• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್-19 ಲಸಿಕೆಯ ತಾಲೀಮಿಗೆ ಕೇರಳ ಸಜ್ಜು: ನಾಲ್ಕು ಜಿಲ್ಲೆಗಳಲ್ಲಿ ಡ್ರೈ ರನ್

|

ತಿರುವನಂತಪುರಂ, ಜನವರಿ 01: ಶನಿವಾರ ನಡೆಯಲಿರುವ ಕೋವಿಡ್-19 ಲಸಿಕೆಯ ತಾಲೀಮು ಪ್ರಕ್ರಿಯೆಗೆ ಕೇರಳ ಸಜ್ಜಾಗಿದೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ ಲಸಿಕೆಯ ಡ್ರೈ ರನ್ ನಡೆಸಲಿದ್ದು, ಕೇರಳ ಕೂಡ ಭಾಗಿಯಾಗಲಿದೆ.

ಬೆಳಿಗ್ಗೆ 9 ರಿಂದ 11 ರವರೆಗೆ ತಿರುವನಂತಪುರಂ, ಇಡುಕಿ, ವಯನಾಡ್ ಮತ್ತು ಪಾಲಕ್ಕಾಡ್ ಎಂಬ ನಾಲ್ಕು ಜಿಲ್ಲೆಗಳಲ್ಲಿ ತಾಲೀಮು ನಡೆಯಲಿದೆ. ಪ್ರತಿ ಕೇಂದ್ರದಲ್ಲಿ 25 ಆರೋಗ್ಯ ಕಾರ್ಯಕರ್ತರು ಡ್ರೈ ರನ್‌ನಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರಾದ್ಯಂತ ಶನಿವಾರ ಕೋವಿಡ್-19 ಲಸಿಕೆಯ ಡ್ರೈ ರನ್: ಏನೆಂದು ತಿಳಿಯಿರಿ

ಕೋವಿಡ್ ಲಸಿಕೆ ಪಡೆಯಲು ಕೇರಳ ಸಂಪೂರ್ಣ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದ್ದು, ಇಲ್ಲಿಯವರೆಗೆ 3.13 ಲಕ್ಷ ಜನರು ಲಸಿಕೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು.

ಶುಕ್ರವಾರ ಕೇರಳದಲ್ಲಿ 4,991 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು 5,111 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ವೈರಸ್ ಸೋಂಕಿತರ ಒಟ್ಟು ಸಂಖ್ಯೆ 7,65,923 ಕ್ಕೆ ಏರಿಕೆಯಾಗಿದ್ದು, ಒಟ್ಟು ಡಿಸ್ಚಾರ್ಜ್ 6,97,591 ಮತ್ತು ಸಕ್ರಿಯ ಪ್ರಕರಣಗಳು 65,054 ಅನ್ನು ಮುಟ್ಟಿದೆ.

ಕಳೆದ 24 ಗಂಟೆಗಳಲ್ಲಿ 52,790 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಪರೀಕ್ಷಾ ಪಾಸಿಟಿವ್ ಪ್ರಮಾಣವು ಶೇಕಡಾ 9.45 ಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

English summary
Kerala is all set for the COVID vaccine mock drill on January 2, as 4,991 new cases were recorded on Friday and 5,111 people cured of the infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X