ಅಕ್ರಮ ಸಂಬಂಧ: ಹೋಟೆಲ್‌ನಲ್ಲಿ ಅರ್ಧ ರಾತ್ರೀಲಿ ಬಯಲಾದ ಅಸಲಿ ಡ್ರಾಮಾ
ತಿರುವನಂತಪುರಂ/ ಕೊಚ್ಚಿ: ಒಂದಡೆ ಕೆಲಸ ಮಾಡುತ್ತಿದ್ದ ಚಂದದ ಯುವತಿ, ಆ ಯುವಕನಿಗೆ ಪರಿಚಯವಾಗ್ತಾಳೆ. ಪ್ರತಿ ನಿತ್ಯ ಒಂದೇ ಕಡೆ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ಪ್ರೀತಿಯ ಭಾವನೆ ಮೂಡುತ್ತದೆ. ನೋಡಲಿಕ್ಕೆ ಇಬ್ಬರೂ ತುಂಬಾ ಅಂದವಾಗಿ ಕಾಣುತ್ತಿದ್ದರು. ದಿನಗಳು ಕಳೆದಂತೆ ಇಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಇಬ್ಬರೂ ಕೆಲಸ ಮುಗಿಸಿದ ಬಳಿಕ ಆಕೆ ಮತ್ತು ಆತ ಇಬ್ಬರೂ ಬೈಕ್‌ನಲ್ಲಿ ಜಾಲಿ ರೈಡ್ ಹೋಗಿ ಸುತ್ತಾಡುತ್ತಿದ್ದರು. ಸುಮಾರು ದಿನ ಈ ಪ್ರೇಮಿಗಳು ಜತೆಯಲ್ಲಿ ಸುತ್ತಾಡಿ ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದರು. ಈ ವಿಷಯ ಇಬ್ಬರು ಕೆಲಸ ಮಾಡುವ ಸಂಸ್ಥೆಯ ಮಾಲೀಕರಿಗೂ ಗೊತ್ತಾಗಿತ್ತು. ಆದರೆ, ಅವರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಇಬ್ಬರೂ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರಲ್ವಾ ? ಹೀಗಾಗಿ ಹೊರಗೆ ಅವರು ಏನೇ ಮಾಡಿಕೊಳ್ಳಲಿ, ನಮಗೆ ಸಂಬಂಧವಿಲ್ಲದ ವಿಚಾರ ಎಂದು ಮಾಲೀಕರು ಗೊತ್ತಿದ್ದೂ ಗೊತ್ತಿಲ್ಲದಂತೆ ಸುಮ್ಮನಾಗಿದ್ದರು.
ಈ ಪ್ರೇಮ ಜೋಡಿ ಒಂದು ಊರು ಬಳಿ ಹೋಗಿ ಲಾಡ್ಜ್ ನಲ್ಲಿ ರೂಮ್ ಪಡೆದಿದ್ದರು. ಲಾಡ್ಜ್ ಸಿಬ್ಬಂದಿಗೆ ಗೆಳತಿಯನ್ನು ನನ್ನ ಹೆಂಡತಿ ಎಂದು ಪರಿಚಯಿಸಿದ್ದ. ಲಾಡ್ಜ್ ನಲ್ಲಿ ಒಂದು ದಿನ ಸಂತೋಷದಿಂದ ಕಳೆದಿದ್ದರು. ಮರು ದಿನ ಹೊರಗಿನ ಹೋಟೆಲ್‌ಗೆ ಹೋಗಿ ಊಟ ಮಾಡಿಕೊಂಡು ಬಂದು ಅದೇ ಲಾಡ್ಜ್ ನಲ್ಲಿ ತಂಗಿದ್ದರು. ಅರ್ಧ ರಾತ್ರಿ ಸಮಯದಲ್ಲಿ ಲಾಡ್ಜ್ ನಿಂದ ಹೊರ ಬಂದ ಯುವಕ, ನನ್ನ ಹೆಂಡತಿ ಬಾಯಲ್ಲಿ ನೊರೆ ಬಂದು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾನೆ. ಲಾಡ್ಜ್ ಸಿಬ್ಬಂದಿ ಹೋಗಿ ನೋಡುವಷ್ಟರಲ್ಲಿ ಆ ಯುವತಿ ಜೀವ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನನ್ನ ಹೆಂಡತಿ ಬಾಯಲ್ಲಿ ನೊರೆ ಬರ್ತಿದೆ ಎಂದು ಹೇಳಿದ ಯುವಕ ಲಾಡ್ಜ್ ನಿಂದ ಜಾಗ ಖಾಲಿ ಮಾಡಿ ಪರಾರಿಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಓಡಿ ಹೋದ ಪ್ರೇಮಿಗೆ ಮೊದಲೇ ವಿವಾಹವಾಗಿತ್ತು ಎಂಬ ವಿಚಾರ ಪೊಲೀಸರ ವಿಚಾರಣೆಯಲ್ಲಿ ಬಯಲಾಯಿತು. ಅಮೇಲೆ ಏನಾಯಿತು?
