ಜಮ್ಮು ಮತ್ತು ಕಾಶ್ಮೀರ: ಶಾರ್ಟ್ ಸರ್ಕ್ಯೂಟ್‌ನಿಂದ ಯೋಧ ನಿಧನ
ವಿಜಯಪುರ, ಆಗಸ್ಟ್ 31: ಜಮ್ಮು ಮತ್ತು ಕಾಶ್ಮೀರದ ಗಡಿ ಭದ್ರತಾ ಪಡೆಯಲ್ಲಿ ಎಲೆಕ್ಟ್ರಿಕ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರದ ಯೋಧ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೃತಪಟ್ಟಿದ್ದಾರೆ.
ಜಗನ್ನಾಥ ಬಡಿಗೇರ ಅವರು 9 ವರ್ಷಗಳ ಹಿಂದೆ ಬಿಎಸ್ಎಫ್ ಗೆ ಸೇರಿದ್ದರು. ಇನ್ನು ಕಳೆದ ವರ್ಷವಷ್ಟೆ ತಾಳಿಕೋಟೆ ತಾಲೂಕಿನ ತುಂಬಗಿಯ ಪುಷ್ಪಾ ಅವರನ್ನು ವಿವಾಹವಾಗಿದ್ದರು.
ವಿಜಯಪುರದ ಸಮೀಪದ ಬಸರಕೋಡ ಗ್ರಾಮದ ಯೋಧ 30 ವರ್ಷ ಶಿವಾನಂದ ಜಗನ್ನಾಥ ಬಡಿಗೇರ ಅವರು ಶಾರ್ಟ್ ಸರ್ಕ್ಯೂಟ್ ನಿಂದ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಜಗನ್ನಾಥ ಬಡಿಗೇರ ಸಾವಿನ ಸುದ್ಧಿ ಕೇಳಿ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಂಗಳವಾರ ಇಲ್ಲವೇ ಬುಧವಾರ ಮೃತನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರಲಿರುವುದಾಗಿ ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಮೃತನ ಕುಟುಂಬಕ್ಕೆ ಕರೆಮಾಡಿ ತಿಳಿಸಿದ್ದಾರೆ ಎಂದು ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನ ಅಮಿತಿ ಅಧ್ಯಕ್ಷ ಕೆ.ವೈ.ಬಿರಾದಾರ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.












Click it and Unblock the Notifications