ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಸಿಎಂ ಯಡಿಯೂರಪ್ಪ ಕಾರಿಗೆ ಮುತ್ತಿಗೆ

|
Google Oneindia Kannada News

ಕಣ್ಣೂರು, ಡಿಸೆಂಬರ್ 24: ಕೇರಳಕ್ಕೆ ತೆರಳಿರುವ ಸಿಎಂ ಯಡಿಯೂರಪ್ಪ ಗೆ ಸಿಎಎ, ಎನ್‌ಆರ್‌ಸಿ ಪ್ರತಿಭಟನೆಯ ಬಿಸಿ ತಾಗಿದೆ.

ಕಣ್ಣೂರಿನಲ್ಲಿ ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿದ ಸಿಪಿಎಂ ಕಾರ್ಯಕರ್ತರು ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಸಿಎಎ ಪ್ರತಿಭಟನಾಕಾರರ ಮೇಲೆ ಮಂಗಳೂರಿನಲ್ಲಿ ಗೋಲಿಬಾರ್ ಆದ ಘಟನೆಗೆ ಖಂಡಿಸಿ ಪ್ರತಿಭಟನಾಕಾರರು ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿದ್ದರು.

ಸೂರ್ಯಗ್ರಹಣಕ್ಕೂ ಮೊದಲೇ ಕೇರಳಕ್ಕೆ ಸಿಎಂ ಯಡಿಯೂರಪ್ಪ ಹೋಗುತ್ತಿರುವುದೇಕೆ? ಸೂರ್ಯಗ್ರಹಣಕ್ಕೂ ಮೊದಲೇ ಕೇರಳಕ್ಕೆ ಸಿಎಂ ಯಡಿಯೂರಪ್ಪ ಹೋಗುತ್ತಿರುವುದೇಕೆ?

ಕಣ್ಣೂರಿನ ಸಮೀಪದ ತಳಿಪರಂಬ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಯಡಿಯೂರಪ್ಪ ತೆರಳಿದ್ದರು. ಅಲ್ಲಿ ವಿಶೇಷ ಪೂಜೆ ಮುಗಿಸಿ ವಾಪಸ್ಸಾಗುವ ವೇಳೆ ಅವರ ಕಾರನ್ನು ಅಡ್ಡಗಟ್ಟಿದ ಪ್ರತಿಭಟನಾಕಾರರ ಗುಂಪು ಸಿಎಂ ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

CM Yediyurappa Shown Black Flag In Keralas Kannur

ಯಡಿಯೂರಪ್ಪ ಅವರ ಕಾರಿಗೆ ಪ್ರತಿಭಟನಾಕಾರನೊಬ್ಬ ಅಡ್ಡ ಮಲಗಿ ಕಾರನ್ನು ತಡೆದ, ಚಾಲಕ ಚಾಕಚಕ್ಯತೆಯಿಂದ ಆತನನ್ನು ತಪ್ಪಿಸಿ ಮುಂದೆ ವಾಹನ ಮುಂದೆ ಚಲಾಯಿಸಿ ಪ್ರತಿಭಟನಾಕಾರರನ್ನು ಬೆನ್ನು ತಪ್ಪಿಸಿಕೊಂಡರು.

ನಿನ್ನೆ ರಾತ್ರಿ ಯಡಿಯೂರಪ್ಪ ಕೇರಳಕ್ಕೆ ತಲುಪಿದಾಗಲೂ ಸಹ ಕೆಲವರು ಬಂದು ಪ್ರತಿಭಟನೆ ನಡೆಸಿದರು. ಅವರನ್ನು ಪೊಲೀಸರು ಬಂಧಿಸಿದ್ದರು.

ಗ್ರಹಣಕ್ಕೂ ಮುನ್ನ ಕೇರಳದ ದೇವಾಲಯಕ್ಕೆ ಯಡಿಯೂರಪ್ಪ!ಗ್ರಹಣಕ್ಕೂ ಮುನ್ನ ಕೇರಳದ ದೇವಾಲಯಕ್ಕೆ ಯಡಿಯೂರಪ್ಪ!

ಯಡಿಯೂರಪ್ಪ ಅವರು ನಾಳೆಯೂ ಕೇರಳದ ಕೆಲವು ದೇವಸ್ಥಾನಗಳಿಗೆ ತೆರಳುವವರಿದ್ದರು. ಪ್ರತಿಭಟನೆಗಳು ಹೆಚ್ಚಾದ ಕಾರಣ ಯಡಿಯೂರಪ್ಪ ಅವರು ಇಂದೇ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ.

English summary
CM Yediyurappa feel the heat by CAA protesters in Kerala. Protesters stopped Yediyurappa's car and shown black flag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X