• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಸರಗೋಡು: ಮೃತ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ರಾಹುಲ್

|

ಕಾಸರಗೋಡು, ಮಾರ್ಚ್ 04: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾರ್ಚ್ 12ರಂದು ಕಾಸರಗೋಡು ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ಭೇಟಿ ನೀಡಲಿದ್ದಾರೆ.

ಫೆಬ್ರವರಿ 17ರಂದು ಪೆರಿಯಾ ಕಲ್ಯೋಟ್‌ನಲ್ಲಿ ಹತ್ಯೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‌ಲಾಲ್ (24) ಮತ್ತು ಕೃಪೇಶ್(19) ಮನೆಗಳಿಗೆ ಭೇಟಿ ನೀಡಿ ಕುಟುಂಬಕ್ಕೆ ರಾಹುಲ್ ಗಾಂಧಿ ಅವರು ಸಾಂತ್ವನ ಹೇಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಗೆದ್ದು ಬಂದರೆ ಭಾರತವಾಸಿಗಳಿಗೆ ಭರ್ಜರಿ ಉಡುಗೊರೆ ಕೊಡುತ್ತೇನೆಂದ ರಾಹುಲ್

ಮೊದಲಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್, ಬೆಳಗ್ಗೆ 11 ಗಂಟೆಗೆ ಕಲ್ಯೋಟ್ ತಲುಪಲಿದ್ದಾರೆ. ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವಯನಾಡಿನ ಸಿ.ಆರ್.ಪಿ.ಎಫ್.ಯೋಧ ವಿ.ವಿ.ವಸಂತ ಕುಮಾರ್ ಅವರ ಮನೆಗೂ ರಾಹುಲ್ ಭೇಟಿ ನೀಡುವ ಕಾರ್ಯಕ್ರಮವಿದೆ.

ಅಂದು ಸಂಜೆ 5 ಗಂಟೆಗೆ ಕಲ್ಲಿಕೋಟೆ(Kozhikode)ಯಲ್ಲಿ ನಡೆಯುವ ಕಾಂಗ್ರೆಸ್ ಬಹಿರಂಗ ಅಧಿವೇಶನದಲ್ಲಿ ಮಾತನಾಡಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಅವರು ಹೇಳಿದ್ದಾರೆ. ಜನಮಹಾ ಯಾತ್ರೆಯ ಕಾರ್ಯಕ್ರಮ ಯಶಸ್ಸುಗೊಳಿಸಲು ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲ್ಲಪುರಂ ಹಾಗೂ ಪಾಲಕ್ಕಾಡ್ ಜಿಲ್ಲೆಗಳ ನಾಯಕರು ಒಂದೆಡೆ ಸೇರಿ ಚರ್ಚಿಸಿದ್ದು, ಕಾರ್ಯಕಾರಿ ಅಧ್ಯಕ್ಷ ಕೊಡಿಕ್ಕುನಿಲ್ ಸುರೇಶ್ ಗೆ ಮಾಹಿತಿ ನೀಡಿದ್ದಾರೆ.

ರಫೆಲ್ ಒಪ್ಪಂದ ವಿಳಂಬಕ್ಕೆ ಮೋದಿಯೇ ಕಾರಣ: ರಾಹುಲ್ ಗಾಂಧಿ

ವಿಪಕ್ಷ ನಾಯಕ ರಮೇಶ್ ಚೆನ್ನಿಥಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
AICC president Rahul Gandhi will visit Kasaragod on March 12 and meet the families of two youth Congress activists Kripesh and Sharath Lal who were brutally murdered on February 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X