ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ: 500 ರೂ ಲಾಟರಿ ಟಿಕೆಟ್‌ಗೆ 25 ಕೋಟಿ ಬಂಪರ್ ಲಾಟರಿ ಗೆದ್ದ ಆಟೋ ಚಾಲಕ

|
Google Oneindia Kannada News

ತಿರುವನಂತಪುರಂ, ಸೆ. 19: ಲಾಟರಿ ಟಿಕೆಟ್ ಖರೀದಿಸಲು 500 ರೂಪಾಯಿ ಕೂಡಿಟಿದ್ದ ತನ್ನ ಮಗನ ಪಿಗ್ಗಿ ಬಾಕ್ಸ್ ಅನ್ನು ಒಡೆದಿದ್ದ ಕೇರಳದ 30 ವರ್ಷದ ಆಟೋ ರಿಕ್ಷಾ ಚಾಲಕ, 25 ಕೋಟಿ ರೂಪಾಯಿಯ ಓಣಂ ಬಂಪರ್ ಲಾಟರಿಯನ್ನು ಗೆದ್ದಿದ್ದಾರೆ.

ರಾಜಧಾನಿ ತಿರುವನಂತಪುರಂನ ಗೋರ್ಕಿ ಭವನದಲ್ಲಿ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ವಿಜೇತ ಸಂಖ್ಯೆಯನ್ನು ರಾಜ್ಯ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಆಯ್ಕೆ ಮಾಡಿದರು.

ಬಾಲ್ಯ ಪ್ರೇಮಕ್ಕೆ ಬ್ರೇಕ್: ಹುಡುಗಿಯ ಅದೃಷ್ಟವೇ ಬದಲಾಯಿಸಿದ ಲಾಟರಿಬಾಲ್ಯ ಪ್ರೇಮಕ್ಕೆ ಬ್ರೇಕ್: ಹುಡುಗಿಯ ಅದೃಷ್ಟವೇ ಬದಲಾಯಿಸಿದ ಲಾಟರಿ

"ಆರಂಭದಲ್ಲಿ ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಹೆಂಡತಿಗೆ ಎರಡು ಬಾರಿ ಪರೀಕ್ಷಿಸಲು ಕೇಳಿದೆ. ನನ್ನ ನಂಬರ್ ಟಿಜೆ-750605 ಪ್ರಥಮ ಬಹುಮಾನ ಪಡೆದಿದೆ" ಎಂದು ರಾಜಧಾನಿಯ ಶ್ರೀವರಾಹಂ ನಿವಾಸಿ ಕೆ ಅನೂಪ್ ಹೇಳಿದ್ದಾರೆ.ಶನಿವಾರ ರಾತ್ರಿ ಪಜವಂಗಡಿ ಗಣಪತಿ ದೇವಸ್ಥಾನದ ಬಳಿಯ ತಮ್ಮ ಸಂಬಂಧಿಕರೊಬ್ಬರ ಲಾಟರಿ ಸ್ಟಾಲ್‌ನಿಂದ ಆಟೋ ಚಾಲಕ ಕೆ ಅನೂಪ್ ಟಿಕೆಟ್ ಖರೀದಿಸಿದ್ದಾರೆ.

ಮಗನ ಪಿಗ್ಗಿ ಬಾಕ್ಸ್‌ನಿಂದ ಹಣ ತೆಗೆದುಕೊಂಡಿದ್ದೆ

ಮಗನ ಪಿಗ್ಗಿ ಬಾಕ್ಸ್‌ನಿಂದ ಹಣ ತೆಗೆದುಕೊಂಡಿದ್ದೆ

"ನನಗೆ ಹಣದ ಕೊರತೆ ಇತ್ತು. ಅದು ನನ್ನ ಮಗನ ಪಿಗ್ಗಿ ಬಾಕ್ಸ್‌ನಿಂದ ಹಣ ತೆಗೆದುಕೊಳ್ಳುವಂತೆ ಮಾಡಿತ್ತು. ಈ ಮೊತ್ತವನ್ನು ಹೇಗೆ ಬಳಸಿಕೊಳ್ಳಬೇಕೆಂದು ನಾನು ನಿರ್ಧರಿಸಿಲ್ಲ" ಎಂದು ಅನೂಪ್ ಹೇಳಿದರು.

ಲಾಟರಿ ಇಲಾಖೆಯ ಪ್ರಕಾರ, ತೆರಿಗೆ ಕಡಿತ ಮತ್ತು ಏಜೆಂಟ್ ಕಮಿಷನ್ ನಂತರ ಅನೂಪ್ ಸುಮಾರು 16.25 ಕೋಟಿ ರೂಪಾಯಿ ಪಡೆಯಲಿದ್ದಾರೆ.

