ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಆಫ್ರಿಕನ್ ಹಂದಿ ಜ್ವರ: ಕೇರಳದ ವಯನಾಡ್‌ನಲ್ಲಿ ಭೀತಿ

|
Google Oneindia Kannada News

ತಿರುವನಂತಪುರಂ, ಜುಲೈ 26: ವಯನಾಡ್‌ನ ಎರಡು ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದ್ದು ಈ ವೈರಸ್ 44 ಹಂದಿಗಳ ಜೀವವನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್‌ನಲ್ಲಿ ಭೀತಿ ಆವರಿಸಿದೆ. ಪಶು ಸಂಗೋಪನಾ ಇಲಾಖೆಯ ಸೂಚನೆ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಹಂದಿಗಳನ್ನು ಕೊಲ್ಲುವ ಕಾರ್ಯ ಆರಂಭವಾಗಿದೆ. ಜುಲೈ 25 ರ ಹೊತ್ತಿಗೆ, ವಯನಾಡಿನ ಮಾನಂತವಾಡಿ ಪುರಸಭೆ ಮತ್ತು ತವಿಂಜಲ್ ಗ್ರಾಮದ ಐದು ಫಾರ್ಮ್‌ಗಳಲ್ಲಿ 685 ಹಂದಿಗಳನ್ನು ಕೊಲ್ಲಲಾಗಿದೆ.

ಪಶುಸಂಗೋಪನಾ ಇಲಾಖೆಯ ಮುಖ್ಯ ರೋಗ ತನಿಖಾ ಅಧಿಕಾರಿ ಡಾ.ಮಿನಿ ಜೋಸ್ ಅವರ ಪ್ರಕಾರ, ಹಂದಿಗಳನ್ನು ಕೊಲ್ಲುವ ತಂಡ ಆಫ್ರಿಕನ್ ಹಂದಿ ಜ್ವರ ಹರಡಿರುವ 1 ಕಿಮೀ ವ್ಯಾಪ್ತಿಯಲ್ಲಿ ಕಾರ್ಯವನ್ನು ನಿರ್ವಹಿಸಿ ಹಂದಿಗಳನ್ನು ಕೋಮದಿದೆ. ಜೊತೆಗೆ ಪ್ರದೇಶವನ್ನು ಸೋಂಕುರಹಿತಗೊಳಿಸಿದೆ. ''ಎರಡು ತಜ್ಞರ ತಂಡಗಳು ಕಾರ್ಯಾಚರಣೆಯ ಭಾಗವಾಗಿದ್ದವು. ಇವರು ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮವಾಗಿ 24 ಗಂಟೆಗಳ ಕಾಲ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಕೊಲ್ಲಲ್ಪಟ್ಟ ಹಂದಿಗಳನ್ನು ಆಳವಾದ ಗುಂಡಿಗಳಲ್ಲಿ ಹೂಳಲಾಯಿತು'' ಎಂದು ಜೋಸ್ ಹೇಳಿದ್ದಾರೆ.

Breaking: ಮಂಕಿಪಾಕ್ಸ್ ಬಗ್ಗೆ ಅಲರ್ಟ್ ಆಯ್ತು ಯೋಗಿ ಗೌರ್ಮೆಂಟ್! Breaking: ಮಂಕಿಪಾಕ್ಸ್ ಬಗ್ಗೆ ಅಲರ್ಟ್ ಆಯ್ತು ಯೋಗಿ ಗೌರ್ಮೆಂಟ್!

ಹೆಚ್ಚು ಸಾಂಕ್ರಾಮಿಕವಾದ ವೈರಸ್

ಹೆಚ್ಚು ಸಾಂಕ್ರಾಮಿಕವಾದ ವೈರಸ್

ವಯನಾಡ್‌ನಲ್ಲಿ ಹಂದಿ ಸಾಕಣೆ ಕೇಂದ್ರಗಳಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ. ಜಿಲ್ಲೆಯಲ್ಲಿ ಸುಮಾರು 244 ನೋಂದಾಯಿತ ರೈತರು ಪ್ರಸ್ತುತ 4,740 ಹಂದಿಗಳು ಮತ್ತು 6,454 ಹಂದಿಗಳನ್ನು ಮಾಂಸಕ್ಕಾಗಿ ಸಾಕುತ್ತಿದ್ದಾರೆ. ವೈರಲ್ ವೈರಸ್ ಏಕಾಏಕಿ ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ.

