'ಲವ್ ಜಿಹಾದ್' ಇರುವುದು ನಿಜ, ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು: ಪಿಸಿ ಜಾರ್ಜ್

ತಿರುವನಂತಪುರಂ, ಏಪ್ರಿಲ್ 12: ಹಿಂದೂಗಳನ್ನು ಮತಾಂತರ ಮಾಡಲು 'ಲವ್ ಜಿಹಾದ್' ನಡೆಯುತ್ತಿದೆ ಮತ್ತು ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಪರಿವರ್ತಿಸಲಾಗುವುದು ಎಂಬ ಚರ್ಚೆಗಳ ನಡುವೆ ಕೇರಳದ ಶಾಸಕ ಪಿಸಿ ಜಾರ್ಜ್ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ. 'ಮುಸ್ಲಿಮರು ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಉದ್ದೇಶಿಸಿದ್ದಾರೆ. ಮುಸ್ಲಿಮರು ಈಗಾಗಲೇ ಕ್ರೈಸ್ತ ದೇಶಗಳಲ್ಲಿ ಒತ್ತುವರಿ ಮಾಡಿಕೊಂಡು ಅವುಗಳನ್ನು ಇಸ್ಲಾಮಿಕ್ ದೇಶಗಳನ್ನಾಗಿ ಬದಲಿಸುತ್ತಿದ್ದಾರೆ' ಎಂದು ಜಾರ್ಜ್ ಆರೋಪಿಸಿದ್ದಾರೆ.

ಬುಡಕಟ್ಟು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಎಚ್‌ಆರ್‌ಡಿಎಸ್ ಇಂಡಿಯಾ ಎಂಬ ಎನ್‌ಜಿಒ, ಇಡುಕ್ಕಿಯ ತೊಡುಪುಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜಾರ್ಜ್, ಭಾರತವನ್ನು 'ಹಿಂದೂ ರಾಷ್ಟ್ರ' ಎಂಬುದಾಗಿ ಘೋಷಿಸಬೇಕು. 2030ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಮುಸ್ಲಿಮರು ಯೋಜಿಸಿದ್ದಾರೆ. ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುವ ಪ್ರಯತ್ನವು ಅಪನಗದೀಕರಣದಿಂದಾಗಿ ವಿಳಂಬವಾಗಿದೆ ಎಂದು ಹೇಳಿದ್ದಾರೆ.

'ಲವ್ ಜಿಹಾದ್ ಎನ್ನುವುದು ಸತ್ಯ. 2030ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಮುಸ್ಲಿಮರು ಯೋಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಪನಗದೀಕರಣ ನಡೆಯಿಂದ ಇದು ತಡವಾಗಿದೆ' ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ ಮುಸ್ಲಿಮರು ಸಕ್ರಿಯ

ಕೇರಳದಲ್ಲಿ ಮುಸ್ಲಿಮರು ಸಕ್ರಿಯ

'2030ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಮುಸ್ಲಿಮರು ಕೇರಳದಲ್ಲಿ ಬಹಳ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದು ತಡವಾಗಿದೆ. ನಾವು ಈ ದೇಶವನ್ನು ಯಾವುದೇ ಒಂದು ಸಮುದಾಯಕ್ಕೆ ಬಿಟ್ಟುಕೊಡಬಹುದೇ? ಇದನ್ನು ಚರ್ಚೆ ಮಾಡಬೇಕಿದೆ. ಯಾರಾದರೂ ಮಾತನಾಡಲೇಬೇಕು' ಎಂದಿದ್ದಾರೆ.

ಎಲ್ಲವೂ ಧರ್ಮಗಳಿಗೆ ಆದ್ಯತೆ ನೀಡುತ್ತವೆ

ಎಲ್ಲವೂ ಧರ್ಮಗಳಿಗೆ ಆದ್ಯತೆ ನೀಡುತ್ತವೆ

'ಜಗತ್ತಿನೆಲ್ಲೆಡೆ ಇರುವ ದೇಶಗಳನ್ನು ಪರಿಗಣಿಸೋಣ. ಇಲ್ಲಿ ಬಂಡವಾಳಶಾಹಿ ದೇಶಗಳು, ಬಡ ದೇಶಗಳು ಮತ್ತು ಭಾರತದಂತಹ ಮೂರನೇ ಜಗತ್ತಿನ ದೇಶಗಳಿವೆ. ಎಲ್ಲ ದೇಶಗಳೂ ಕೆಲವು ಧರ್ಮಗಳಿಗೆ ಆದ್ಯತೆ ನೀಡುತ್ತವೆ. ಅರೇಬಿಯನ್ ದೇಶಗಳಲ್ಲಿ ಅವು ಇಸ್ಲಾಮಿಕ್ ಮಾತ್ರವಲ್ಲ, ಇಸ್ಲಾಮಿಕ್‌ನ ಹೊರತಾಗಿ ಇರುವುದೆಲ್ಲವೂ ಅಸಮರ್ಪಕ ಎಂದು ಭಾವಿಸುತ್ತವೆ' ಎಂದು ಜಾರ್ಜ್ ಹೇಳಿದ್ದಾರೆ.

ಫ್ರಾನ್ಸ್ ಮುಸ್ಲಿಮರ ವಶವಾಗುತ್ತಿದೆ

ಫ್ರಾನ್ಸ್ ಮುಸ್ಲಿಮರ ವಶವಾಗುತ್ತಿದೆ

'ಅಮೆರಿಕದಂತಹ ದೇಶಗಳು ಕೂಡ ಈ ಸಾಲಿನಲ್ಲಿ ಬೀಳುತ್ತಿವೆ. ಆದರೆ ಸನ್ನಿವೇಶಗಳು ಈಗ ಬದಲಾಗುತ್ತಿವೆ. ಮುಸ್ಲಿಮರು ಫ್ರಾನ್ಸ್ ಒಳಗೆ ನುಸುಳಿದ್ದರು. ಈಗ ಅವರು ಅದನ್ನು ಮುಸ್ಲಿಂ ದೇಶವನ್ನಾಗಿ ಪರಿವರ್ತಿಸುತ್ತಿವೆ. ಅದು ಕ್ರೈಸ್ತ ಸಮುದಾಯದವರ ದೇಶವಾಗಿದ್ದರೂ ಮುಸ್ಲಿಮರು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಅದು ಹೆಚ್ಚು ತಡವಾಗುವುದಿಲ್ಲ' ಎಂದಿದ್ದಾರೆ.

ಹಿಂದೂ ರಾಷ್ಟ್ರ ಎಂದು ಘೋಷಿಸುವುದೇ ಪರಿಹಾರ

ಹಿಂದೂ ರಾಷ್ಟ್ರ ಎಂದು ಘೋಷಿಸುವುದೇ ಪರಿಹಾರ

'ಇದು ಎಷ್ಟು ದಿನ ನಡೆಯುತ್ತದೆ? ಇಲ್ಲಿ ಲವ್ ಜಿಹಾದ್ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ನನಗೆ ಗೊತ್ತು, ಲವ್ ಜಿಹಾದ್ ಎನ್ನುವುದು ನಿಜವೆಂದು. ಲವ್ ಜಿಹಾದ್ ಇದೆ ಎಂದು ನಾನು ಹೇಳುತ್ತೇನೆ. ನಾವು ಎತ್ತ ಸಾಗುತ್ತಿದ್ದೇವೆ ಎಂದು ನಾನು ಹೇಳುವಾಗ ನೀವು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಇದಕ್ಕೆ ಇರುವುದು ಒಂದೇ ಒಂದು ಪರಿಹಾರ. ಗೌರವಾನ್ವಿತ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+