ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮೂವರು ಪಿಡಿಪಿ ನಾಯಕರ ರಾಜೀನಾಮೆ: ಮೆಹಬೂಬಾ ಮುಫ್ತಿಗೆ ಹಿನ್ನಡೆ

|
Google Oneindia Kannada News

ಶ್ರೀನಗರ, ನವೆಂಬರ್ 26: ಮತ್ತೆ ಮೂವರು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ನಾಯಕರು ರಾಜೀನಾಮೆ ನೀಡಿದ್ದು, ಮೆಹಬೂಬಾ ಮುಫ್ತಿಗೆ ಆತಂಕ ಉಂಟಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಉದ್ವಿಗ್ನತೆಯ ನಡುವೆ ಮೆಹಬೂಬಾ ಮುಫ್ತಿಯವರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಕ್ಕೆ(ಪಿಡಿಪಿ) ದೊಡ್ಡ ಹಿನ್ನೆಡೆಯಾಗಿದೆ.

ಗುಪ್ಕರ್ ಗ್ಯಾಂಗ್: ಬಿಜೆಪಿಯದ್ದು ಒಡೆದು ಆಳುವ ನೀತಿ ಎಂದ ಮುಫ್ತಿ ಗುಪ್ಕರ್ ಗ್ಯಾಂಗ್: ಬಿಜೆಪಿಯದ್ದು ಒಡೆದು ಆಳುವ ನೀತಿ ಎಂದ ಮುಫ್ತಿ

ಕೋಮುವಾದಿ ಅಂಶಗಳು ಪಕ್ಷವನ್ನು ಆವರಿಸಿಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಪಕ್ಷವನ್ನು ತೊರೆಯುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ಮೂವರೂ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Setback For Mehbooba Mufti As Three More Senior PDP Leaders Resign

ಪಿಡಿಪಿಯ ಮೂರು ನಾಯಕರು ಪಕ್ಷದಿಂದ ಹೊರನಡೆದಿದ್ದಾರೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕರಾದ ಧಮನ್ ಭಾಸಿನ್, ಫಲ್ಲೈಲ್ ಸಿಂಗ್ ಮತ್ತು ಪ್ರೀತಮ್ ಕೊತ್ವಾಲ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ಒಂದು ತಿಂಗಳ ಹಿಂದಷ್ಟೇ ಮೂವರು ನಾಯಕರು ರಾಜೀನಾಮೆ ನೀಡಿದ್ದು, ಮುಫ್ತಿ ಅವರ ಹೇಳಿಕೆ ದೇಶಭಕ್ತಿಯ ಭಾವನೆಗೆ ಘಾಸಿ ಉಂಟು ಮಾಡಿದೆ ಎಂದು ಹೇಳಿದ್ದರು.

ಪಿಡಿಪಿ ನಾಯಕರಾದ ಡಿಎಸ್ ಬಜ್ವಾ, ವೇದ್ ಮಹಾಜನ್, ಹುಸೈನ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಅಕ್ಟೋಬರ್ 23 ರಂದು ಮೆಹಬೂಬಾ ಮುಫ್ತಿ, ರಾಜ್ಯ ಧ್ವಜವನ್ನು ಮತ್ತೆ ತರಲಾಗುವುದು ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರು ಸ್ಥಾಪಿಸಲು ಹೋರಾಟ ಮಾಡುವುದಾಗಿ ತಿಳಿಸಿದ್ದರು.

English summary
In a major setback for Peoples Democratic Party (PDP) chief Mehbooba Mufti, three more founding leaders - Dhaman Bhasin, Fallail Singh, and Pritam Kotwal - resigned from the party on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X