• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದೆ ಮೋದಿ ಜರಿದ್ದಿದ್ದ ಜಾರ್ಜ್ ಈಗ ಬಿಜೆಪಿ ಪಾಲಿನ ಹೀರೋ

|
Google Oneindia Kannada News

ತಿರುವನಂತಪುರ ಮೇ 27: ದ್ವೇಷಪೂರಿತ ಭಾಷಣಗಳಿಗೆ ಖ್ಯಾತಿಯಾಗಿರುವ ಹಾಗೂ ಈ ಹಿಂದೆ ನರೇಂದ್ರ ಮೋದಿಯನ್ನು ಕೆಟ್ಟ ಪ್ರಧಾನಿ ಎಂದು ಕರೆದಿದ್ದ ಕೇರಳದ ರಾಜಕೀಯ ನಾಯಕ ಪಿ. ಸಿ. ಜಾರ್ಜ್ ಇದೀಗ ಬಿಜೆಪಿ ಪಾಲಿಗೆ ಹೀರೋ ಆಗಿದ್ದಾರೆ.

ಮುಸ್ಲಿಂ ಸಮುದಾಯದ ವಿರುದ್ಧ ಸರಣಿ ಭಾಷಣಗಳ ನಂತರ ಸಂಘ ಪರಿವಾರ ಮತ್ತು ಬಿಜೆಪಿಗೆ ಮಾಜಿ ಶಾಸಕ ಜಾರ್ಜ್ ಹತ್ತಿರವಾಗಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯನ್ನು 'ದೇಶ ಕಂಡ ಅತ್ಯಂತ ಕೆಟ್ಟ ಪ್ರಧಾನಿ' ಎಂದು ಜಾರ್ಜ್ ಜರಿದಿದ್ದರು.

ದ್ವೇಷ ಭಾಷಣದ ವಿರುದ್ಧ ಕಠಿಣ ಕ್ರಮ: ಪಿಣರಾಯಿ ವಿಜಯನ್‌ ದ್ವೇಷ ಭಾಷಣದ ವಿರುದ್ಧ ಕಠಿಣ ಕ್ರಮ: ಪಿಣರಾಯಿ ವಿಜಯನ್‌

ತಿರುವನಂತಪುರ ಮತ್ತು ಕೊಚ್ಚಿಯಲ್ಲಿ ಮಾಡಿದ ದ್ವೇಷದ ಭಾಷಣಗಳಿಗೆ ಸಂಬಂಧಿಸಿದಂತೆ ಜಾರ್ಜ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ.ಮುರಳೀಧರನ್ ಸೇರಿದಂತೆ ಬಿಜೆಪಿ ನಾಯಕರು, ಸಂಘ ಪರಿವಾರದ ಮುಖಂಡರು ಪೊಲೀಸರ ವಶದಲ್ಲಿರುವ ಜಾರ್ಜ್‌ರನ್ನು ಗುರುವಾರ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ.

ವಿವಿಧ ರಾಜ್ಯದಲ್ಲಿ ಎಎಪಿ ಕಾರ್ಯತಂತ್ರ: ಬಿಜೆಪಿ ಪ್ರತಿ ತಂತ್ರ! ವಿವಿಧ ರಾಜ್ಯದಲ್ಲಿ ಎಎಪಿ ಕಾರ್ಯತಂತ್ರ: ಬಿಜೆಪಿ ಪ್ರತಿ ತಂತ್ರ!

 ಕೇರಳ ಹೈಕೋರ್ಟ್ ನಿಂದ ಜಾಮೀನು

ಕೇರಳ ಹೈಕೋರ್ಟ್ ನಿಂದ ಜಾಮೀನು

ಪ್ರಕರಣ ಸಂಬಂಧ ಜಾರ್ಜ್‌ರನ್ನು ಗುರುವಾರ ತಿರುವನಂತಪುರದ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೇರಳ ಹೈಕೋರ್ಟ್‌ನಲ್ಲಿ ಜಾರ್ಜ್ ಸಲ್ಲಿಸಿರುವ ಜಾಮೀನು ಅರ್ಜಿಯು ಶುಕ್ರವಾರ ವಿಚಾರಣೆಗೆ ಬಂದಿದ್ದು, ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಪ್ರಾದೇಶಿಕ ಪಕ್ಷ ಕೇರಳ ಕಾಂಗ್ರೆಸ್ ನ ಮಾಜಿ ನಾಯಕರಾಗಿರುವ ಜಾರ್ಜ್, 30 ವರ್ಷಗಳ ಕಾಲ ಶಾಸಕರಾಗಿದ್ದರು. ಅವರು ಸ್ಥಾಪಿಸಿದ 'ಜನಪಕ್ಷಂ' ರಾಜಕೀಯ ಪಕ್ಷವನ್ನು 2019ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ದೊಂದಿಗೆ ವಿಲೀನ ಮಾಡಿದರು. ಆದರೆ ಎನ್ ಡಿಎ ಜತೆಗಿನ ಅವರ ಬಾಂಧವ್ಯ ಕೆಲವೇ ತಿಂಗಳಲ್ಲಿ ಮುರಿದು ಬಿತ್ತು.

 ಕೆಟ್ಟ ಪ್ರಧಾನಿ ಎಂದು ಜರಿದಿದ್ದ ಜಾರ್ಜ್

ಕೆಟ್ಟ ಪ್ರಧಾನಿ ಎಂದು ಜರಿದಿದ್ದ ಜಾರ್ಜ್

2019ರ ಡಿಸೆಂಬರ್‌ನಲ್ಲಿ ಎನ್ ಡಿಎ ತೊರೆಯುವ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ ಒಬ್ಬ ಕೆಟ್ಟ ಪ್ರಧಾನಿ ಎಂದು ನಾಲಿಗೆ ಹಾರಿಬಿಟ್ಟಿದ್ದರು. ಅಲ್ಲದೇ ಮೋದಿಯವರು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಆದರೆ ಇದೇ ಜಾರ್ಜ್ ಈ ಹಿಂದೆ ಮೋದಿರನ್ನು ಹಾಡಿ ಹೊಗಳಿದ್ದರು. 2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ನ ಭಾಗವಾಗಿದ್ದ ಅವರು, ನರೇಂದ್ರ ಮೋದಿ ಚಿತ್ರವಿರುವ ಟೀ ಶರ್ಟ್ ಧರಿಸಿ 'ಐಕ್ಯತಾ ಓಟ' ಅಭಿಯಾನಕ್ಕೆ ಚಾಲನೆ ನೀಡಿದ್ದರು.

 ಕ್ರೈಸ್ತ ಬಿಷಪ್‌ಗಳಿಗೆ ಬಿಜೆಪಿ ಬೆಂಬಲ

ಕ್ರೈಸ್ತ ಬಿಷಪ್‌ಗಳಿಗೆ ಬಿಜೆಪಿ ಬೆಂಬಲ

ಮೇ 31ರಂದು ತೃಕ್ಕಕ್ಕರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕೇರಳದ ಕ್ರೈಸ್ತ ಮತ ಬ್ಯಾಂಕ್ ಗೆ ಹತ್ತಿರವಾಗುವ ಉದ್ದೇಶದಿಂದ ಬಿಜೆಪಿ ಜಾರ್ಜ್‌ಗೆ ಬೆಂಬಲ ನೀಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 'ಲವ್ ಜಿಹಾದ್' ಮತ್ತು 'ನಾರ್ಕೋಟಿಕ್ ಜಿಹಾದ್' ವಿಷಯ ಪ್ರಸ್ತಾಪಿಸಿರುವ ಕೇರಳದ ಕ್ರೈಸ್ತ ಬಿಷಪ್‌ಗಳಿಗೆ ಬಿಜೆಪಿ ಬೆಂಬಲ ನೀಡುತ್ತಿದೆ.

 ಬಿಜೆಪಿ ನಿಜ ಬಣ್ಣ ಬಯಲು

ಬಿಜೆಪಿ ನಿಜ ಬಣ್ಣ ಬಯಲು

ಬಿಜೆಪಿಯ ನಡೆಯನ್ನು ವಿರೋಧಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ ಗುರುವಾರ ನಡೆದ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, "ಕೇರಳದ ಕ್ರಿಶ್ಚಿಯನ್ ಸಮುದಾಯವನ್ನು ಪಕ್ಷವು ರಕ್ಷಿಸುತ್ತಿದೆ ಎಂಬ ಭಾವನೆ ಮೂಡಿಸುವ ಉದ್ದೇಶದಿಂದ ಬಿಜೆಪಿ ಜಾರ್ಜ್‌ರನ್ನು ಬೆಂಬಲಿಸುತ್ತಿದೆ,'' ಎಂದು ಹೇಳಿದರು.

"ದೇಶದ ಇತರ ಭಾಗಗಳಲ್ಲಿ ಕ್ರಿಶ್ಚಿಯನ್ ಸಮುದಾಯದವರ ಮೇಲೆ ನಡೆಯುತ್ತಿರುವ ಹಲ್ಲೆಗಳು ಬಿಜೆಪಿ ಮತ್ತು ಇತರೆ ಸಂಘ ಪರಿವಾರದ ನಿಜವಾದ ಬಣ್ಣವನ್ನು ಬಯಲು ಮಾಡುತ್ತದೆ,'' ಎಂದು ಪಿಣರಾಯಿ ವಿಜಯನ್ ದೂರಿದರು.

 ಪೂಂಜಾರ್ ನಿಂದ ಏಳು ಬಾರಿ ಶಾಸಕ

ಪೂಂಜಾರ್ ನಿಂದ ಏಳು ಬಾರಿ ಶಾಸಕ

ಕೊಟ್ಟಾಯಂ ಮೂಲದ ಪೂಂಜಾರ್ ಮೂಲದ ಜಾರ್ಜ್, ಪೂಂಜಾರ್ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿದ್ದಾರೆ. ಬಹುತೇಕ ಕೇರಳ ಪ್ರಾದೇಶಿಕ ಕಾಂಗ್ರಸ್ ಅನ್ನು ಪ್ರತಿನಿಧಿಸಿದ್ದಾರೆ. 2016ರಲ್ಲಿ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಶಾಸಕ ಸಹ ಆದರು. ಆದರೆ 2021ರ ವಿಧಾನಸಭೆ ಚುನಾವಣೆಯಲ್ಲಿ ಸ್ವಂತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಕಳೆದ ಕೆಲವು ತಿಂಗಳಿನಿಂದ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಜಾರ್ಜ್ ಸರಣಿ ಭಾಷಣಗಳನ್ನು ಮಾಡಿದ್ದಾರೆ.

   ಫೀಲ್ಡ್ ಗೆ ನುಗ್ಗಿದ ಅಭಿಮಾನಿಯನ್ನು ಕುರಿಮರಿಯಂತೆ ಹೊತ್ತೊಯ್ದ ಪೊಲೀಸರು:Kohli ಮಾಡಿದ್ದೇನು? |#cricket |Oneindia
   English summary
   Accused of hate speeches and calling Prime Minister Narendra Modi the worst PM, Kerala politician P. C. George, has now turned a hero for the BJP.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X