ಆದರೆ ಅನಗತ್ಯ ಎಚ್ಚರಿಕೆ ಅಗತ್ಯವಿಲ್ಲ ಎನ್ನುತ್ತಾರೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು. "ಹಂದಿ ಜ್ವರವು ಇತರ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡುವುದಿಲ್ಲವಾದ್ದರಿಂದ ಭಯಪಡುವ ಅಗತ್ಯವಿಲ್ಲ" ಎಂದು ವಯನಾಡ್ ಜಿಲ್ಲೆಯ ಪಶುಸಂಗೋಪನಾ ಅಧಿಕಾರಿ ಡಾ.ರಾಜೇಶ್ ವಿ.ಆರ್. ಹೇಳುತ್ತಾರೆ. ಅವರ ಪ್ರಕಾರ, ರೋಗ ಹರಡುವುದನ್ನು ಮಿತಿಗೊಳಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ''ಒಮ್ಮೆ ಆಫ್ರಿಕನ್ ಹಂದಿ ಜ್ವರವು ಒಂದು ಪ್ರದೇಶದಲ್ಲಿ ವರದಿಯಾದರೆ, ಸೋಂಕಿತ ಪ್ರಾಣಿಗಳನ್ನು ಕೊಲ್ಲುವುದು ಮತ್ತು ಪ್ರದೇಶವನ್ನು ಸೋಂಕುರಹಿತಗೊಳಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಯಾಕೆಂದರೆ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ'' ಎಂದಿದ್ದಾರೆ.

ವಯನಾಡ್‌ನ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ

ವಯನಾಡ್‌ನ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ

ಪಶುಸಂಗೋಪನಾ ಸಚಿವೆ ಜೆ. ಚಿಂಚು ರಾಣಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರವು ಹಂದಿಗಳು ಮತ್ತು ಹಂದಿಮಾಂಸದ ಅಂತರ-ರಾಜ್ಯ ಮಾರಾಟ ಮತ್ತು ಸಾಗಣೆಯನ್ನು ನಿಷೇಧಿಸಿದೆ ಎಂದು ಇಂಡಿಯಾ ಟುಡೇಗೆ ಹೇಳಿದರು. ವಯನಾಡ್‌ನ ಚೆಕ್‌ಪೋಸ್ಟ್‌ಗಳಿಗೆ ಪ್ರಾಣಿಗಳನ್ನು ಸಾಗಿಸುವ ವಾಹನಗಳನ್ನು ಪರೀಕ್ಷಿಸಲು ನಿರ್ದೇಶಿಸಲಾಗಿದೆ ಮತ್ತು ಜಿಲ್ಲೆಯಿಂದ ಹಂದಿಗಳು ಮತ್ತು ಹಂದಿಮಾಂಸವನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

ರೈತರಿಗೆ ಸಹಾಯ ಮಾಡಲು ವಯನಾಡಿನ ಸುರಕ್ಷಿತ ವಲಯಗಳಿಂದ ಹಂದಿಮಾಂಸವನ್ನು ಖರೀದಿಸಲು ಕೂತಟ್ಟುಕುಲಂ ಮೂಲದ ಸಾರ್ವಜನಿಕ ವಲಯದ ಘಟಕವಾದ ಮೀಟ್ ಪ್ರಾಡಕ್ಟ್ಸ್ ಆಫ್ ಇಂಡಿಯಾಕ್ಕೆ ರಾಜ್ಯ ಸರ್ಕಾರವು ನಿರ್ದೇಶಿಸಿದೆ.

