ಸಹೋದ್ಯೋಗಿಗಳ ಮೇಲೆ ಸಿಆರ್‌ಪಿಎಫ್ ಜವಾನನ ಗುಂಡಿನ ದಾಳಿ, 3 ಸಾವು
ಶ್ರೀನಗರ, ಮಾರ್ಚ್ 21 : ಸಹೋದ್ಯೋಗಿಗಳ ಮೇಲೆ ಸಿಆರ್‌ಪಿಎಫ್ ಜವಾನನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು ಮೂವರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಜವಾನ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬುಧವಾರ ರಾತ್ರಿ 10ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಉದಾಮ್‌ಪುರದಲ್ಲಿ ಈ ಘಟನೆ ನಡೆದಿದೆ. 187ನೇ ಬೆಟಾಲಿಯನ್‌ನ ಮೂವರು ಸಿಆರ್‌ಪಿಎಫ್ ಜವಾನರು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದವರನ್ನು ಅಜಿತ್ ಕುಮಾರ್ ಎಂದು ಗುರುತಿಸಲಾಗಿದೆ.
ಉದಾಮ್‌ಪುರದಲ್ಲಿರುವ ಬೆಟಾಲಿಯನ್ ಮುಖ್ಯ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿ ಬಳಿಕ ಅಜಿತ್ ಕುಮಾರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಘಟನೆ ಬಗ್ಗೆ 187ನೇ ಬೆಟಾಲಿಯನ್ ಕಮಾಂಡೆಂಟ್ ಹರಿಂದರ್ ಕುಮಾರ್ ಮಾಹಿತಿ ನೀಡಿದ್ದು, 'ಮೂವರು ಜವಾನರು ಮೃತಪಟ್ಟಿದ್ದಾರೆ' ಎಂದು ಖಚಿತ ಪಡಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ಅಜಿತ್ ಕುಮಾರ್ ಉತ್ತರ ಪ್ರದೇಶ ಮೂಲದವರಾಗಿದ್ದಾರೆ.
J&K: 3 CRPF personnel of 187th battalion shot dead by another jawan at battalion's headquarters in Udhampur's Battal Ballian earlier tonight. Harinder Kumar, Commandant 187th Battalion CRPF says, "3 jawans have died, the one who shot them dead is critically injured." pic.twitter.com/bIhHLOPwQs
— ANI (@ANI) March 20, 2019












Click it and Unblock the Notifications