• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದುಬೈನಿಂದ ಭಾರತಕ್ಕೆ ಬರಲು ಕೋರ್ಟ್‌ಗೆ ಹೋಗಿದ್ದ ಗರ್ಭಿಣಿ ಯುವತಿಯ ಪತಿ ಸಾವು

|
Google Oneindia Kannada News

ತಿರುವನಂತಪುರಂ, ಜೂನ್ 9: ಲಾಕ್‌ಡೌನ್‌ ವೇಳೆ ದುಬೈನಲ್ಲಿ ಸಿಲುಕಿಕೊಂಡಿದ್ದ ಕೇರಳದ ಮೂಲಕ ಗರ್ಭಿಣಿ ಮಹಿಳೆ ಭಾರತಕ್ಕೆ ಮರಳಲು ಅವಕಾಶ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

   Celebrities we lost during the Lockdown | Oneindia Kannada

   ಲಾಕ್‌ಡೌನ್‌ ಕಾರಣ ಅಂತರರಾಷ್ಟ್ರೀಯ ವಿಮಾನಗಳು ರದ್ದಾಗಿದ್ದವು. ಏಪ್ರಿಲ್ ತಿಂಗಳಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಯುವತಿ, ವಿಶೇಷ ವಿಮಾನದ ಮೂಲಕ ಕೇರಳಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.

   ದುಬೈನಿಂದ ಭಾರತಕ್ಕೆ ಬರಲು ಸುಪ್ರೀಂ ಮೊರೆ ಹೋದ ಮಹಿಳೆದುಬೈನಿಂದ ಭಾರತಕ್ಕೆ ಬರಲು ಸುಪ್ರೀಂ ಮೊರೆ ಹೋದ ಮಹಿಳೆ

   ಅಂದು ಭಾರತಕ್ಕೆ ಮರಳಲು ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಅಥಿರಾ ಗೀತಾ ಶ್ರೀಧರನ್ ಅವರ ಪತಿ, ಈಗ ದುಬೈನಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 28 ವರ್ಷದ ನಿತೀನ್ ಚಂದ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮುಂದೆ ಓದಿ....

   ಭಾರತಕ್ಕೆ ಮರುಳಿದ ಅಥಿರಾ ಗೀತಾ ಶ್ರೀಧರನ್

   ಭಾರತಕ್ಕೆ ಮರುಳಿದ ಅಥಿರಾ ಗೀತಾ ಶ್ರೀಧರನ್

   ಲಾಕ್‌ಡೌನ್‌ನಿಂದ ವಿದೇಶದಲ್ಲಿ ಸಿಲುಕಿಕೊಂಡಿದ್ದವರನ್ನು ಕರೆತರುವ ಉದ್ದೇಶದಿಂದ ಭಾರತ ಸರ್ಕಾರ 'ವಂದೇ ಭಾರತ್ ಮಿಷನ್' ಅಡಿ ವಿಶೇಷ ವಿಮಾನಗಳ ಸಂಚಾರಕ್ಕೆ ಚಾಲನೆ ನೀಡಿತ್ತು. ಈ ವೇಳೆ ದುಬೈನಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಯುವತಿ ಅಥಿರಾ ಗೀತಾ ಶ್ರೀಧರನ್, ತನ್ನ ತಾಯ್ನಾಡು ಕೇರಳಕ್ಕೆ ವಾಪಸ್ ಆಗಿದ್ದರು. ಆದರೆ, ಆಕೆಯ ಜೊತೆ ಪತಿ ಬಂದಿರಲಿಲ್ಲ.

   ಜುಲೈ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ

   ಜುಲೈ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ

   ಜೂನ್ 2ನೇ ತಾರೀಕಿಗೆ 28 ವರ್ಷ ಪೂರೈಸಿದ ನಿತೀನ್ ಚಂದ್ರನ್, ಪತ್ನಿಯನ್ನು ಕೇರಳಕ್ಕೆ ಕಳುಹಿಸಿಕೊಟ್ಟು ತಾವು ದುಬೈನಲ್ಲಿ ಉಳಿದುಕೊಂಡಿದ್ದರು. ಜುಲೈ ತಿಂಗಳಲ್ಲಿ ನಿತೀನ್ ಮತ್ತು ಅಥಿರಾ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದ್ರೀಗ, ಪುಟ್ಟ ಕಂದಮ್ಮನ ಆಗಮನಕ್ಕೂ ಮುಂಚೆಯೇ ನಿತೀನ್ ಇಹಲೋಕ ತ್ಯಜಿಸಿದ್ದಾರೆ.

   ನಿದ್ದೆ ಮಾಡುತ್ತಿರುವಾಗಲೇ ಸಾವು

   ನಿದ್ದೆ ಮಾಡುತ್ತಿರುವಾಗಲೇ ಸಾವು

   ನಿತೀನ್ ಚಂದ್ರನ್ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಂಡಿದ್ದರು. ಜೂನ್ 7ರ ರಾತ್ರಿ ನಿದ್ದೆ ಮಾಡುತ್ತಿದ್ದ ಸಮಯದಲ್ಲಿ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಥಿರಾ ದುಬೈನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿತೀನ್ ನಿರ್ಮಾಣ ಕ್ಷೇತ್ರದಲ್ಲಿ ಇಂಜಿನಿಯರ್ ಆಗಿದ್ದರು. ನಿತೀನ್ ಕಳೆದ ಆರು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಅಥಿರಾ ಎರಡು ವರ್ಷದ ಹಿಂದೆ ದುಬೈಗೆ ಹೋಗಿದ್ದರು.

   ಹೆರಿಗೆಗೆ ಕೇರಳಕ್ಕೆ ಕಳುಹಿಸಿ ಎಂದು ಮನವಿ

   ಹೆರಿಗೆಗೆ ಕೇರಳಕ್ಕೆ ಕಳುಹಿಸಿ ಎಂದು ಮನವಿ

   ಹೆರಿಗೆಗೆ ಮೂರ್ನಾಲ್ಕು ತಿಂಗಳು ಮಾತ್ರ ಇದ್ದ ಕಾರಣ ವಿಮಾನದಲ್ಲಿ ಪ್ರಯಾಣ ಮಾಡಲು ನಿರ್ಬಂಧಿಸಲಾಗಿತ್ತು. ನನ್ನ ಪತಿ ಮೆಕ್ಯಾನಿಕಲ್ ಇಂಜಿನಿಯರ್, ಲಾಕ್‌ಡೌನ್‌ ನಡುವೆಯೂ ಆತನಿಗೆ ಕೆಲಸ ಇದೆ. ಹಾಗಾಗಿ, ಮನೆಯಲ್ಲಿ ನಾನೊಬ್ಬಳೆ. ನನ್ನ ಆರೈಕೆ ಮಾಡಲು ಯಾರೂ ಇಲ್ಲ. ಸೋ, ನನ್ನನ್ನು ತನ್ನ ತಾಯಿ ಮನೆ ಕೇರಳಕ್ಕೆ ಕಳುಹಿಸಿಕೊಡಿ ಎಂದು ಕೋರ್ಟ್‌ ಮೊರೆ ಹೋಗಿದ್ದರು. ನಂತರ ವಂದೇ ಭಾರತ್ ಮಿಷನ್ ಅಡಿ ಕೇರಳಕ್ಕೆ ಅಥಿರಾ ಬಂದರು.

   English summary
   Nithin Chandran, An Active INCAS Volunteer based on Dubai has passed away. Whose wife Mrs.Athira was fought at supreme court for transport of pregnant women from GCC to India during Covid Season.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X