜಿಲ್ಲೆಗಳಿಎ ಹಲವು ರೀತಿಯ ಪ್ರಯೋಜನವನ್ನು ನಾವು ನಿರೀಕ್ಷಿಸಬಹುದು.

ಮೊದಲ ಹಂತದಲ್ಲಿ ಎಲ್ಲೆಲ್ಲಿಗೆ ಪ್ರಯಾಣ
ಮೊದಲ ಹಂತದಲ್ಲಿ ವಾರಕ್ಕೆ ನಾಲ್ಕು ದಿನ ಅಬುಧಾಬಿಗೆ ವಿಮಾನ ಬೆಳಗ್ಗೆ 9 ಗಂಟೆಗೆ ಹೊರಡಲಿದ್ದು, ಅಲ್ಲಿಂದ ರಾತ್ರಿ 8.20ಕ್ಕೆ ಆಗಮಿಸಲಿದೆ. ಗಲ್ಫ್ ದೇಶಗಳಿಗೆ ವಿಮಾನ ಹಾರಾಟಕ್ಕೆ ಹೆಚ್ಚಿನ ಬೇಡಿಕೆ ಇದೆ. ಕೆಲವು ದಿನಗಳ ಬಳಿಕ ನಿತ್ಯ ಪಯಣ ಬೆಳೆಸಲಿದೆ. ಅಲ್ಲದೇ, ಮಸ್ಕತ್, ಕುವೈತ್, ಶಾರ್ಜಾ ಸೇರಿದಂತೆ ವಿವಿಧ ದೇಶಗಳಿಗೆ ಸಂಪರ್ಕ ಕಲ್ಪಿಸಲು ತಯಾರಿ ನಡೆಯುತ್ತಿದೆ.

ಎರಡನೇ ಹಂತದಲ್ಲಿ ಎಲ್ಲೆಗೆ ವಿಮಾನ ಹಾರಾಟ
ಕೆಲವು ದಿನಗಳಲ್ಲಿ ಆಂತರಿಕ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ. ಬೆಂಗಳೂರು, ಹುಬ್ಬಳ್ಳಿ, ಚೆನ್ನೈ, ಹೈದರಾಬಾದ್, ಗೋವಾ, ಮುಂಬಯಿ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಿಗೆ ಹಾರಾಟ ನಡೆಸಲು ವಿವಿಧ ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ. ಅದೇ ರೀತಿ ಸರಕು ಸಾಗಣೆಗೆ ಕೂಡ ವ್ಯವಸ್ಥೆ ಮಾಡಲಾಗುತ್ತಿದ್ದು, ಹಂತಹಂತವಾಗಿ ಜಾರಿಗೆ ಬರಲಿದೆ.

ನೂತನ ತಂತ್ರಜ್ಞಾನ, ಆಧುನಿಕ ವ್ಯವಸ್ಥೆ
ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ಆಧುನಿಕ ವ್ಯವಸ್ಥೆ ಮಾಡಲಾಗಿದೆ. ನೂತನ ಸ್ಕ್ಯಾನಿಂಗ್ ತಂತ್ರಜ್ಞಾನದಿಂದ ತಪಾಸಣೆ ಶೀಘ್ರವಾಗಿ ಮುಗಿಯಲಿದೆ. ಅಲ್ಲದೇ, ಲಗ್ಗೇಜ್ ಡ್ರಾಪಿಂಗ್ ಸಿಸ್ಟಮ್ ಎಂಬ ತಂತ್ರಜ್ಞಾನ ಕೂಡ ಮಿಂಚಿನ ವೇಗದಲ್ಲಿ ಲಗ್ಗೇಜ್‌ಗಳನ್ನು ಪರಿಶೀಲನೆ ನಡೆಸಲಿದೆ. ಪ್ರತಿ ಗಂಟೆಗೆ 2 ಸಾವಿರ ಮಂದಿ ಪ್ರಯಾಣಿಕರನ್ನು ತಪಾಸಣೆ ಮಾಡಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆ ಇಲ್ಲಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications