• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ಕೊರೊನಾ ಮೂರನೇ ಪ್ರಕರಣ ಪತ್ತೆ: ಹೈ ಅಲರ್ಟ್‌

|

ತಿರುವನಂತಪುರಂ, ಫೆಬ್ರವರಿ 3: ಕೇರಳದಲ್ಲಿ ಕೊರೊನಾ ವೈರಸ್ ಮೂರನೇ ಪ್ರಕರಣ ದೃಢಪಟ್ಟಿದೆ.

ಇದಕ್ಕೂ ಮುನ್ನ ರಾಜ್ಯದಲ್ಲಿ ಇನ್ನೆರೆಡು ಪ್ರಕರಣಗಳು ದೃಢಪಟ್ಟಿದ್ದವು. ಯಾವುದೇ ಕಾರಣಕ್ಕೂ ಯಾರೂ ಕೂಡ ಚೀನಾಕ್ಕೆ ಭೇಟಿ ನೀಡಬೇಡಿ ಎಂದು ಕೇಂದ್ರ ಕುಟುಂಬ ಮತ್ತು ಕಲ್ಯಾಣ ಇಲಾಖೆ ಮನವಿ ಮಾಡಿದೆ.

ಚೀನಾದಿಂದ ರಾಜ್ಯಕ್ಕೆ ಬಂದವರಲ್ಲಿ ಕೊರೊನಾ ವೈರಸ್ ಇಲ್ಲ

ಜನವರಿ 15ರಿಂದ ಇಲ್ಲಿಯವರೆಗೆ ಯಾರೂ ಚೀನಾದಲ್ಲಿದ್ದರು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇರಳ ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ಚೀನಾದಿಂದ ಪ್ರವಾಸ ಮುಗಿಸಿ ಮನೆಗೆ ಬರುವವರಿಗೆ ಟ್ರಾವೆಲ್ ಅಡ್ವೈಸರಿಯನ್ನು ನೀಡಲಾಗುತ್ತಿದೆ. ಶಿಜಿಯಾಜುವಾಂಗ್‌ನಲ್ಲಿ 2000 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಕಳೆದ ಎರಡು ವಾರಗಳಲ್ಲಿ ವುಹಾನ್‌ನಿಂದ ಯಾರ್ಯಾರು ಬಂದಿದ್ದಾರೆ ಎಂದು ಪತ್ತೆ ಮಾಡಲಾಗುತ್ತಿದೆ.

ಇನ್ನು ಕರ್ನಾಟಕದಲ್ಲಿ ಕೂಡ ಹರಡುವ ಸಾಧ್ಯತೆ ಇದ್ದು, ಕೊಡಗು, ಮಂಗಳೂರು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದುವರೆಗೆ ಕೊರೊನಾ ವೈರಸ್‌ನಿಂದ ಚೀನಾದಲ್ಲಿ 361 ಮಂದಿ ಮೃತಪಟ್ಟಿದ್ದಾರೆ, 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಕೊರೊನಾ ವೈರಸ್ ತಗಲಿರುವ 9,618 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 478 ಸೋಂಕಿತರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ 9, ಕ್ಯಾಲಿಫೋರ್ನಿಯಾದಲ್ಲಿ 4, ವಾಶಿಂಗ್ ಟನ್ ಮತ್ತು ಅರಿಜೋನಾದಲ್ಲಿ 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

English summary
Kerala today confirmed the third case of coronavirus even as India issued a fresh travel advisory to China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X