• search
  • Live TV
ಸಿಡ್ನಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅದಾನಿ ವಿರೋಧಿಸಿ ಸಿಡ್ನಿ ಕ್ರಿಕೆಟ್ ಮೈದಾನಕ್ಕಿಳಿದ ಪ್ರತಿಭಟನೆಗಾರರು

|

ಸಿಡ್ನಿ, ನ. 27: ಸುಮಾರು 268 ದಿನಗಳ ನಂತರ ಏಕದಿನ ಕ್ರಿಕೆಟ್ ಆಡಲು ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಟೀಂ ಇಂಡಿಯಾ ಇಳಿದಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆರಂಭಿಸಿದ್ದು, ಫಿಂಚ್ ಶತಕದ ನೆರವಿನಿಂದ ಬೃಹತ್ ಮೊತ್ತ ದಾಖಲಿಸುತ್ತಿದೆ...

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಮೊದಲ ಪಂದ್ಯದ ಸಂದರ್ಭದಲ್ಲಿ ಮೈದಾನದೊಳಗೆ ಇಬ್ಬರು ಪ್ರತಿಭಟನಾಕಾರರು ಧುಮುಕಿದ ಘಟನೆ ನಡೆದಿದೆ.

ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಯೋಜನೆಗೆ ಮುಂದಾಗಿರುವ ಭಾರತದ ಉದ್ಯಮಿ ಅದಾನಿ ಸಂಸ್ಥೆ ವಿರುದ್ಧ ಪ್ರತಿಭಟನಾ ನಿರತ ಪರಿಸರವಾದಿಗಳು ಎಂದು ತಿಳಿದು ಬಂದಿದೆ.

ಪ್ಲೇಕಾರ್ಡ್ ಹಿಡಿದುಕೊಂಡು ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಮೈದಾನದೊಳಗೆ ಪ್ರವೇಶಿಸಿದ್ದಾರೆ. ಈ ದೃಶ್ಯ ಟಿವಿ ಲೈವ್ ನಲ್ಲಿ ಪ್ರಸಾರ ಮಾಡದೆ ಸೋನಿ ಸಂಸ್ಥೆ ಕಟ್ ಮಾಡಿದೆ. ಆದರೆ, ಸೋನಿ ಲೈವ್ ಅಪ್ಲಿಕೇಷನ್ ನಲ್ಲಿ ಪ್ರಸಾರವಾಗಿದ್ದು, ಟ್ವಿಟ್ಟರಲ್ಲಿ ಚರ್ಚೆ ಆರಂಭವಾಗಿದೆ.

ಸೀಮನ್ಸ್ ಮೇಲೂ ಒತ್ತಡ

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಕಲ್ಲಿದ್ದಲು ಗಣಿ ನಿರ್ಮಿಸುವ ಯೋಜನೆಯನ್ನು ಸ್ಥಗಿತಗೊಳಿಸುವಂತೆ, ವಿಳಂಬ ಮಾಡುವಂತೆ ಅಥವಾ ಅಡ್ಡಿಪಡಿಸುವಂತೆ ಜರ್ಮನಿಯ ಪ್ರಮುಖ ಇಂಜಿನಿಯರಿಂಗ್ ಕಂಪನಿಯಾದ ಸಿಮನ್ಸ್‌ಗೆ ಪರಿಸರವಾದಿಗಳು ಮನವಿ ಮಾಡಿದ್ದಾರೆ.

ಅದಾನಿ ಸಮೂಹದ ಕಾರ್ಮಿಚೆಲ್ ಗಣಿಗೆ 20 ದಶಲಕ್ಷ ಡಾಲರ್ ಮೌಲ್ಯದ ರೈಲ್ವೆ ಮೂಲಸೌಕರ್ಯವನ್ನು ಒದಗಿಸುವ ಗುತ್ತಿಗೆಯಿಂದ ಹಿಂದೆ ಸರಿಯುವಂತೆ ಅವರು ಸಿಮನ್ಸ್‌ಗೆ ಮನವಿ ಮಾಡಿದ್ದಾರೆ.

ಗಣಿಗಾರಿಕೆಯಿಂದ ವಾರ್ಷಿಕವಾಗಿ 8 ರಿಂದ 10 ಮಿಲಿಯನ್ ಟನ್ ಗಳಷ್ಟು ಕಲಿದ್ದಲು ಉತ್ಪಾದನೆ ಹಾಗೂ ಇದರಿಂದ ಹೊರ ಹೊಮ್ಮುವ ಇಂಗಾಲದ ಪ್ರಮಾಣದ ಬಗ್ಗೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿ, ಯುವ ಪರಿಸರವಾದಿ ಗ್ರೇಟಾ ಥನ್ ಬರ್ಗ್ ಕೂಡಾ ವ್ಯಾಪಕ ಪ್ರತಿರೋಧ ಒಡ್ಡುತ್ತಿದ್ದಾರೆ.

ಪ್ಲೇಕಾರ್ಡ್ ನಲ್ಲಿ ಏನಿದೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಸಾಲವನ್ನು ಅದಾನಿಗೆ ನೀಡಬಾರದು ಎಂದು ಅದಾನಿ ವಿರೋಧಿ ಪರಿಸರವಾದಿಗಳು ಪ್ಲೇಕಾರ್ಡ್ ನಲ್ಲಿ NO 1 Billion Adani loan ಎಂದು ಬರೆಯಲಾಗಿದೆ. ಕ್ವೀನ್ಸ್ ಲ್ಯಾಂಡ್ ನಲ್ಲಿ 1500 ಕ್ಕೂ ಅಧಿಕ ಮಂದಿ ಈ ಯೋಜನೆಯಲ್ಲಿ ತೊಡಗಿದ್ದಾರೆ.

English summary
One of the invaders, carrying a placard denouncing India's Adani Group's coal project in Australia, reached close to the pitch just before pacer Navdeep Saini was getting ready to bowl the sixth over of the home team's innings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X