• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ಕೊರೊನಾ ವೈರಸ್‌ಗೆ 2ನೇ ಬಲಿ

|

ತಿರುವನಂತಪುರಂ, ಮಾರ್ಚ್ 31: ಕೊರೊನಾ ವೈರಸ್‌ನಿಂದ ಕೇರಳದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಅಲ್ಲಿ ಸಾವಿನ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

   A shopkeeper in Kerala has been trashed by police | Kerela | police | Oneindia kannada

   ಮೃತ ವ್ಯಕ್ತಿಯನ್ನು ಅಬ್ದುಲ್ ಅಜೀಜ್ (68) ಎಂದು ಗುರ್ತಿಸಲಾಗಿದ್ದು, ಭಾನುವಾರವಷ್ಟೇ ಇವರಲ್ಲಿ ವೈರಸ್ ದೃಢಪಟ್ಟಿತ್ತು. ಬಳಿಕ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಅವರು, ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.

   ಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವು

   ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರ ಸಾವಿನೊಂದಿಗೆ ಕೇರಳ ರಾಜ್ಯದಲ್ಲಿ ವೈರಸ್ ನಿಂದ ಸಾವಿಗೀಡಾದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

   ಭಾರತದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆಸಿದ್ದು, ಸೋಂಕಿನಿಂದ ಬಳಲುತ್ತಿದ್ದ ಕೇರಳ ವ್ಯಕ್ತಿ ಮಂಗಳವಾರ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ವೈರಸ್'ಗೆ ಬಲಿಯಾದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.

   ಕೇರಳದ ತಿರುವನಂತಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

   ಮಾರಣಾಂತಿಕ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕೇರಳದ ವೃದ್ಧ ದಂಪತಿ

   ಈ ನಡುವೆ ಗಡಹ ಸಚಿವಾಲಯ ಮಾಹಿತಿ ನೀಡಿರುವ ಪ್ರಕಾರ ದೇಶದಲ್ಲಿ ಸೋಂಕಿತರ ಸಂಖ್ಯೆ 1,300ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 120 ಮಂದಿ ಈಗಾಗಲೇ ವೈರಸ್ ನಿಂದ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ.

   English summary
   Kerala recorded second death on Tuesday after a 68-year-old died at Thiruvananthapuram.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X