2020 ರಲ್ಲಿ ಭಾರತದಲ್ಲಿ ಹಂದಿ ಜ್ವರ ಪತ್ತೆ

2020 ರಲ್ಲಿ ಭಾರತದಲ್ಲಿ ಹಂದಿ ಜ್ವರ ಪತ್ತೆ

ಆಫ್ರಿಕನ್ ಹಂದಿ ಜ್ವರವನ್ನು ಮೊದಲು 1910 ರಲ್ಲಿ ಕೀನ್ಯಾದಲ್ಲಿ ಪತ್ತೆ ಮಾಡಲಾಯಿತು. ಭಾರತದಲ್ಲಿ ಪ್ರಕರಣಗಳು ಮೊದಲ ಬಾರಿಗೆ 2020 ರಲ್ಲಿ ವರದಿಯಾಗಿದೆ. ಕೇಂದ್ರ ಸರ್ಕಾರದ ಇತ್ತೀಚಿನ ಎಚ್ಚರಿಕೆಯ ನಂತರ, ಜುಲೈ ಆರಂಭದಲ್ಲಿ ಕೇರಳವು ಜೈವಿಕ-ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲು ಪ್ರಾರಂಭಿಸಿತು.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು

ಕೊಲ್ಲಲ್ಪಟ್ಟ ಹಂದಿಗಳಿಗೆ ಪ್ರಾಣಿ ತೂಕದ ಪ್ರಕಾರ 2,200 ರಿಂದ 15,000 ರೂ.ಗಳವರೆಗೆ ಪರಿಹಾರವನ್ನು ಘೋಷಿಸಲಾಗಿದೆ. ಹಂದಿಗಳ ನಷ್ಟವು ಅವರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುವುದರಿಂದ ಇದು ಸಾಕಾಗುವುದಿಲ್ಲ ಎಂದು ರೈತರು ಹೇಳುತ್ತಾರೆ. ಏಕೆಂದರೆ ಅವರಲ್ಲಿ ಹಲವರು ಕೋವಿಡ್ ಸಮಯದಲ್ಲಿ ತಮ್ಮ ತೋಟಗಳನ್ನು ಪ್ರಾರಂಭಿಸಿದರು ಮತ್ತು ಇದಕ್ಕಾಗಿ ಸಾಲವನ್ನು ತೆಗೆದುಕೊಂಡಿದ್ದಾರೆ. "ನಾನು ಎದೆಗುಂದಿದ್ದೇನೆ. ನನ್ನ ಜಮೀನಿನಲ್ಲಿ 360 ಹಂದಿಗಳನ್ನು ಕೊಲ್ಲಲಾಯಿತು. ಅವರನ್ನು ಕೊಲ್ಲಬೇಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ನಾನು ಫಾರ್ಮ್ ಸ್ಥಾಪಿಸಲು 1 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದ್ದೇನೆ. ನನ್ನ ಬ್ಯಾಂಕ್ ಸಾಲವನ್ನು ಹೇಗೆ ಮರುಪಾವತಿ ಮಾಡಬೇಕೆಂದು ನನಗೆ ತಿಳಿದಿಲ್ಲ' ಎಂದು ತಾವಿಂಜಾಲ್ ಗ್ರಾಮದ ಹಂದಿ ಸಾಕಾಣಿಕೆದಾರ ಎಂ.ವಿ. ವಿನ್ಸೆಂಟ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅವರಂತೆ ಮಾನಂತವಾಡಿ ಪುರಸಭೆಯಲ್ಲಿ ಹಂದಿ ಸಾಕಾಣಿಕೆ ನಡೆಸುತ್ತಿರುವ ಜಿನಿ ಶಾಜಿ ಆತಂಕಗೊಂಡಿದ್ದಾರೆ. ಈ ವೈರಸ್ ತನ್ನ ಜಮೀನಿನಲ್ಲಿದ್ದ 42 ಹಂದಿಗಳನ್ನು ನಾಶಪಡಿಸಿದೆ. ''ನನ್ನ ಜಮೀನಿಗೆ ವೈರಸ್ ಹೇಗೆ ಹರಡಿತು ಎಂದು ನನಗೆ ತಿಳಿದಿಲ್ಲ. ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ವ್ಯವಸಾಯವೇ ನನ್ನ ಜೀವನೋಪಾಯದ ಏಕೈಕ ಸಾಧನವಾಗಿತ್ತು'' ಎಂದು ಅವರು ಹೇಳಿಕೊಂಡಿದ್ದಾರೆ.

English summary
African swine fever has been reported in two piggery centers in Wayanad and the virus has claimed the lives of 44 pigs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X