ಜ್ಯುವೆಲರಿ ಶಾಪ್ ನಲ್ಲಿ ಕೆಲಸ :
ಕೇರಳದ ತಿರುವನಂತಪುರನ ಪ್ರಮುಖ ಜ್ಯುವೆಲರಿ ಶಾಪ್‌ನಲ್ಲಿ ಗಾಯಿತ್ರಿ ಮತ್ತು ಪ್ರವೀಣ್ ಕೆಲಸ ಮಾಡುತ್ತಿದ್ದರು. ಒಂದೆಡೆ ಕೆಲಸ ಮಾಡುತ್ತಿದ್ದ ಗಾಯಿತ್ರಿಗೆ ಪ್ರವೀಣ್ ಪರಿಚಯವಾಗಿತ್ತು. ಪ್ರತಿ ನಿತ್ಯ ಬೆಳಗಿನಿಂದ ಸಂಜೆ ವರೆಗೂ ಇಬ್ಬರೂ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಒಂದು ರೀತಿಯ ಭಾವನೆ ಮೂಡಿತ್ತು. ಇಬ್ಬರ ನಡುವಿನ ಸ್ನೇಹ ದಿನಗಳು ಕಳೆದಂತೆ ಪ್ರೀತಿಯಾಗಿ ಮಾರ್ಪಟ್ಟಿತ್ತು.

ತಲೆ ಕೆಡಿಸಿಕೊಳ್ಳದ ಮಾಲೀಕರು: ಜ್ಯುವೆಲರಿ ಶಾಪ್‌ನಲ್ಲಿ ಕೆಲಸ ಮುಗಿಸಿದ ಬಳಿಕ ಗಾಯಿತ್ರಿ ಮತ್ತು ಪ್ರವೀಣ್ ಇಬ್ಬರೂ ಜಾಲಿ ರೈಡ್ ಹೋಗಿ ಸುತ್ತಾಡುತ್ತಿದ್ದರು. ಹಲವಾರು ದಿನ, ತಿಂಗಳು ಇಬ್ಬರೂ ಸಂತೋಷದಿಂದ ಕಾಲ ಕಳೆದಿದ್ದಾರೆ. ಈ ವಿಷಯ ಇಬ್ಬರೂ ಕೆಲಸ ಮಾಡುತ್ತಿದ್ದ ಜ್ಯುವೆಲರಿ ಶಾಪ್ ಮಾಲೀಕರಿಗೆ ಗೊತ್ತಾಗಿತ್ತು. ಆದರೆ ಇದನ್ನು ಮಾಲೀಕರು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷಿಸಿದ್ದರು. ಇಬ್ಬರೂ ಕೆಲಸಕ್ಕೆ ಮೋಸ ಮಾಡುತ್ತಿರಲಿಲ್ಲವಲ್ಲಾ, ಅವರ ಪ್ರೀತಿ ಅವರಿಗೆ ಸಂಬಂಧಿಸಿದ್ದು ಎಂದು ಭಾವಿಸಿ ಗೊತ್ತೂ- ಗೊತ್ತಿಲ್ಲದಂತೆ ಸುಮ್ಮನಾಗಿದ್ದರು.
