• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬರಾಮುಲ್ಲ-ಹಂದ್ವಾರ ಹೆದ್ದಾರಿಯಲ್ಲಿ ಸ್ಫೋಟಕ ವಸ್ತುಗಳು ಪತ್ತೆ: ಆತಂಕ

|

ಬರಾಮುಲ್ಲ, ಜೂನ್ 9: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಕಾಟ ಹೆಚ್ಚಾಗಿದೆ. ಬರಾಮುಲ್ಲಾ-ಹಂದ್ವಾರ ಹೆದ್ದಾರಿಯಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಿ ಉಗ್ರರು ನಾಪತ್ತೆಯಾಗಿದ್ದಾರೆ.

   Amit Shah : Government may have made a mistake while dealing with Corona.! | Narendra Modi | BJP

   ರೋಡ್ ಓಪನಿಂಗ್ ಪಾರ್ಟಿ (ಆರ್ಒಪಿ) ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

   ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್: 5 ಉಗ್ರರ ಸಾವು

   ಈ ಹಿಂದೆ ಕೂಡ ಭದ್ರತಾ ಪಡೆಗಳು ಪುಲ್ವಾಮದಲ್ಲಿ ನಡೆಯಬೇಕಿದ್ದ ದೊಡ್ಡ ವಿಧ್ವಂಸಕ ಕೃತ್ಯವೊಂದನ್ನು ವಿಫಲಗೊಳ್ಳುವಂತೆ ಮಾಡಿತ್ತು. ವಾಹನವೊಂದಲ್ಲಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 20ಕೆಜಿಗೂ ಅಧಿಕ ತೂಕದ ಸುಧಾರಿತ ಸ್ಫೋಟಕ ಸಾಧನಗಳನ್ನು ಭದ್ರತಾಪಡೆಗಳು ವಶಕ್ಕೆ ಪಡೆದುಕೊಂಡಿದ್ದರು.

   ಇದೀಗ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಜಮ್ಮು ಕಾಶ್ಮೀರದಲ್ಲಿ 24 ಗಂಟೆಗಳಲ್ಲಿ 9 ಮಂದಿ ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ. ಭಾನುವಾರ ಐವರು ಹಾಗೂ ಸೋಮವಾರ ನಾಲ್ವರು ಉಗ್ರರನ್ನು ಸದೆಬಡಿದಿದೆ. ಒಂದೆಡೆ ಚೀನಾದೊಂದಿಗೆ ಗಡಿ ವಿವಾದ ಏರ್ಪಟ್ಟಿದೆ.

   ಇನ್ನೊಂದೆಡೆ ಪಾಕಿಸ್ತಾನದಿಂದ ಉಗ್ರರು ನುಸುಳುತ್ತಿದ್ದಾರೆ. ಅವರೆಲ್ಲರ ಸದೆಬಡಿಯುವನ್ನು ಸೇನೆ ಸಫಲವಾಗಿದೆ. ಇದೀಗ ಸ್ಫೋಟಕ ಪತ್ತೆಯಾಗಿದೆ.

   English summary
   Road Opening Party personnel have found suspected explosive material in an orchard along Baramulla-Handwara highway, said the Jammu and Kashmir police.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X