• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರ್ ಇಂಡಿಯಾ ವಿಮಾನದಿಂದ ಬಂದಿಳಿದ ಇಬ್ಬರು ಕೊರೊನಾ ಸೋಂಕಿತರು

|

ತಿರುವನಂತಪುರಂ, ಮೇ 9: ಏರ್ ಇಂಡಿಯಾ ವಿಮಾನದಿಂದ ಭಾರತಕ್ಕೆ ಬಂದಿಳಿದ ಇಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

   ಕೊರೊನ ರೋಗಿಗಳಿಗಾಗಿ ಭಾರತೀಯರು ತಯಾರಿಸಿದ ವಿಶೇಷ ಮಂಚ ಹೇಗಿದೆ ನೋಡಿ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಇಂದು ಕೊರೊನಾ ಪತ್ರಿಕಾ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯ ತಿಳಿಸಿದ್ದಾರೆ. ಅಬುಧಾಬಿ ಹಾಗೂ ದುಬೈನಿಂದ ವಾಪಸ್ ಕರೆತಂದ 363 ಜನರಲ್ಲಿ ಇಬ್ಬರು ಭಾರತೀಯರಲ್ಲಿ ಇಬ್ಬರಿಗೆ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದಿದ್ದಾರೆ.

   ಸೋಂಕಿತ ವ್ಯಕ್ತಿಗಳಲ್ಲಿ ಒಬ್ಬರು ಕೊಜ್ಹಿಕೊಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಬ್ಬ ವ್ಯಕ್ತಿ ಕೊಚ್ಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇರಳ ಸರ್ಕಾರ ತಿಳಿಸಿದೆ.

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಈ ಎರಡು ಹೊಸ ಕೊರೊನಾ ಪ್ರಕರಣಗಳಿಂದ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 505ಕ್ಕೆ ಏರಿಕೆಯಾಗಿದೆ. ಈ ಪೈಕಿ 484 ಜನರು ಗುಣಮುಖರಾಗಿದ್ದಾರೆ. 17 ಜನರು ಆಸ್ಪತ್ರೆಯಲ್ಲಿದ್ದಾರೆ. ನಾಲ್ಕು ಮಂದಿ ಮರಣ ಹೊಂದಿದ್ದಾರೆ.

   ''ಕೆಟ್ಟ ಪರಿಸ್ಥಿತಿಗೆ ಸಿದ್ಧರಾಗಿರಿ''- ಕೊರೊನಾ ಬಗ್ಗೆ ಆರೋಗ್ಯ ಸಚಿವರ ಹೇಳಿಕೆ

   ಗುರುವಾರ ಸಹ ಕೊಚ್ಚಿಗೆ ಬಂದ ವಿಮಾನದಲ್ಲಿ 181 ಜನರ ಪೈಕಿ 5 ಜನರಿಗೆ ಪಾಸಿಟಿವ್ ಕಂಡು ಬಂದಿತ್ತು. ಏರ್ ಇಂಡಿಯಾ ವಿಮಾನಗಳ ಜೊತೆಗೆ 698 ಭಾರತೀಯರನ್ನು ಮಾಲ್ಡೀವ್ಸ್‌ನಿಂದ ಕೊಚ್ಚಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಜಲಶ್ವಾ ಮೂಲಕ ಕರೆತರಲಾಗುತ್ತಿದೆ.

   English summary
   Two Indians, who were back in Air India flights that landed in Kerala have tested positive for the COVID-19 virus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X