ಲಾಡ್ಜ್ ನಲ್ಲಿ ರೂಮ್ ಪಡೆದ ಪ್ರೇಮಿಗಳು: ತಿರುವನಂತಪುರದ ತಂಪನೂರು ಪ್ರದೇಶಕ್ಕೆ ಪ್ರವೀಣ್ ಮತ್ತು ಗಾಯತ್ರಿ ಹೋಗಿದ್ದಾರೆ. ಅಲ್ಲಿ ಒಂದು ಲಾಡ್ಜ್ ನಲ್ಲಿ ರೂಮ್ ಬಾಡಿಗೆ ಪಡೆದು, ಅಲ್ಲಿನ ಸಿಬ್ಬಂದಿಗೆ ಈಕೆ ನನ್ನ ಹೆಂಡತಿ ಎಂದು ಪರಿಚಿಸಿದ್ದಾರೆ. ಒಂದು ದಿನ ಸಂತೋಷದಿಂದ ಇಬ್ಬರೂ ದಿನ ಕಳೆದಿದ್ದಾರೆ.

ನನ್ನ ಹೆಂಡತಿಗೆ ಏನೋ ಆಯಿತು ಎಂದ:
ಮರು ದಿನ ಬೆಳಗ್ಗೆ ಹೋಟೆಲ್ ಗೆ ಹೋಗಿ ಇಬ್ಬರೂ ಊಟ ಮಾಡಿಕೊಂಡು ಅದೇ ಲಾಡ್ಜ್ ಗೆ ಬಂದಿದ್ದಾರೆ. ರೂಮ್ ನಲ್ಲಿ ಏಕಾಂತವಾಗಿ ಅರ್ಧ ರಾತ್ರಿ ವರೆಗೂ ಕಾಲ ಕಳೆದಿದ್ದಾರೆ. ಅರ್ಧ ರಾತ್ರಿಯಲ್ಲಿ ರೂಮ್ ನಿಂದ ಹೊರ ಬಂದ ಪ್ರವೀಣ್ ನನ್ನ ಹೆಂಡತಿ ಬಾಯಲ್ಲಿ ನೊರೆ ಬಂದು ಸಾವನ್ನಪ್ಪಿದ್ದಾಳೆ ಎಂದು ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಾನೆ. ಹೋಟೆಲ್ ಸಿಬ್ಬಂದಿ ರೂಮ್ ಗೆ ಹೋಗಿ ನೋಡುವಷ್ಟರಲ್ಲಿ ಗಾಯಿತ್ರಿ ಶವವಾಗಿದ್ದಳು.

ಪ್ರೇಮಿಗೆ ಮೊದಲೇ ಮದುವೆ ಆಗಿತ್ತು! :
ಗಾಯಿತ್ರಿ ಸಾವಿನ ಬಗ್ಗೆ ಮಾಹಿತಿ ನೀಡಿದ ಪ್ರಿಯಕರ ಪ್ರವೀಣ್ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರು ವಿಚಾರಣೆ ನಡೆಸಿದಾಗ ಪ್ರವೀಣ್ ಗೆ ಈ ಮೊದಲೇ ಮದುವೆ ಆಗಿತ್ತು ಎಂಬ ವಿಚಾರ ಹೊರ ಬಿದ್ದಿದೆ. ಪತ್ನಿ ಜತೆ ಜೀವನ ಮಾಡುತ್ತಿದ್ದ ಪ್ರವೀಣ್ , ಗಾಯಿತ್ರಿಯನ್ನು ಪ್ರೀತಿಸಿದ ನಾಟಕವಾಡಿ ಮೋಸ ಮಾಡಿ ಓಡಿ ಹೋಗಿದ್ದು, ಆತನನ್ನು ವಶಕ್ಕೆ ಪಡೆದಿದ್ದೇವೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಗಾಯಿತ್ರಿ ಯಾವ ಕಾರಣದಿಂದ ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಗೊತ್ತಾಗಲಿದೆ ಎಂಬ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications