ಕಸಗುಡಿಸುತ್ತಿದ್ದಾಕೆ ಈಗ ಅದೇ ಪಂಚಾಯಿತಿಯಲ್ಲಿ ಅಧ್ಯಕ್ಷೆ!

ತಿರುವನಂತಪುರಂ, ಜನವರಿ 2: ಸುಮಾರು ಹತ್ತು ವರ್ಷಗಳಿಂದ ದೂಳು ಹಿಡಿದ ಪಂಚಾಯಿತಿಯ ನೆಲ ಮತ್ತು ಕುರ್ಚಿ ಮೇಜುಗಳನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದ ಮಹಿಳೆ ಈಗ ಅದೇ ಪಂಚಾಯಿತಿ ಕಚೇರಿಯ ಅಧ್ಯಕ್ಷರ ಸೀಟಿನ ಮೇಲೆ ಕುಳಿತಿದ್ದಾರೆ. ಅಚ್ಚರಿ ಎನಿಸಿದರೂ ನಿಜ. ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯಲ್ಲಿನ ಪಟ್ಟಣಪುರಂ ಎಂಬಲ್ಲಿ 46 ವರ್ಷದ ಎ. ಆನಂದವಲ್ಲಿ ಬ್ಲಾಕ್ ಪಂಚಾಯತ್‌ನ ಅಧ್ಯಕ್ಷೆ ಸ್ಥಾನಕ್ಕೆ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. ಇದೇ ಕಚೇರಿಯಲ್ಲಿ ಅವರು ಅರೆಕಾಲಿಕ ಸ್ವಚ್ಛತಾ ಕೆಲಸಗಾರರಾಗಿ ದುಡಿಯುತ್ತಿದ್ದರು.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಿಪಿಐಎಂ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಆನಂದವಲ್ಲಿ ಅವರು ಕಳೆದ ಬುಧವಾರ ಬ್ಲಾಕ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ದಲಿತ ಮಹಿಳೆ ಸುಮಾರು ಒಂದು ದಶಕದಿಂದ ಇಲ್ಲಿ ಕಸಗುಡಿಸಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರು. ಆದರೆ ಈ ಬಾರಿ ಅವರ ಅದೃಷ್ಟ ಬದಲಾಗಿದೆ.

'ನನ್ನ ಪಕ್ಷ ಮಾತ್ರವೇ ಈ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ' ಎಂದು ಬ್ಲಾಕ್ ಅಧ್ಯಕ್ಷೆಯಾಗಿ ಕುರ್ಚಿಯ ಮೇಲೆ ಕುಳಿತ ಬಳಿಕ ಆನಂದಬಾಷ್ಪದೊಂದಿಗೆ ಹೇಳಿದರು.

Anandavalli Who Worked As Sweeper At Pathanapuram Panchayat Office Is Now Its President

ಮಾರ್ಕ್ಸ್‌ವಾದಿ ಬೆಂಬಲಿಗರ ಕುಟುಂಬದಿಂದ ಬಂದ ಆನಂದವಲ್ಲಿ ಅವರು ಹೆಚ್ಚು ಕಲಿತವರಲ್ಲ. ಅವರ ಗಂಡ ವೃತ್ತಿಯಿಂದ ಪೈಂಟರ್. ಜತೆಗೆ ಸಕ್ರಿಯ ಸಿಪಿಐಎಂ ಕಾರ್ಯಕರ್ತ. 2011ರಲ್ಲಿ ಅರೆಕಾಲಿಕ ಕೆಲಸಗಾರ್ತಿಯಾಗಿ ಮಾಸಿಕ 2,000 ರೂ.ಗೆ ಕೆಲಸಕ್ಕೆ ಸೇರಿದ್ದರು. ಈಗ ಅವರಿಗೆ 6,000 ಮಾಸಿಕ ವೇತನ. ಜತೆಗೆ ತಮ್ಮ ಹಳೆಯ ಅರೆಕಾಲಿಕ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+