ತನ್ನ ಸಂಬಂಧಿಕರೊಬ್ಬರ ನಿದರ್ಶನದಲ್ಲಿ ಕೆಲಸಕ್ಕಾಗಿ ಮಲೇಷ್ಯಾಕ್ಕೆ ಹೋಗಲು ಯೋಜಿಸುತ್ತಿದ್ದ ಸಮಯದಲ್ಲಿ ಲಾಟರಿ ಮೊತ್ತ ಬಂದಿದೆ ಎಂದು ಅನೂಪ್ ಸಂತಸ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮಲೇಷ್ಯಾಕ್ಕೆ ಹೊರಟ್ಟಿದ್ದ ಅನೂಪ್

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮಲೇಷ್ಯಾಕ್ಕೆ ಹೊರಟ್ಟಿದ್ದ ಅನೂಪ್

"ಸಾಂಕ್ರಾಮಿಕ ರೋಗವು ನಮ್ಮ ಬೆನ್ನೆಲುಬನ್ನು ಮುರಿಯಿತು. ಇದರ ಜೊತೆಗೆ ಹೆಚ್ಚಿನ ಇಂಧನ ಬೆಲೆಯು ನಮ್ಮ ಸಂಕಟಗಳಿಗೆ ಮತ್ತಷ್ಟು ಸಂಕಷ್ಟಗಳನ್ನು ಸೇರಿಸಿತು. ನಾನು ಅನೇಕ ಸಾಲಗಳನ್ನು ಮಾಡಿಕೊಂಡೆ. ಹೀಗಾಗಿ ನನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮಲೇಷ್ಯಾಕ್ಕೆ ಹೋಗಲು ಯೋಜಿಸುತ್ತಿದ್ದೆ. ಈಗ, ನಾನು ಮತ್ತೆ ಈ ಬಗ್ಗೆ ಚಿಂತಿಸಬೇಕಿದೆ" ಎಂದು ಆಟೋಚಾಲಕ ಹೇಳಿದ್ದಾರೆ.

ತಾನು ಬಡತನದಲ್ಲಿ ಮುಳುಗಿದ್ದರಿಂದ ಈ ಹಣವನ್ನು ಬಹಳ ವಿವೇಚನೆಯಿಂದ ಖರ್ಚು ಮಾಡುವುದಾಗಿ ಹೇಳಿದ್ದಾರೆ. ಅನೂಪ್ ನಿಯಮಿತವಾಗಿ ಲಾಟರಿ ಖರೀದಿಸುತ್ತಿದ್ದರು. ಈ ಹಿಂದೆ ಒಮ್ಮೆ 5000 ರೂಪಾಯಿ ಬಹುಮಾನ ಪಡೆದಿದ್ದರು ಎಂದು ತಿಳಿಸಿದರು.

ಒಟ್ಟು 66.54 ಲಕ್ಷ ಓಣಂ ಲಾಟರಿ ಟಿಕೆಟ್ ಮಾರಾಟ

ಒಟ್ಟು 66.54 ಲಕ್ಷ ಓಣಂ ಲಾಟರಿ ಟಿಕೆಟ್ ಮಾರಾಟ

ರಾಜ್ಯದಲ್ಲಿ ಈ ವರ್ಷ ಓಣಂ ಬಂಪರ್‌ಗೆ ಹೆಚ್ಚಿನ ಜನಪ್ರಿಯತೆ ಮತ್ತು ಬೇಡಿಕೆ ಕಂಡಿದೆ ಎಂದು ರಾಜ್ಯ ಹಣಕಾಸು ಸಚಿವ ಬಾಲಗೋಪಾಲ್ ಹೇಳಿದ್ದಾರೆ.

ಕಳೆದ ವರ್ಷದ 54 ಲಕ್ಷ ಓಣಂ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಬಾರಿ ಒಟ್ಟು 66.54 ಲಕ್ಷ ಓಣಂ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದನ್ನು ಯಶಸ್ವಿಗೊಳಿಸಿದ ಜನರಿಗೆ ನಾವು ಋಣಿಯಾಗಿದ್ದೇವೆ ಎಂದು ಹಣಕಾಸು ಸಚಿವ ಹೇಳಿದರು.

ಈ ವರ್ಷದ ಎರಡನೇ ಬಹುಮಾನ 5 ಕೋಟಿ ರೂಪಾಯಿ ಟಿಜಿ 270912 ಟಿಕೆಟ್‌ಗೆ ಹೋಗುತ್ತದೆ. ಜೊತೆಗೆ ಹತ್ತು ಮಂದಿ ತಲಾ 1 ಕೋಟಿ ರೂಪಾಯಿ ಗೆದ್ದಿದ್ದಾರೆ.

