Get Updates
Get notified of breaking news, exclusive insights, and must-see stories!

ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ (ಏ.15) 5 ಗಂಟೆಗಳ ಕಾಲ ಬಂದ್

ತಿರುವನಂತಪುರಂ, ಏಪ್ರಿಲ್‌ 14 : ಕೇರಳದ ತಿರುವನಂತಪುರಂನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಶುಕ್ರವಾರ 5 ಗಂಟೆಗಳ ಕಾಲ ಸ್ಥಗಿತಗೊಳ್ಳಲಿದೆ. ಪೈಂಗುಣಿ ಉತ್ಸವದ ಅಂಗವಾಗಿ ಶ್ರೀ ಪದ್ಮನಾಭಸ್ವಾಮಿ ದೇವರ ಆರಟ್ಟು ಮೆರವಣಿಗೆಗೆ ಅನುಕೂಲವಾಗಲಿ ಅಂತ ವಿಮಾನ ನಿಲ್ದಾಣದ ರನ್‌ವೇಯನ್ನ ಸಂಜೆ 4 ಗಂಟೆಯಿಂದ 9 ಗಂಟೆಯವರೆಗೆ ಮುಚ್ಚಲಾಗುವುದು ಎಂದು ವಿಮಾನ ನಿಲ್ದಾಣ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ವಿಮಾನ ನಿಲ್ದಾಣದಲ್ಲಿ ವಿಶು (ಸುಗ್ಗಿ ಕಾಲ ) ಹಾಗೂ ತಮಿಳರ ಹೊಸ ವರ್ಷವಾದ (ಪುತಾಂಡು)ವಿನ ಆಚರಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನ ನಡೆಸಲಾಗುತ್ತಿದೆ. ಹಳದಿ ಬಣ್ಣದ ಕನ್ನಿಕೊನ್ನಾ ಹೂಗಳಿಂದ ನಿಲ್ದಾಣವನ್ನ ಸಿಂಗರಿಸಿ ಸಾಂಪ್ರಾದಾಯಿಕ ಚಿಹ್ನೆಯಾದ ವಿಶುವನ್ನು ಅಂತರಾಷ್ಟ್ರೀಯ ಹಾಗೂ ದೇಶಿಯ ಟರ್ಮಿನಲ್‌ಗಳಲ್ಲಿ ಇರಿಸಲಾಗಿದೆ. ಹೀಗಾಗಿ ನಾಳೆ 5 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆ ಸ್ಥಗಿತವಾಗಲಿದೆ.

Thiruvananthapuram International Airport Runway to be closed on April 15

ತಿರುವನಂತಪುರಂ ವಿಮಾನ ನಿಲ್ದಾಣವು ಹಬ್ಬದ ಉತ್ಸಾಹದಿಂದ ಪ್ರಕಾಶಮಾನವಾಗಿ ಹೊಳೆಯುತ್ತಿದ್ದು, ನಿಮ್ಮೆಲ್ಲರಿಗೂ ಭವ್ಯವಾದ ಸ್ವಾಗತವನ್ನ ಕೋರಲು ನಾವು ನಮ್ಮ ಸಭಾಂಗಣವನ್ನ ಸುಂದರವಾಗಿ ಅಲಂಕರಿಸಿದ್ದೇವೆ ಅಂತ ತಿರುವನಂತಪುರಂ ವಿಮಾನ ನಿಲ್ದಾಣ ಟ್ವೀಟ್ ಮಾಡಿದೆ.

ಇದರ ಜೊತೆಗೆ ಮತ್ತೊಂದು ಟ್ವೀಟ್ ಕೂಡ ಮಾಡಿದ್ದು, ವಿಮಾನ ನಿಲ್ದಾಣದಲ್ಲಿ ವಿಶು ಹಬ್ಬದ ಆಚರಣೆಯ ಅಂಗವಾಗಿ ಪೇಟಿಂಗ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ಚಟುವಟಿಕೆಯಲ್ಲಿ ಹಲವು ಪ್ರಯಾಣಿಕರು ಉತ್ಸಾಹದಿಂದ ಭಾಗಿಯಾಗಿದ್ದರು. ಬಳಿಕ ಎಲ್ಲಾ ಪ್ರಯಾಣಿಕರಿಗೂ ನಿಲ್ದಾಣದ ವತಿಯಿಂದ ಊಡುಗೊರೆಗಳನ್ನ ಹಸ್ತಾಂತರ ಮಾಡಲಾಯಿತು ಅಂತ ತಿಳಿಸಿದೆ.

twitter embed :

ಕಳೆದ ಎರಡು ದಿನಗಳಿಂದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಶೇಷ ಬಹುಮಾನಗಳನ್ನ ಕೂಡ ನೀಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಇನ್ನು ಹೆಚ್ಚು ಜನರು ಭಾಗಿಯಾಗುವ ಮೂಲಕ ಆಕರ್ಷಕ ಊಡುಗೊರೆಗಳನ್ನ ಪಡೆದುಕೊಳ್ಳುವಂತೆ ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಿದೆ.

Thiruvananthapuram International Airport Runway to be closed on April 15

ಏನಿದು ಪೈಂಗುಣಿ ಹಬ್ಬ?
ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇಗುಲದ ಪ್ರಮುಖ ಹಬ್ಬಗಳಲ್ಲಿ ಪೈಂಗುಣಿ ಹಬ್ಬವು ಒಂದು. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬರುವ ಹಬ್ಬ ಇದಾಗಿದ್ದು, ಹತ್ತು ದಿನಗಳ ಕಾಲ ಈ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಮೊದಲ ದಿನದಂದು ಹಬ್ಬವನ್ನ ವಿಧ್ಯುಕ್ತ ಧ್ವಜಾರೋಹಣ ಮಾಡುವ ಮೂಲಕ ಪ್ರಾರಂಭಿಸಲಾಗುತ್ತದೆ. ವಿಶೇಷ ಅಂದರೆ ದೇವಾಲಯದ ಪೂರ್ವ ಪ್ರವೇಶದ್ವಾರದಲ್ಲಿ ಪಾಂಡವರ ಪ್ರತಿಮೆಗಳನ್ನ ಇರಿಸಿ ಪೂಜೆ ನೇರವೇರಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+