ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಜಾಯ್ ಅಲುಕ್ಕಾಸ್ ಸ್ಥಾಪಕ ಸಾವಿನ ಸುದ್ದಿ ಸುಳ್ಳು

|
Google Oneindia Kannada News

ತಿರುವನನಂತಪುರಂ, ಮೇ 1: ಜನಪ್ರಿಯ ಆಭರಣ ಮಳಿಗೆ ಜಾಯ್ ಅಲುಕ್ಕಾಸ್ ಸಮೂಹದ ಸ್ಥಾಪಕ ಯುಎಇಯಲ್ಲಿ ಮೃತರಾಗಿದ್ದಾರೆ. ಅವರಿಗೂ ಕೊವಿಡ್19 ತಗುಲಿತ್ತು ಎಂಬ ಸುದ್ದಿ ವಾಟ್ಸಾಪ್ ನಲ್ಲಿ ಹರಡುತ್ತಿದೆ. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಜಾಯ್ ಅಲುಕ್ಕಾಸ್ ವಕ್ತಾರರು ತಿಳಿಸಿದ್ದಾರೆ.

ದುಬೈನಲ್ಲಿ ಇತ್ತೀಚೆಗೆ ಜನಪ್ರಿಯ ಉದ್ಯಮಿ ಜಾಯ್ ಅರಕ್ಕಲ್ ಅವರು ನಿಧನರಾಗಿದ್ದರು. ಇದನ್ನೇ ಬಳಸಿಕೊಂಡ ಕೆಲ ದುಷ್ಕರ್ಮಿಗಳು ಜಾಯ್ ಅಲುಕ್ಕಾಸ್ ಅವರು ನಿಧನರಾಗಿದ್ದಾರೆ. ಆಭರಣ ಮಳಿಗೆ ಸಂಸ್ಥೆ ಇನ್ನೇನು ಮುಚ್ಚಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ಫೇಸ್ಬುಕ್, ವಾಟ್ಸಾಪ್ ನಲ್ಲಿ ಹಬ್ಬಿ, ಆತಂಕ ಮೂಡಿಸಿತ್ತು.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಾಯ್ ಅಲುಕ್ಕಾಸ್ ಸಂಸ್ಥೆ, ಸಂಸ್ಥೆಯ ಸ್ಥಾಪಕರು ಆರೋಗ್ಯದಿಂದಿದ್ದಾರೆ. ಸಂಸ್ಥೆ ಕೂಡಾ ಸುಸ್ಥಿತಿಯಲ್ಲಿದೆ ಎಂದಿದ್ದಾರೆ.

Fact Check: Joyalukkas founder death due to COVID-19 are fake

ಸತ್ಯಾಸತ್ಯತೆ: ಏಪ್ರಿಲ್ 23, 2020 ರಂದು ದುಬೈನಲ್ಲಿ 54 ವರ್ಷ ವಯಸ್ಸಿನ ಅರಕ್ಕಲ್ ಅವರು ಹೃದಯಾಘಾತದಿಂದ ಮೃತರಾಗಿದ್ದರು. ಇದನ್ನು ಪ್ರಮುಖ ದಿನಪತ್ರಿಕೆ, ವೆಬ್ ಹಾಗೂ ಚಾನೆಲ್ ಗಳು ಪ್ರಸಾರ ಮಾಡಿವೆ.

ಯುಎಇಯ ಇನ್ನೋವಾ ಗ್ರೂಪಿನ ಅಧ್ಯಕ್ಷರಾಗಿದ್ದ ಅರಕ್ಕಲ್ ಅವರಿಗೂ ಕೊರೊನಾವೈರಸ್ ತಗುಲಿ ಮೃತಪಟ್ಟರು ಎಂಬ ಸುದ್ದಿಯೂ ಸುಳ್ಳು. ಮಾನಂತವಾಡಿಯ ಅರಕ್ಕಲ್ ಕುಟುಂಬದ ಜಾಯ್ ಅರಕ್ಕಲ್ ಅವರು ಹೃದಯಾಘಾತದಿಂದಲೇ ಮೃತರಾಗಿದ್ದು ಎಂದು ಕುಟುಂಬವರ್ಗ ಸ್ಪಷ್ಟಪಡಿಸಿದೆ.

Fact Check: Joyalukkas founder death due to COVID-19 are fake

ಇನ್ನು 1987ರಲ್ಲಿ ಸ್ಥಾಪನೆಯಾದ ಜಾಯ್ ಅಲುಕ್ಕಾಸ್ ಆಭರಣ ಮಳಿಗೆಯ ಸ್ಥಾಪಕ ಜಾಯ್ ಅಲುಕ್ಕಾಸ್ ಅವರು ಆರೋಗ್ಯದಿಂದಿದ್ದಾರೆ. ತ್ರಿಶೂರ್, ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಆಭರಣ, ಹಣ ವಿನಿಮಯ, ಫ್ಯಾಷನ್, ರೇಷ್ಮೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

English summary
The viral message has confused the death of another industrialist who recently died in Dubai with Joy Alukkas, the founder of the eponymous business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X