ಓಣಂ ಬಂಪರ್‌ನಿಂದ ಒಟ್ಟು 332.74 ಕೋಟಿ ರೂಪಾಯಿ ಆದಾಯ ಬಂದಿದ್ದು, ಈ ಪೈಕಿ 126 ಕೋಟಿ ರೂಪಾಯಿ ಬಹುಮಾನ ಮೊತ್ತದಲ್ಲಿ ವಿತರಿಸಲಾಗುವುದು ಎಂದು ಲಾಟರಿ ಇಲಾಖೆ ತಿಳಿಸಿದೆ. ಇದಲ್ಲದೆ, ಕಳೆದ ವರ್ಷದ ಓಣಂ ಟಿಕೆಟ್‌ನ ಬೆಲೆ 300 ರೂ ಆಗಿತ್ತು, ಆದರೆ ಈ ಬಾರಿ ಟಿಕೆಟ್‌ನ ಬೆಲೆ ₹ 500 ರೂ ಆಗಿದೆ.

ಪ್ರತಿದಿನ 40 ರೂ.ಗೆ ಟಿಕೆಟ್‌ ಮಾರಾಟ

ಪ್ರತಿದಿನ 40 ರೂ.ಗೆ ಟಿಕೆಟ್‌ ಮಾರಾಟ

ಕುತೂಹಲಕಾರಿಯಾಗಿ ಕಳೆದ ವರ್ಷದ ಓಣಂ ಲಾಟರಿ 12 ಕೋಟಿ ಗೆದ್ದಿದ್ದ ಕೊಚ್ಚಿ ಮೂಲದ ಮೌಲ್ಯದ ಕೆ ಜಯಪಾಲನ್ ಕೂಡ ಆಟೋರಿಕ್ಷಾ ಚಾಲಕ. ಈ ಬಾರಿಯ ವಿಜೇತರ ಘೋಷಣೆಯ ಮುನ್ನಾದಿನದಂದು ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡಿದ ಜಯಪಾಲನ್, ಈ ಬಾರಿಯೂ ಟಿಕೆಟ್ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

ಲಾಟರಿಯಲ್ಲಿ ಗೆದ್ದ ಹಣವನ್ನು ಅವರು ಭೂಮಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹೂಡಿಕೆ ಮಾಡಿದ್ದರೂ, ಅವರು ಇನ್ನೂ ತಮ್ಮ ಆಟೋ ಓಡಿಸುತ್ತಿದ್ದಾರೆ.

"ನನ್ನ ಬೇರುಗಳನ್ನು ನಾನು ಹೇಗೆ ಮರೆಯಲಿ? ಈ ವಾಹನ ನನಗೆ ಎಲ್ಲವನ್ನೂ ನೀಡಿದೆ. ಆದ್ದರಿಂದ ನಾನು ಈ ವೃತ್ತಿಯನ್ನು ಬಿಡಲು ಸಾಧ್ಯವಿಲ್ಲ" ಎಂದು ಅವರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು.

ಸರ್ಕಾರ ನಡೆಸುವ ಲಾಟರಿ ವರ್ಷವಿಡೀ ರಾಜ್ಯದಲ್ಲಿ ದೊಡ್ಡ ಹಿಟ್ ಆಗಿದೆ ಮತ್ತು ಮದ್ಯದ ಹೊರತಾಗಿ ತೆರಿಗೆಯೇತರ ಆದಾಯ ಗಳಿಸುವ ಪ್ರಮುಖರಲ್ಲಿ ಒಂದಾಗಿದೆ.

"ಪ್ರತಿದಿನ ಡ್ರಾ ಇದೆ. ಪ್ರತಿದಿನ ಸರಾಸರಿ ಒಂಬತ್ತು ಮಿಲಿಯನ್ ಟಿಕೆಟ್‌ಗಳು ಮಾರಾಟವಾಗುತ್ತವೆ. ಕನಿಷ್ಠ 100,000 ಮಾರಾಟಗಾರರು ಇದ್ದಾರೆ. ಟಿಕೆಟ್‌ಗಳನ್ನು 40 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಟಿಕೆಟ್ ಮಾರಾಟಗಾರ ಪ್ರತಿ ಟಿಕೆಟ್‌ಗೆ 7 ರೂಪಾಯಿ ಕಮಿಷನ್ ಪಡೆಯುತ್ತಾರೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ಬಜೆಟ್‌ನಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನೇತೃತ್ವದ ಸರ್ಕಾರವು ಬಹುಮಾನದ ಹಣವನ್ನು ಹೇಗೆ ಬಳಸುವುದು ಎಂಬುದರ ಕುರಿತು ವಿಜೇತರಿಗೆ ಸರಿಯಾದ ತರಬೇತಿ ನೀಡುವ ಯೋಜನೆಯನ್ನು ಘೋಷಿಸಿತು.

English summary
Kerala auto driver wins ₹25 crore in Onam lottery, who broke his son’s piggybox to buy a ₹500 lottery ticket, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X